ಸೋಲಾಪುರ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಶೇ 26ರಷ್ಟು ಅಧಿಕ ಮಳೆಯಾಗಿದೆ. ಜಿಲ್ಲೆಯಲ್ಲಿ ಜುಲೈ ತಿಂಗಳಿನಲ್ಲಿ ವಾಡಿಕೆಯಂತೆ 9.48 ಮಿ.ಮೀ ಮಳೆ ಸುರಿಯಬೇಕಿತ್ತು. ಆದರೆ, 11.9 ಸೆಂ.ಮೀ. ಮಳೆ ಸುರಿದಿದೆ. ಇದರಿಂದ ಉಜಿನಿ ಅಣೆಕಟ್ಟಿನಲ್ಲಿ ಜುಲೈ ತಿಂಗಳನಲ್ಲಿಯೇ ನೀರಿನ ಸಂಗ್ರಹ ಶೇ75ರಷ್ಟು ಹೆಚ್ಚಳವಾಗಿದೆ.

ಜಿಲ್ಲೆಯಲ್ಲಿ ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು ಮಳೆ ಬರ್ಸಿ ತಾಲ್ಲೂಕಿನಲ್ಲಿ ದಾಖಲಾಗಿದ್ದು, 20.9 ಸೆಂ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಅತಿ ಕಡಿಮೆ ಮಳೆ ಮಾಹಸಿರಸ ತಾಲ್ಲೂಕಿನಲ್ಲಿ ದಾಖಲಾಗಿದ್ದು, 7.2 ಸೆಂ.ಮೀ. ಮಳೆಯಾಗಿದೆ. ಮೇ ತಿಂಗಳಿನಲ್ಲಿ ಉಜಿನಿ ಆಣೆಕಟ್ಟಿನಲ್ಲಿ ಡೆಡ್ ಸ್ಟೋರೇಜ್‌ದಲ್ಲಿದ್ದ ನೀರಿನ ಸಂಗ್ರಹ ಸತತ ಮಳೆಯಿಂದಾಗಿ ಸದ್ಯ ಶೇ 67.73ಕ್ಕೆ ತಲುಪಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 4.2 ಸೆಂ.ಮೀ ನಷ್ಟು ಮಳೆ ಅಧಿಕವಾಗಿದೆ. ಕಳೆದ ವರ್ಷ ಜೂನ್ ಮತ್ತು ಜುಲೈ ತಿಂಗಳಲ್ಲಿ 37.3 ಸೆಂ.ಮೀ ಮಳೆಯಾಗಿದ್ದರೆ, ಈ ವರ್ಷ 4.15 ಸೆಂ.ಮೀ. ಮಳೆಯಾಗಿದೆ.

ಕಳೆದ ವರ್ಷ ಮಳೆಯಾಗುವ ನಿರೀಕ್ಷೆಯಿಂದ ಆಣೆಕಟ್ಟಿನಿಂದ ನೀರು ಹೊರ ಬಿಡಲಾಗಿತ್ತು. ನಂತರ ಬರಗಾಲ ಪರಿಸ್ಥಿತಿ ಎದುರಿಸುವಂತಾಗಿತ್ತು. ಈ ವರ್ಷ ಕಳೆದ ವರ್ಷದ ಪರಿಸ್ಥಿತಿ ನಿರ್ಮಾಣವಾಗಬಾರದು ಎನ್ನುವ ಉದ್ದೇಶದಿಂದ ವಿಶೇಷ ಕಾಳಜಿ ವಹಿಸಿ ಉಜಿನಿ ಅಣೆಕಟ್ಟು ಶೇ 100ರಷ್ಟು ತುಂಬಿದ ನಂತರ ನೀರು ಹೊರ ಬಿಡಲಾಗುವುದು ಜಿಲ್ಲಾಡಳಿತ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.