ವಿಜಯಪುರ: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವ ನ.9 ರಂದು ಬೆಳಿಗ್ಗೆ 9 ಗಂಟೆಗೆ ವಿವಿಯ ಜ್ಞಾನಶಕ್ತಿ ಆವರಣದಲ್ಲಿ ನಡೆಯಲಿದೆ ಎಂದು ವಿವಿ ಕುಲಪತಿ ಪ್ರೊ. ತುಳಸಿಮಾಲಾ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಇನ್ ಫೋಸಿಸ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಆನ್ ಲೈನ್ ಮೂಲಕ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಶಿಕ್ಷಣ ಸಚಿವ ಡಾ. ಸಿ.ಎ.ಎನ್.ಅಶ್ವತ್ಥ ನಾರಾಯಣ ಉಪಸ್ಥಿತ ಇರಲಿದ್ದಾರೆ ತಿಳಿಸಿದರು.

ಮೂವರುಗೆ ಗೌರವ ಡಾಕ್ಟರೇಟ್:
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದರು.

ಸಾಹಿತಿ ವೈದೇಹಿ (ಸಾಹಿತ್ಯ), ಡಾ.ಸುಮಾ ಸುಧೀಂದ್ರ (ಸಂಗೀತ) ಮತ್ತು ಕಲ್ಪನಾ ಸರೋಜ್ (ಉದ್ಯಮಶೀಲತೆ-ಮಹಿಳಾ ಸಬಲೀಕರಣ) ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ ಎಂದರು.

ಚಿನ್ನದ ಪದಕ, ಪಿಎಚ್. ಡಿ ಪ್ರದಾನ:

ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ 76 ವಿದ್ಯಾರ್ಥಿಗಳಿಗೆ 76 ಚಿನ್ನದ ಪದಕ ಹಾಗೂ ನಗದು ಬಹುಮಾನಗಳನ್ನು ವಿತರಿಸಲಾಗುವುದು. 48 ವಿದ್ಯಾರ್ಥಿನಿಯರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗುವುದು ಎಂದರು.

11,208 ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಸ್ನಾತಕ, ಸ್ನಾತಕೋತ್ತರ ಮತ್ತು ಪಿಜಿ ಡಿಪ್ಲೊಮಾ ಸೇರಿ ಒಟ್ಟು 11,208 ವಿದ್ಯಾರ್ಥಿನಿಯರು ಪದವಿ ಪಡೆಯಲು ಅರ್ಹರಾಗಿದ್ದಾರೆ. ಈ ಪೈಕಿ 996 ವಿದ್ಯಾರ್ಥಿನಿಯರಿಗೆ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ನೀಡಲಾಗುತ್ತಿದ್ದು, ಇದರಲ್ಲಿ ಎಂಎ 417, ಎಂ.ಕಾಂ 235, ಎಂಬಿಎ 52, ಎಂ.ಎಸ್.ಸಿ 13, ಎಂ.ಇಡಿ 7, ಎಂ.ಪಿ.ಇಡಿ 11, ಎಂ.ಎಲ್.ಐ.ಎಸ್.ಸಿ 12, ಎಂ.ಎಸ್.ಡಬ್ಲ್ಯೂ 38, ಎಂ.ಎಫ್.ಎಂ 11, ಎಂಸಿಎ 200 ವಿದ್ಯಾರ್ಥಿನಿಯರಿದ್ದಾರೆ ಎಂದರು.

ಪಿ.ಜಿ ಡಿಪ್ಲೋಮಾ ಕೋರ್ಸ್ ಗಳಾದ ಯೋಗ ಅಧ್ಯಯನದಲ್ಲಿ 25, ಮ್ಯೂಜಿಕ್ 3, ಡಿ.ಎಫ್.ಎಂ 18, ಪಿ.ಜಿ ಡಿಪ್ಲೋಮಾ ಫ್ಯಾಷನ್ 43 ಸೇರಿ ಒಟ್ಟು 89 ವಿದ್ಯಾರ್ಥಿನಿಯರು ಡಿಪ್ಲೋಮಾ ಪದವಿ ಪ್ರಮಾಣ ಪತ್ರ ಪಡೆಯಲಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.