ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ಕಾರ್ಖಾನೆಯ ಚುನಾವಣೆ: ಯಶವಂತರಾಯಗೌಡರ ಬಣಕ್ಕೆ ಭರ್ಜರಿ ಗೆಲುವು

ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆ
Published 11 ಫೆಬ್ರುವರಿ 2024, 16:23 IST
Last Updated 11 ಫೆಬ್ರುವರಿ 2024, 16:23 IST
ಅಕ್ಷರ ಗಾತ್ರ

ಇಂಡಿ: ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ನೇತೃತ್ವದ ಬಣ ಭರ್ಜರಿ ಜಯ ಸಾಧಿಸಿದೆ. ಕಣದಲ್ಲಿದ್ದ ಎಂಟು ಅಭ್ಯರ್ಥಿಗಳು ಅತ್ಯಧಿಕ ಮತ ಪಡೆದು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ‘ಅ’ ವರ್ಗದಿಂದ ಶಾಸಕ ಯಶವಂತರಾಯಗೌಡ ಪಾಟೀಲ ಅವರ ನೇತೃತ್ವದ ಬಣದ ಅಭ್ಯರ್ಥಿಗಳಾದ ಬಸವರಾಜ ಧನಶ್ರೀ 1475, ಮಲ್ಲನಗೌಡ ಪಾಟೀಲ 1615, ಯಶವಂತರಾಯಗೌಡ ಪಾಟೀಲ 1716, ರೇವಗೊಂಡಪ್ಪ ಪಾಟೀಲ 1560 ಮತ್ತು ಸಿದ್ದಣ್ಣ ಬಿರಾದಾರ 1485 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಮಹಿಳಾ ಮೀಸಲು ಸ್ಥಾನಕ್ಕಿದ್ದ ಎರಡು ಸ್ಥಾನಗಳಿಗೆ ಸ್ಪರ್ಧಿಸಿದ್ದ ಲಲಿತಾ ನಡಗೇರಿ 1481 ಮತ್ತು ಸರೋಜಿನಿ ಪಾಟೀಲ 1,356 ಮತಗಳನ್ನು ಪಡೆದು ವಿಜಯಶಾಲಿಗಳಾಗಿದ್ದಾರೆ.

ಪರಿಶಿಷ್ಟ ಜಾತಿಯ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ್ದ ಅಶೋಕ ಗಜಾಕೋಶ ಅವರಿಗೆ 1,424 ಮತಗಳು ಲಭಿಸಿವೆ. ಎಲ್ಲ 8 ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ‘ಅ’ ವರ್ಗಕ್ಕೆ ಸ್ಪರ್ಧೆ ಮಾಡಿದ್ದ ಚಂದ್ರಕಾಂತ ಬಸಣ್ಣ ಬೋರಗಿ ಅವರಿಗೆ 80, ನಾಗನಾಥ ಮಹಾದೇವಪ್ಪ ಬಿರಾದಾರ ಅವರಿಗೆ 301 ಮತ್ತು ಡಾ. ಸಾರ್ವಭೌಮ ಸಾತಗೌಡ ಬಗಲಿ ಅವರು 400 ಮತಗಳನ್ನು ಪಡೆದುಕೊಂಡು ಪರಾಭವಗೊಂಡಿದ್ದಾರೆ.

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಮುತ್ತಪ್ಪ ಪೋತೆ ಅವರಿಗೆ 314 ಮತಗಳು, ಮಹಿಳಾ ಮೀಸಲು ಸ್ಥಾನದಿಂದ ಸ್ಪರ್ಧಿಸಿದ್ದ ದಾನಮ್ಮ ಬಿರಾದಾರ ಅವರಿಗೆ 441 ಮತಗಳು ಬಿದ್ದು, ಪರಾಭವಗೊಂಡಿದ್ದಾರೆ.

ವಿಜಯೋತ್ಸವ:

ಭೀಮಾಶಂಕರ ಸಕ್ಕರೆ ಕಾರ್ಖಾನೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರ ಬಣದ ಅಭ್ಯರ್ಥಿಗಳು ವಿಜಯ ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪರಸ್ಪರ ಗುಲಾಲ್‌ ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಶಾಸಕ ಯಶವಂತರಾಯಗೌಡ ಪಾಟೀಲರು ಕಾರ್ಖಾನೆಯಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಅವರನ್ನು ಎತ್ತಿ, ಕುಣಿದು ಕುಪ್ಪಳಿಸಿದರು. ಜೆಸಿಬಿದಿಂದ ಪುಷ್ಪಾರ್ಚನೆ ಮಾಡಿದರು.

ಪಾಪು ಕಿತ್ತಲಿ, ಮಂಜು ಕಾಮಗೊಂಡ, ಸತೀಶ ಕುಂಬಾರ, ಇಲಿಯಾಸ್‌ ಬೋರಾಮಣಿ, ಜಾವೀದ್ ಮೋಮಿನ್, ಶಿವಕುಮಾರ ಬಿಸನಾಳ, ಅವಿನಾಶ ಬಗಲಿ, ಧನರಾಜ ಮುಜಗೊಂಡ, ಧರ್ಮು ವಾಲೀಕಾರ, ಹುಚ್ಚಪ್ಪ ತಳವಾರ, ಪ್ರಶಾಂತ ಕಾಳೆ, ಸಂತೋಶ ಪರಸೇನವರ, ಮಹೇಶ ಹೊನ್ನಬಿಂದಗಿ, ರುದ್ರು ಅಲಗೊಂಡ, ಸತೀಶ ಹತ್ತಿ, ರಮೇಶ ಕಲ್ಯಾಣಿ, ಚಂದ್ರಶೇಖರ ರೂಗಿ, ಅಯೂಬ್‌ ಬಾಗವಾನ, ಮುಸ್ತಾಕ ಇಂಡೀಕರ್, ಜೀತಪ್ಪ ಕಲ್ಯಾಣಿ, ನೀಲಕಂಠಗೌಡ ಪಾಟೀಲ, ರಾಜು ಕುಲಕರ್ಣಿ, ಸಂದೇಶ ಗಲಗಲಿ ಇದ್ದರು.

ಬಗಲಿಗೆ ಮುಖಭಂಗ:

ಕಾರ್ಖಾನೆ ಚುನಾವಣೆಯಲ್ಲಿ ಡಾ.ಸಾರ್ವಭೌಮ ಬಗಲಿ ಅವರ ಬಣದ ಒಬ್ಬರೂ ಆಯ್ಕೆಯಾಗದ ಹಿನ್ನೆಲೆಯಲ್ಲಿ ಮಾಜಿ ಶಾಸಕರಿಗೆ ತೀವ್ರ ಮುಖಭಂಗವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT