ತಾಳಿಕೋಟೆ: ‘ಸ್ವಾಮಿ ವಿವೇಕಾನಂದ ಅವರು ಭಾರತೀಯ ಸಂಸ್ಕೃತಿ, ಆತ್ಮಗೌರವ ಮತ್ತು ಚೇತನವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಯೋಗಿ’ ಎಂದು ಪ್ರಾಚಾರ್ಯ ಆರ್.ಎಂ. ಬಂಟನೂರ್ ಹೇಳಿದರು.

ಪಟ್ಟಣದ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಪರೀಕ್ಷೆಯಲ್ಲಿ ಪಡೆಯುವ ಅಂಕ ಮತ್ತು ಪದವಿಗಳಷ್ಟೇ ಶಿಕ್ಷಣವಲ್ಲ. ಮೌಲ್ಯ, ಶಿಸ್ತು, ಮಾನವೀಯತೆ ಮತ್ತು ಸಾಮಾಜಿಕ ಜವಾಬ್ದಾರಿಯೇ ನಿಜವಾದ ಶಿಕ್ಷಣ. ತಾಯಿ, ಮಾತೃಭೂಮಿ ಮತ್ತು ರಾಷ್ಟ್ರದ ಗೌರವವೇ ಜೀವನದ ಮೂಲ ತತ್ವವಾಗಬೇಕು’ ಎಂದರು.

ಐಕ್ಯುಎಸಿ ಸಂಯೋಜಕ ಉಮೇಶ ಮಂಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಗಂಗನಗೌಡರ, ಮನೋಹರ್ ಪೋತದಾರ, ಮಧು ನಾಡಗೌಡ, ಬಸವರಾಜ, ಅನ್ನಪೂರ್ಣೇಶ್ವರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.