ಸಿಂದಗಿ: ತಾಲ್ಲೂಕಿನ ಗಣಿಹಾರ ಗ್ರಾಮದಲ್ಲಿ ಮಂಗಳವಾರ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಕಡಿದು ಕೊಲೆ ಮಾಡಿದ್ದಾನೆ.

ನೀಲಮ್ಮ ಆನಗೊಂಡ(46) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಆಕೆಯ ಪತಿ ಪರಮಾನಂದ ಹರಿತವಾದ ಆಯುಧದಿಂದ ಕತ್ತರಿಸಿ, ಬಾವಿಗೆ ಎಸೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

‘ಅಪ್ಪ–ಅಮ್ಮ ಸಣ್ಣಪುಟ್ಟ ವಿಚಾರಕ್ಕೆ ಜಗಳವಾಡುತ್ತಿದ್ದರು. ನಿನ್ನೆ ದಿನ ನಿನ್ನನ್ನು ಮುಗಿಸೇ ತೀರುತ್ತೇನೆ ಎಂದು ಬೈದಾಡಿ ಮನೆಯಿಂದ ಅಪ್ಪ ಹೊರಗೆ ಹೋಗಿದ್ದನು’ ಎಂದು ಮೃತಳ ಪುತ್ರ ಷಣ್ಮುಖ ಪೊಲೀಸರಿಗೆ ದೂರು ನೀಡಿದ್ದಾರೆ.

‘ನಿನ್ನೆ ರಾತ್ರಿ ಎಲ್ಲರೂ ಮಲಗಿದ್ದಾಗ ನೀಲಮ್ಮ ಜಮೀನಿನಲ್ಲಿನ ಮೆಕ್ಕೆಜೋಳಕ್ಕೆ ಹಂದಿಗಳ ಹಾವಳಿ ಇರುವುದರಿಂದ ಪಟಾಕಿ ಸಿಡಿಸಲು ಹೋದ ಸಂದರ್ಭದಲ್ಲಿ ಅವಳ ಬೆನ್ನತ್ತಿ ಹೋದ ಗಂಡ ಪರಮಾನಂದ ಅವಳನ್ನು ಕತ್ತರಿಸಿ ಬಾವಿಗೆ ಎಸೆದಿದ್ದಾನೆ. ಮಂಗಳವಾರ ಬೆಳಿಗ್ಗೆ ಮಗ ತಾಯಿಯನ್ನು ಹುಡುಕುತ್ತ ಹೋದಾಗ ಪಕ್ಕದ ಬಾವಿಯ ಬಳಿ ರಕ್ತದ ಕಲೆಗಳನ್ನು ಕಂಡು ಬಾವಿಯಲ್ಲಿ ಹುಡುಕಿದಾಗ ದೇಹದ ಅರ್ಧ ಭಾಗ ಸಿಕ್ಕಿದೆ. ದೇಹದ ಇನ್ನರ್ಧ ಭಾಗದ ಹುಡುಕಾಟ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.