ಮುದ್ದೇಬಿಹಾಳ: ‘ತೊಗರಿ ಬೆಳೆಗೆ ಬೆಂಬಲ ಬೆಲೆ ಹೆಚ್ಚಳ ಸಾಧ್ಯವಿಲ್ಲ. ಪರಿಹಾರ ನೀಡಲು ಸರ್ಕಾರದಿಂದ ಸಾಧ್ಯವಿಲ್ಲ. ಆದರೆ ಬೆಂಬಲ ಬೆಲೆಯಡಿ ರೈತರ ತೊಗರಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.

ಪಟ್ಟಣದ ನಾಲತವಾಡ ರಸ್ತೆಯಲ್ಲಿ ಶನಿವಾರ ಬಾಲಾಜಿ ದಾಲ್ ಇಂಡಸ್ಟ್ರಿಸ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ರೈತರು ಕೇಳಿದಷ್ಟು ಪರಿಹಾರ ಕೊಡುವುದಕ್ಕೆ ಹೇಗೆ ಸಾಧ್ಯವಿದೆ? ರಾಜ್ಯದ 27 ಜಿಲ್ಲೆಗಳಲ್ಲಿ ತೊಗರಿ ಬಿತ್ತನೆ ಆಗಿದೆ. ರೈತರು ತೊಗರಿ ಒಂದನ್ನೇ ಏಕೆ ಬೆಳೆಯಬೇಕು? ಬಹುಬೆಳೆ ಪದ್ಧತಿ ಅನುಸರಿಸುವುದರಿಂದ ಒಂದು ಬೆಳೆ ಕೈಕೊಟ್ಟರು ಇನ್ನೊಂದು ಆಸರೆ ಆಗುತ್ತದೆ. ಯಾವುದು ಸೂಕ್ತ ಎಂದು ನಿರ್ಧರಿಸಿ ಬಿತ್ತನೆ ಮಾಡಬೇಕು’ ಎಂದರು.

‘ತೊಗರಿ ಬೆಳೆಗೆ ₹7,600 ಬೆಂಬಲ ಬೆಲೆ ನೀಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಬೆಲೆ ಸ್ಥಿತ್ಯಂತರ ಆಗುತ್ತಿರುವ ಕಾರಣ ಬೆಲೆ ಏರಿಕೆ, ಇಳಿಕೆ ಆಗಬಹುದು. ಕೆಲವು ದಿನಗಳ ಹಿಂದಷ್ಟೆ 8 ಸಾವಿರದಿಂದ– 9 ಸಾವಿರದಂತೆ ತೊಗರಿ ಮಾರಾಟವಾಗಿದೆ. ರೈತರು ಆತಂಕಕ್ಕೆ ಒಳಗಾಗಿ ತಮ್ಮ ಬೆಳೆ ಮಾರಾಟ ಮಾಡಬಾರದು. ಜಿಲ್ಲಾಧಿಕಾರಿಗಳು ತೊಗರಿ ಬೆಳೆ ಹಾನಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ವಿಮೆ ಕಂಪನಿಯವರು ಪರಿಹಾರ ಕೊಡುತ್ತಾರೆ’ ಎಂದರು.

ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಮಾತನಾಡಿ, ‘ತೊಗರಿ ಬೆಳೆಗೆ ವಿಮೆ ಮಾಡಿಸಿದವರಿಗೆ ಪರಿಹಾರ ಬರುತ್ತದೆ. ವಿಮೆ ಮಾಡಿಸದೇ ಇರುವವರಿಗೆ ಪರಿಹಾರ ದೊರೆಯುವುದು ಕಷ್ಟ. ರೈತರು ಕಡ್ಡಾಯವಾಗಿ ವಿಮೆ ಮಾಡಿಸಲು ಸಾಕಷ್ಟು ಪ್ರಚಾರ ಮಾಡಿದಾಗ್ಯೂ ವಿಮೆಯಿಂದ ದೂರ ಉಳಿಯುವ ಕೆಲಸ ಆಗುತ್ತಿರುವುದು ಕಳವಳಕಾರಿ ಸಂಗತಿ. ಹೆಚ್ಚಿನ ಕಾರ್ಖಾನೆಗಳು ಬಂದಲ್ಲಿ ರೈತರಿಗೆ ಅನುಕೂಲವಾಗಲಿದೆ’ ಎಂದರು.

ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಮಾತನಾಡಿ, ‘ ಕೈಗಾರಿಕೆಗಳು ಬರಲು ಮೂಲ ಸೌಕರ್ಯಗಳು ಅಗತ್ಯ. ಸದಾ ವಿದ್ಯುತ್ ಇರಬೇಕು, ಉತ್ತಮ ರಸ್ತೆ, ನೀರು ಇರಬೇಕು ಎಂಬುದು ನನ್ನ ಕನಸಾಗಿತ್ತು. ಆದರೆ ನಮ್ಮ ಭಾಗದಲ್ಲಿ ವಿದ್ಯುತ್ ಪೂರೈಕೆ ದೊಡ್ಡ ಸವಾಲಾಗಿತ್ತು. ನನ್ನ ಅವಧಿಯಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸುವ ಕೆಲಸ ಮಾಡಿದ್ದೇನೆ. ಅದಕ್ಕೆ ಪೂರಕವಾಗಿ ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ. ದಾಲ್ ಇಂಡಸ್ಟ್ರಿಯಲ್ಲಿ ಉದ್ಯೋಗವಕಾಶ ಹೆಚ್ಚಲಿವೆ. ಮುಂದಿನ ಮೂರು ವರ್ಷಗಳ ನಂತರ ನಮ್ಮ ಸರ್ಕಾರ ಬಂದೇ ಬರುತ್ತದೆ. ಒಂದು ಸಾವಿರ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು. ಬಸರಕೋಡ, ಢವಳಗಿ, ರೂಢಗಿ ಭಾಗದಲ್ಲಿ ಒಂದು ಸಾವಿರ ಎಕರೆ ಜಮೀನು ಡಿನೋಟ್ ಮಾಡಿ ಇಟ್ಟಿದ್ದು ಹತ್ತು ಸಾವಿರ ಉದ್ಯೋಗ ಕೊಡುವ ಕೆಲಸ ಮಾಡಲಾಗುವುದು’ ಎಂದರು.

ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ, ಉದ್ಯಮಿ ಸಿದ್ಧನಗೌಡ ಬಿರಾದಾರ ಮಾತನಾಡಿದರು. ಅಂಕಲಿಮಠದ ವೀರಭದ್ರ ಸ್ವಾಮೀಜಿ, ಕುಂಟೋಜಿ ಭಾವೈಕ್ಯತೆ ಮಠದ ಚೆನ್ನವೀರ ಶಿವಾಚಾರ್ಯರು, ವಡವಡಗಿ ಗುರುಸಿದ್ಧ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ಬಾಲಾಜಿ ಶುಗರ್ಸ್ ನಿರ್ದೇಶಕ ಅಧೀಕ ಪಾಟೀಲ್, ಕಾರ್ಖಾನೆಯ ಮುಖ್ಯಸ್ಥರಾದ ಶರಣು ಸಜ್ಜನ, ಮುತ್ತು ಕಡಿ, ಪ್ರಕಾಶ ಸಜ್ಜನ, ಸಂಗು ಕಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.