ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವನಬಾಗೇವಾಡಿ | ರಸ್ತೆ ಅಪಘಾತ: ಇಬ್ಬರು ಸಾವು

Published 9 ಜುಲೈ 2024, 16:02 IST
Last Updated 9 ಜುಲೈ 2024, 16:02 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ಪಟ್ಟಣದಿಂದ ಇಂಗಳೇಶ್ವರ ಗ್ರಾಮದ ಬಳಿ ಕಾರೊಂದು ರಸ್ತೆ ಬದಿಯಲ್ಲಿರುವ ಪೂಟ್ ಕಟ್ಟೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟು ಮೂವರು ಗಾಯಗೊಂಡ ಘಟನೆ ಜರುಗಿದೆ.

ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದರು. ಕಾರು ಚಲಾಯಿಸುತ್ತಿದ್ದ ಇಂಗಳೇಶ್ವರ ಗ್ರಾಮದ ಪ್ರಶಾಂತ ಮಹಾದೇವಪ್ಪ ಮಿಣಜಗಿ (28), ಮಲ್ಲಿಕಾರ್ಜುನ ಮಾಳಪ್ಪ ಡೋಳಗೊಂಡ (30) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇದೇ ಗ್ರಾಮದ ವಿಜಯಕುಮಾರ ಮಲಪ್ಪ ದಳವಾಯಿ, ಮಾಳಪ್ಪ ಲಗಮಣ್ಣ ತೆಲಗಿ, ರೇವಣಸಿದ್ದಪ್ಪ ಭೀಮರಾಯ ಶೇಖಣ್ಣಿ ಗಾಯಗೊಂಡಿದ್ದಾರೆ. ರೇವಣಸಿದ್ದಪ್ಪ ಶೇಖಣ್ಣಿ ಗಂಭೀರ ಗಾಯಗೊಂಡಿದ್ದು. ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಪಿಐ ವಿಜಯ ಮುರಗುಂಡಿ ಭೇಟಿ ನೀಡಿ ಪರಿಶೀಲಿಸಿದರು. ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT