ಸೋಲಾಪುರ: ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ಗಮನದಲ್ಲಿರಿಸಿಕೊಂಡು ದಕ್ಷಿಣ ಮಧ್ಯೆ ರೈಲ್ವೆ ವಿಶೇಷ ರೈಲುಗಳ ಸಂಚಾರ ಸೇವೆಯನ್ನು ವಿಸ್ತರಣೆ ಮಾಡಿದೆ.

ಸೋಲಾಪುರ-ಅಜ್ಮೀರ್ (09628) ಸಾಪ್ತಾಹಿಕ ವಿಶೇಷ ರೈಲು ಮಾ.25ರಿಂದ ಏ.10ರವರೆಗೆ ಸಂಚರಿಸಲು ಅಧಿಸೂಚನೆ ಹೊರಡಿಸಲಾಗಿತ್ತು. ಈಗ ಜೂ.26ರವರೆಗೆ ಸಂಚರಿಸಲು ಅಧಿಸೂಚನೆ ಹೊರಡಿಸಲಾಗಿದೆ.

ಅಜ್ಮೀರ್ದಿಂದ (09627) ಸಾಪ್ತಾಹಿಕ ವಿಶೇಷ ರೈಲು ಮಾ.26ರಿಂದ ಏ.9ರ ವರೆಗೆ ಸಂಚರಿಸುತ್ತಿತ್ತು. ಈಗ ಜೂ.25ರ ವರೆಗೆ ಸಂಚರಿಸಲಿದೆ ಎಂದು ಮಧ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ರೌಡಿ ಶೀಟರ್ ಪರೇಡ್: ಎಚ್ಚರಿಕೆ

ಬಸವನಬಾಗೇವಾಡಿ: ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಸೋಮವಾರ ಬಸವನಬಾಗೇವಾಡಿ ಉಪ ವಿಭಾಗದ ರೌಡಿ ಶೀಟರ್ಗಳ ಪರೇಡ್ ನಡೆಯಿತು. ಪರೇಡ್ನಲ್ಲಿ ಹಾಜರಿದ್ದ ಕೊಲೆ ದರೋಡೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಒಟ್ಟು 58 ರೌಡಿಗಳಿಗೆ ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಖಡಕ್ ಎಚ್ಚರಿಕೆ ನೀಡಿದರು. ‘ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಮಾಜಕ್ಕೆ ತೊಂದರೆಯಾಗದಂತೆ ಸಾಮರಸ್ಯದಿಂದ ಬದುಕಬೇಕು. ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದರೇ ಗಡೀಪಾರು ಮಾಡಲಾಗುವದು ಎಂದು ಹೇಳಿದ ಅವರು ಕೆಲವು ರೌಡಿಗಳಿಗೆ ಹಬ್ಬಗಳಲ್ಲಿ ಭಾಗವಹಿಸದಂತೆ ಎಚ್ಚರಕೆ ನೀಡಿದರು. ಬಸವನಬಾಗೇವಾಡಿ ಸಿಪಿಐ ಗುರುಶಾಂತ ದಾಶಾಳ ಮುದ್ದೇಬಿಹಾಳ ಸಿಪಿಐ ಮಹ್ಮದ್ ಫಸಿಹುದ್ದೀನ್ ಪಿಎಸ್ಐ ಸಂಜಯ ತಿಪ್ಪಾರೆಡ್ಡಿ ನಿಡಗುಂದಿ ಸಿಪಿಐ ಅಶೋಕ ಚವ್ಹಾಣ ಪಿಎಸ್ಐಗಳಾದ ಶಿವಾನಂದ ಪಾಟೀಲ ರಾಮನಗೌಡ ಸಂಕನಾಳ ಎಂ.ಬಿ.ಬಿರಾದಾರ ಎಂ.ವಿ.ಕುಲಕರ್ಣಿ ಯತೀಶ್ ಕೆ.ಎನ್. ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.