ವಿಜಯಪುರ: ಇಂಡಿ ತಾಲ್ಲೂಕಿನ ಅರ್ಜುಣಗಿ ಗ್ರಾಮದಲ್ಲಿ ಡಿಸೆಂಬರ್ 12ರಂದು ಏರ್ಪಡಿಸಲಾಗಿದ್ದ ‘ಮುಧೋಳ ನಾಯಿ’(ಗ್ರೇಹೌಂಡ್) ಓಟದ ಸ್ಪರ್ಧೆ ವಿರುದ್ಧ ಪೆಟಾ (ಪಿಇಟಿಎ) ಇಂಡಿಯಾ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು, ನಾಯಿ ಓಟದ ಸ್ಪರ್ಧೆಯನ್ನು ನಿಲ್ಲಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ನಾಯಿ ಓಟದ ಸ್ಪರ್ಧೆ ಏರ್ಪಡಿಸಿರುವ ಕುರಿತು ಡಿವೈಎಸ್ಪಿ ಜಗದೀಶ್ ಎಚ್.ಎಸ್. ಅವರು ತಮ್ಮ ಸಿಬ್ಬಂದಿ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ, ಸ್ಪರ್ಧೆ ನಡೆಯುವುದನ್ನು ತಡೆದಿದ್ದಾರೆ ಎಂದು ಪೇಟಾ ಇಂಡಿಯಾ ತಿಳಿಸಿದೆ.

‘ಸ್ಪರ್ಧೆಯಲ್ಲಿ ನಾಯಿಗಳಿಗೆ ವೇಗವಾಗಿ ಓಡುವಂತೆ ಹಿಂಸೆ ನೀಡಲಾಗುತ್ತದೆ. ಆಯಾಸ, ಒತ್ತಡಕ್ಕೆ ಒಳಗಾಗುವ ನಾಯಿಗಳಿಗೆ ಗಾಯಗಳಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಸಾವಿಗೆ ಈಡಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಸ್ಪರ್ಧೆಯನ್ನು ತಡೆಯುವಲ್ಲಿ ಪೇಟಾ ಯಶಸ್ವಿಯಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.