ಮತ್ತೆ ₹25 ಲಕ್ಷ ಖರ್ಚು ಮಾಡಲಾಗಿದೆ. ಪೇವರ್ಸ್ ಹಾಕಿದೆ. ಗಿಡಗಳನ್ನು ನೆಡಲಾಗಿದೆ. ಆದರೆ ಸಾರ್ವಜನಿಕರು ಬಹಿರ್ದೆಸೆಗೆ ಬಳಸಿಕೊಳ್ಳುತ್ತಿರುವುದು ಅತ್ಯಂತ ವಿಷಾದಕರ. ಉದ್ಯಾನ ನಿರ್ವಹಣೆ ಇಲ್ಲದ ಕಾರಣ ಹೀಗಾಗುತ್ತಿದೆ. ಸಾರ್ವಜನಿಕರು ಪುರಸಭೆ ಸದಸ್ಯರು ಕಾಳಜಿ ವಹಿಸಬೇಕು.
ಅಶೋಕ ಮನಗೂಳಿ ಶಾಸಕ
ಎಂ.ಸಿ.ಮನಗೂಳಿಯವರು ಕೆರೆಯ ಕೆಳಗೆ ಉದ್ಯಾನ ನಿರ್ಮಾಣ ಮಾಡಿ ಅದರಲ್ಲಿ ತೋಂಟದ ಸಿದ್ಧಲಿಂಗ ಶ್ರೀಗಳ ಪುತ್ಥಳಿ ಅನಾವಾರಣ ಮಾಡುವ ದಿಸೆಯಲ್ಲಿ ಕಾರ್ಯ ಪ್ರವೃತ್ತರಾಗಿದ್ದರು. ಆದರೆ ಅವರ ಕನಸು ಕನಸಾಗಿಯೇ ಉಳಿದುಕೊಂಡಿದೆ. ಶಾಸಕ ಅಶೋಕ ಮನಗೂಳಿ ತಂದೆಯ ಕನಸು ನನಸಾಗಿಸಬೇಕು