ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಲಭೆ ಪ್ರಕರಣ: ಶಾಸಕ ಯತ್ನಾಳ ಸೇರಿದಂತೆ 134 ಆರೋಪಿಗಳು ಖುಲಾಸೆ

Last Updated 29 ಸೆಪ್ಟೆಂಬರ್ 2021, 15:51 IST
ಅಕ್ಷರ ಗಾತ್ರ

ವಿಜಯಪುರ: ನಗರದಲ್ಲಿ 2014 ಮೇ 26 ರಂದು ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹಾಗೂ ಎರಡು ಕೋಮಿಗೆ ಸೇರಿದ ಎಲ್ಲ ಆರೋಪಿಗಳನ್ನು ಬೆಂಗಳೂರಿನ‌ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಖುಲಾಸೆ ಮಾಡಿ, ಅಂತಿಮ ತೀರ್ಪು ನೀಡಿದೆ.

ನರೇಂದ್ರ ಮೋದಿ ಅವರು ಮೊದಲ‌ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ವೇಳೆ ನಗರದಲ್ಲಿ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ನಡೆದಿದ್ದ ದಾಂದಲೆ ಬಳಿಕ ಕೋಮು ಸಂಘರ್ಷದ ರೂಪ ಪಡೆದುಕೊಂಡಿತ್ತು. ಎರಡು ಕೋಮುಗಳ ಮಧ್ಯೆ ಕಲ್ಲು ತೂರಾಟ ನಡೆದು, ಬೈಕ್ ಹಾಗೂ ಇತರೆ ವಾಹನಗಳಿಗೆ ಬೆಂಕಿ‌ ಹಚ್ಚಲಾಗಿತ್ತು. ಈ ಸಂಬಂಧ ನಗರದ ಗಾಂಧಿಚೌಕ್ ಪೊಲೀಸರು, ಶಾಸಕ ಯತ್ನಾಳ ಸೇರಿದಂತೆ 134 ಜನರ ಮೇಲೆ ವಿರುದ್ಧ 29 ಪ್ರಕರಣ ದಾಖಲಿಸಿಕೊಂಡಿದ್ದರು.

ಕೋವಿಡ್‌ ಕಾರಣದಿಂದ ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಬಳಿ ಇರುವ ಚಿಂತನ ಸಭಾಂಗಣವನ್ನೇ ವಿಶೇಷ ನ್ಯಾಯಾಲಯವಾಗಿ ಪರಿವರ್ತನೆ ಮಾಡಿ, ವಿಡಿಯೋ ಕಾನ್ಪರೆನ್ಸ್ ಮೂಲಕ ಬುಧವಾರ ಆರೋಪಿಗಳ ಅಂತಿಮ ವಿಚಾರಣೆ ನಡೆಸಲಾಯಿತು.

ಏಳು ವರ್ಷಗಳ ಕಾಲ ಸುದೀರ್ಘ ವಿಚಾರಣೆ ಬಳಿಕ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಎಲ್ಲ ಆರೋಪಿಗಳು ನಿರಪರಾಧಿಗಳು ಎಂದು ತೀರ್ಪು ನೀಡಿದರು.

ಶಾಸಕ ಯತ್ನಾಳ ಹಾಗೂ ಇತರೆ ಎಲ್ಲ ಆರೋಪಿಗಳು ಹಾಜರಾಗಿದ್ದರು. ನ್ಯಾಯಾಲಯದ ತೀರ್ಪು ಸ್ವಾಗತ ಮಾಡಿದ ಯತ್ನಾಳ, ಕೆಲ ಕಿಡಿಗೇಡಿಗಳಿಂದ ನಡೆದ ಗಲಾಟೆಯಲ್ಲಿ ಅಮಾಯಕರು ಕಷ್ಟ ಅನುಭವಿಸುವಂತಾಗಿತ್ತು. ನ್ಯಾಯಾಲಯದ ತೀರ್ಪಿನಿಂದ ಎಲ್ಲರಿಗೂ ಸಂತಸವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT