ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಹಿಪ್ಪರಗಿ: ಸರಣಿ ಕಳ್ಳತನ, ಆತಂಕದಲ್ಲಿ ವ್ಯಾಪಾರಸ್ಥರು

Published 2 ಜೂನ್ 2023, 13:11 IST
Last Updated 2 ಜೂನ್ 2023, 13:11 IST
ಅಕ್ಷರ ಗಾತ್ರ

ದೇವರಹಿಪ್ಪರಗಿ: ಪಟ್ಟಣದಲ್ಲಿ ಗುರುವಾರ ರಾತ್ರಿ ಹಸನ್ ವಡ್ಡೋಡಗಿ ಮಾಲೀಕತ್ವದ ಸೂಪರ್ ಬಜಾರ್ ಹಾಗೂ ಬಸವರಾಜ್ ಮೆಟಗಾರ ಅವರ ಬಸವ ಕಿರಾಣಿ ಸ್ಟೋರ್ಸ್‌ಗಳ ಚಾವಣಿಯ ಪತ್ರಾಸ್‌ಗಳನ್ನು ಕಳ್ಳರು ಕೊರೆದು ಒಳಗಡೆ ಇಳಿದು ಒಟ್ಟು ₹ 35 ಸಾವಿರ ನಗದು  ಸೇರಿದಂತೆ ಅಗತ್ಯ ಸಾಮಾನುಗಳನ್ನು ದೋಚಿ ಪರಾರಿಯಾಗಿದ್ದಾರೆ. 

ಇಂತಹ 10ಕ್ಕೂ ಹೆಚ್ಚು ಪ್ರಕರಣಗಳು ಕಳೆದ 3 ತಿಂಗಳುಗಳಲ್ಲಿ ನಡೆದಿವೆ, ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೂ ಕಳ್ಳರ ಕೈಚಳಕ ನಿಂತಿಲ್ಲ. ಇದರಿಂದ  ವ್ಯಾಪಾರ ಮಳಿಗೆಗಳ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ.

ಪಟ್ಟಣದ ಸುರೇಶ ಕೊಣ್ಣೂರ ಎಂಬುವವರಿಗೆ ಸೇರಿದ ಕಿರಾಣಿ ಅಂಗಡಿಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 3 ಬಾರಿ ಕಳ್ಳತನವಾಗಿದೆ. ಮೊದಲ ಬಾರಿ ಅಂಗಡಿಯ ಕೀಲಿ ಮುರಿದು ಕೇವಲ ₹150, ಎರಡನೇ ಬಾರಿ ₹ 49ಸಾವಿರ ಮೌಲ್ಯದ ಸಿಗರೇಟ್, ಗುಟಕಾ ಹಾಗೂ ₹ 20 ಸಾವಿರ ನಗದು ದೋಚಿದ್ದರು. ಮೂರನೇ ಬಾರಿ ₹ 38 ಸಾವಿರ ಮೌಲ್ಯದ ಸಿಗರೇಟ್, ಆರ್‌ಎಂಡಿ ಗುಟಕಾಗಳನ್ನು ಕದ್ದಿದ್ದರು.

ನಂತರ ಕಾಶೀನಾಥ ಸಾಲಕ್ಕಿ ಒಡೆತನದ ಮೆಡಿಕಲ್ಸ್ ಶಟರ್ ಮುರಿದು ₹ 10 ಸಾವಿರ ನಗದು ಎಗರಿಸಿದ್ದರು. ಹೀಗೆ ಪಟ್ಟಣದಲ್ಲಿ ಕಳ್ಳತನದ ಸರಣಿ ಮುಂದುವರೆದು ಅಂಗಡಿಗಳನ್ನು ದರೋಡೆ ಮಾಡಲಾಗುತ್ತಿದ್ದರೂ ಪೊಲೀಸ್ ಇಲಾಖೆ ಮಾತ್ರ ದೂರುಗಳನ್ನು ದಾಖಲಿಸಿಕೊಂಡು ಕಳ್ಳರನ್ನು  ಹಿಡಿಯುವಲ್ಲಿ ವಿಫಲವಾಗಿದೆ ಎನ್ನುತ್ತಾರೆ ಅಂಗಡಿಗಳ ಮಾಲೀಕರು.

ಕಳ್ಳರನ್ನು ಬಂಧಿಸಿ ವ್ಯಾಪಾರಸ್ಥರ ಭಯ ಹೋಗಲಾಡಿಸುವಂತೆ ವ್ಯಾಪಾರಸ್ಥರ ಸಂಘದ ಮಹೇಶ ಬುದ್ನಿ, ಚಿನ್ಮಯ ಕೋರಿ, ಕೆ.ಎ.ಸಾಲಕ್ಕಿ, ಬಸವರಾಜ ತಾಳಿಕೋಟಿ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT