ಭಾನುವಾರ, ಸೆಪ್ಟೆಂಬರ್ 25, 2022
29 °C

ಕಿತ್ತೂರ ಚನ್ನಮ್ಮ ನಾಟ್ಯ ಮಂದಿರ ಪ್ರಾರಂಭಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ:ನಗರದಲ್ಲಿ ರಂಗಭೂಮಿ ಕಲಾವಿದರಿಗೆ ನಾಟಕ ಪ್ರದರ್ಶಸಿಸಲು ಅನುಕೂಲವಾಗುವಂತೆ ಕಿತ್ತೂರ ಚನ್ನಮ್ಮ ನಾಟ್ಯ ಮಂದಿರ ಪ್ರಾರಂಭಿಸುವಂತೆ ಹಾಗೂ ಹಂದಿಗನೂರ ಸಿದ್ರಾಮಪ್ಪ ಬಯಲು ರಂಗಮಂದಿರಕ್ಕೆ ಅನುದಾನ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ವೃತ್ತಿರಂಗಭೂಮಿ ಮಾಲೀಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಬಹು ವರ್ಷಗಳಿಂದ ನಾಟಕ ಪ್ರದರ್ಶನ ಇಲ್ಲದೆ ಇರುವುದರಿಂದ ಕಲಾಭಿಮಾನಿಗಳು ಹಾಗೂ ಕಲಾವಿದರು ನಿರಾಶೆಗೊಂಡಿದ್ದಾರೆ ಎಂದರು.

ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ್‌ ಮಾಸ್ತರ ಮಾತನಾಡಿ, ಬಹು ವರ್ಷಗಳಿಂದ ನಾಟಕ ಪ್ರದರ್ಶನ ಇಲ್ಲದೆ ಇರುವುದರಿಂದ ಜಿಲ್ಲೆಯಲ್ಲಿ ಸಾಂಸ್ಕೃತಿಕ ಬದುಕು ಬರಡಾಗಿದೆ. ತಕ್ಷಣವೇ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಬೇಕು ಎಂದರು.

ನಾಟಕ ಅಕಾಡೆಮಿ ಸದಸ್ಯ ಶ್ರೀಧರ ಹೆಗಡೆ ಹಾಗು ಚಿಂದೋಡಿ ಕಂಪನಿ ಮಾಲೀಕರಾದ ಕೋಟ್ರೇಶ ಮಾತನಾಡಿ,  ನಗರದ ಹೃದಯ ಭಾಗದಲ್ಲಿರುವ ಕಿತ್ತೂರ ಚನ್ನಮ್ಮ ನಾಟ್ಯ ಮಂದಿರ ಭೂಗಳ್ಳರು ಕಬಿಳಸಲು ಹೊಂಚು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಹಾಗೇನಾದರೂ ಆದರೆ ಕಿತ್ತೂರ ಚನ್ನಮ್ಮ ನಾಟ್ಯ ಮಂದಿರದಲ್ಲಯೆ ಚಳವಳಿ ಮಾಡಲಾಗುವುದು. ಅದಕ್ಕೆ ಆಗಿರುವ ನಿಜವಾದ ಕಾರಣವಾದರೂ ಏನು ಎಂಬ ಪ್ರಶ್ನೆ ಮೂಡುತ್ತದೆ ಎಂದರು.

ಸಿದ್ದು ಹಂಪನಗೌಡ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಮಂಜುನಾಥ್ ಜಾಲಿಹಾಳ, ರಾಜಣ್ಣ ಜೇವರಗಿ, ಪ್ರೇಮಾ ಪಾಟೀಲ್, ಅಯ್ಯಣ್ಣಸ್ವಾಮಿ ಹಿರೇಮಠ, ಪ್ರವೀಣ್ ಬಾಗಲಕೋಟೆ, ರೇವಣಸಿದ್ದೇಶ್ವರ ಹೊಸರಮಠ, ಶಂಕ್ರಪ್ಪ ಅರಳಿಹಳ್ಳಿ, ಮಹಾಂತೇಶ ಚಿಕ್ಕಮಠ, ಬಸವರಾಜ ಬೆಂಗೇರಿ, ಅಸ್ಪಾಕಹುಸೇನ, ಜಹಾಗೀರದಾರ, ಮಂಟೇಶ ದಂಡಿನ, ಬಿ ಕುಮಾರಸ್ವಾಮಿ, ಕತಾಲಸಾಬ ತೆಗ್ಗಿಹಳ್ಳಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.