ವಿಜಯಪುರ: ‘ಪುತ್ಥಳಿ, ವೃತ್ತ ನಿರ್ಮಾಣ ಹಾಗೂ ಪ್ರಮುಖ ಸ್ಥಳಗಳಿಗೆ ಮಹನೀಯರ ಹೆಸರುಗಳನ್ನು ನಾಮಕರಣ ಮಾಡುವುದರಿಂದ ದೇಶ ಮತ್ತು ಸಮಾಜಕ್ಕೆ ರಾಷ್ಟ್ರ ನಾಯಕರು ನೀಡಿರುವ ಕೊಡುಗೆಗಳ ಬಗ್ಗೆ ಮುಂದಿನ ಪೀಳಿಗೆಗೆ ಜಾಗೃತಿ ಮೂಡಿಸಲು ಸಾಧ್ಯ’ ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿದರು.

ವಿಜಯಪುರ ತಾಲ್ಲೂಕಿನ ಹಿಟ್ಟಿನಹಳ್ಳಿ ಗ್ರಾಮದಲ್ಲಿ ಶನಿವಾರ ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶ ಮತ್ತು ಸಮಾಜಕ್ಕಾಗಿ ಹೋರಾಡಿದ ನಾಯಕರ ಕಾರ್ಯಗಳನ್ನು ಸ್ಮರಿಸಲು ಪುತ್ಥಳಿ ಅನಾವರಣ ಮತ್ತು ವಿವಿಧ ಸ್ಥಳಗಳಿಗೆ ಹೆಸರುಗಳ ನಾಮಕರಣ ಮಾಡುತ್ತಿರುವುದು ಉತ್ತಮ ಸಂಪ್ರದಾಯವಾಗಿದೆ’ ಎಂದರು.

‘ಹಿಟ್ಟಿನಹಳ್ಳಿ ಗ್ರಾಮದಲ್ಲಿ ಶಿವಾಜಿ ಮಹಾರಾಜರು ಮತ್ತು ಸಂಗೊಳ್ಳಿ ರಾಯಣ್ಣರ ಕಂಚಿನ ಪುತ್ಥಳಿ, ಕೇಂದ್ರ ಬಸ್ ನಿಲ್ದಾಣಕ್ಕೆ ವೀರರಾಣಿ ಕಿತ್ತೂರ ಚೆನ್ನಮ್ಮ ಹೆಸರು ನಾಮಕರಣ ಹೀಗೆ ರಾಷ್ಟ್ರ ನಾಯಕರ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದರು.

ಬಾಗಲಕೋಟೆ-ಹಿಟ್ಟಿನಹಳ್ಳಿ ಚರಂತಿಮಠದ ಪ್ರಭು ಮಹಾಸ್ವಾಮೀಜಿ, ತಿಂತಣಿ ಬ್ರಿಡ್ಜ್ ಕನಕಗುರುಪೀಠ ಶಾಖಾ ಮಠದ ಸಿದ್ದ ರಮಾನಂದ ಸ್ವಾಮೀಜಿ, ಕಿರಣ ಜೋಶಿ (ರಾಮಭಟ್ಟ), ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಮುಖಂಡರಾದ ರವಿ ಕಡಿಮನಿ, ಸದಾಶಿವ ಪವಾರ, ಸುಧಾಕರ ಘಾಟಗೆ, ಎಲ್.ಎಲ್. ಉಸ್ತಾದ, ಸೋಮನಾಥ ಕಳ್ಳಿಮನಿ, ಹಾಸಿಂಪೀರ ವಾಲಿಕಾರ, ಜ್ಯೋತಿರಾಮ ಪವಾರ, ಡಾ.ಗೌತಮ ವಗ್ಗರ, ಮಂಜುನಾಥ ಜುನಗೊಂಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.