ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನ ಜ್ಯೋತಿ ಬೆಳಗಿದ ಸಿದ್ಧೇಶ್ವರ ಶ್ರೀ: ಸಿದ್ದಲಿಂಗ ಸ್ವಾಮೀಜಿ

Published 27 ಫೆಬ್ರುವರಿ 2024, 5:01 IST
Last Updated 27 ಫೆಬ್ರುವರಿ 2024, 5:01 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ‘ಸಿದ್ಧೇಶ್ವರ ಶ್ರೀ ಬಸವಣ್ಣನವರ ಕಾಯಕ, ದಾಸೋಹದ ಪರಿಕಲ್ಪನೆಯನ್ನು ಜಗತ್ತಿನಾದ್ಯಂತ ಪಸರಿಸುವ ಕಾರ್ಯ ಮಾಡುವುದರೊಂದಿಗೆ ಜ್ಞಾನದ ಜ್ಯೋತಿ ಬೆಳಗಿಸಿದ್ದಾರೆ’ ಎಂದು ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದ ಬಸವೇಶ್ವರ ದೇವಸ್ಥಾನದ ಮುಂಭಾಗ ಮಂಗಳವಾರ ಸಿದ್ಧೇಶ್ವರ ಶ್ರೀ ಪ್ರವಚನ ಸೇವಾ ಸಮಿತಿ ಹಮ್ಮಿಕೊಂಡಿದ್ದ ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ರಾಜ್ಯ ಸಹಕಾರಿ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ‘ಸಿದ್ಧೇಶ್ವರ ಶ್ರೀ ತಮ್ಮ ಪ್ರವಚನದ ಮೂಲಕ ಸಮಾಜದಲ್ಲಿರುವ ಅನೇಕ ಮೌಢ್ಯಗಳನ್ನು ಹೋಗಲಾಡಿಸಿ, ಸುಂದರ ಬದುಕು ಕಟ್ಟಿಕೊಳ್ಳುವ ಜ್ಞಾನದ ಜ್ಯೋತಿಯನ್ನು ಬಿತ್ತರಿಸುವ ಕಾರ್ಯ ಮಾಡಿದ ಮಹಾನ್ ಸಂತರಾಗಿದ್ದರು’ ಎಂದು ಹೇಳಿದರು.

ಮುಖಂಡರಾದ ಸಂಗಣ್ಣ ಕಲ್ಲೂರ, ಶೇಖರ ಗೊಳಸಂಗಿ, ಅನಿಲ ಅಗರವಾಲ, ಸುಭಾಸ ಚಿಕ್ಕೊಂಡ, ಬಬಲು ಅಗರವಾಲ, ಅಶೋಕ ಕಲ್ಲೂರ, ಎಸ್.ಎಸ್.ಹಿರೇಮಠ, ರಮೇಶ ಯಳಮೇಲಿ, ಶೇಖಪ್ಪ ನಾಯ್ಕೋಡಿ, ಬಸವರಾಜ ಗೊಳಸಂಗಿ ಸೇರಿದಂತೆ ಅನೇಕರು ಇದ್ದರು.

ಪಟ್ಟಣದ ಗಣಪತಿ ವೃತ್ತ, ಕಿತ್ತೂರರಾಣಿ ಚನ್ನಮ್ಮ ವೃತ್ತ ಸೇರಿದಂತೆ ವಿವಿಧೆಡೆ ಸಂಘಟನೆಗಳ ಸದಸ್ಯರು ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ  ಗುರುನಮನ ಸಲ್ಲಿಸಿದರು.

ಮನಗೂಳಿ ವರದಿ:

ತಾಲ್ಲೂಕಿನ ಮನಗೂಳಿಯ ಹನುಮಾನ ಮಂದಿರದಲ್ಲಿ ಮಂದಿರದ ಕಮಿಟಿ ಸದಸ್ಯರು ಸೇರಿದಂತೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಜನರು ಸಿದ್ಧೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗುರುನಮನ ಸಲ್ಲಿಸಿದರು.

ಗುರುನಮನ ಕಾರ್ಯಕ್ರಮದ ಅಂಗವಾಗಿ ಗೀತ ಗಾಯನ, ಭಜನೆ, ಕವನ ವಾಚನ, ದೀಪೋತ್ಸವ ನಡೆಯಿತು. ಬಸವರಾಜ ಕೊಟ್ಯಾಳ, ಸುಭಾಸ ಲೆಸಪ್ಪಗೋಳ, ಶಿವಾಜಿ ಮೋರೆ, ಶ್ರೀಶೈಲ ಅಲಗೊಂಡ, ರಮೇಶ ಕೆಂಗನಗುತ್ತಿ, ಅಡವಯ್ಯ ವಿಭೂತಿ, ಶಾಂತಯ್ಯ ಮಠಪತಿ, ಸುಭಾಸ ಬಿರಾದಾರ, ಸದಾನಂದ ಹೊಸಮನಿ, ಮುತ್ತು ತೇಲಿ, ಸದಾಶಿವ ಮುತ್ತಪ್ಪನವರ ಇದ್ದರು.

ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿಯಲ್ಲಿ ಸಿದ್ಧೇಶ್ವರ ಶ್ರೀಗಳಿಗೆ ಗುರುನಮನ ಸಲ್ಲಿಸಲಾಯಿತು  
ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿಯಲ್ಲಿ ಸಿದ್ಧೇಶ್ವರ ಶ್ರೀಗಳಿಗೆ ಗುರುನಮನ ಸಲ್ಲಿಸಲಾಯಿತು  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT