ವಿಜಯಪುರ: ಜಿಲ್ಲೆಯ 2,313 ಅಂಗನವಾಡಿಗಳಿಗೆ ದಾಖಲಾಗಿರುವ ಸುಮಾರು 2.20 ಲಕ್ಷ ಮಕ್ಕಳ ಪೈಕಿ 259 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿವೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಪ್ರತಿ ತಿಂಗಳು 1 ರಿಂದ 10ನೇ ತಾರೀಖಿನವರೆಗೆ ಅಂಗನವಾಡಿಗಳಲ್ಲಿರುವ ಮಕ್ಕಳ ತೂಕವನ್ನು ಮಾಡಲಾಗುತ್ತದೆ. ಅಕ್ಟೋಬರ್ ತಿಂಗಳಲ್ಲಿ 2.20 ಲಕ್ಷ ಮಕ್ಕಳನ್ನು ತೂಕ ಮಾಡಲಾಗಿದ್ದು, ಈ ಪೈಕಿ 1.85 ಲಕ್ಷ ಮಕ್ಕಳು ಸಾಮಾನ್ಯ ತೂಕ, 34,550 ಮಕ್ಕಳು ಸಾಧಾರಣ ಕಡಿಮೆ ತೂಕ ಹಾಗೂ 259 ಮಕ್ಕಳು ವಿಪರೀತ ಕಡಿಮೆ ತೂಕ ಹೊಂದಿರುವುದು ಕಂಡು ಬಂದಿದೆ.

‘ಪ್ರತಿ ತಿಂಗಳು ಮಕ್ಕಳ ತೂಕವನ್ನು ದಾಖಲಿಸಲಾಗುತ್ತದೆ. ಈ ಪೈಕಿ ವಿಪರೀತ ಕಡಿಮೆ ತೂಕ ಅಥವಾ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಪುನರ್ವಸತಿ ಕೇಂದ್ರಗಳಿಗೆ ದಾಖಲಿಸಲಾಗುತ್ತದೆ. ವಿಜಯಪುರ ನಗರದಲ್ಲಿ 10 ಹಾಸಿಗೆ ಸಾಮರ್ಥ್ಯದ ಒಂದು ಕೇಂದ್ರ ಹಾಗೂ ಇಂಡಿಯಲ್ಲಿ 5 ಹಾಸಿಗೆ ಸಾಮರ್ಥ್ಯದ ಒಂದು ಕೇಂದ್ರಗಳಿವೆ. ಸಿಂದಗಿಯಲ್ಲಿ ಈಗಷ್ಟೇ ಪುನರ್ವಸತಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಇಲ್ಲಿ ಮಕ್ಕಳಿಗೆ ಅಗತ್ಯ ಔಷಧಿ, ಮಾತ್ರೆಗಳನ್ನು ಕೊಡಲಾಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ ಕುಂಬಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರೋಗ್ಯ ಇಲಾಖೆಯು ಎತ್ತರಕ್ಕೆ ತಕ್ಕಂತೆ ತೂಕ ಇರಬೇಕು ಎಂಬ ಮಾನದಂಡವನ್ನು ನಿಗದಿಪಡಿಸಿದೆ. ಆ ಪ್ರಕಾರ ತೂಕ ಮಾಡಿ, ಅಪೌಷ್ಟಿಕ ಮಕ್ಕಳನ್ನು ಗುರುತಿಸಲಾಗುತ್ತಿದೆ. ಸೊನ್ನೆಯಿಂದ ಮೂರು ವರ್ಷದ ಒಳಗಿನ ಮಕ್ಕಳಿಗೆ ಮನೆಯಲ್ಲಿ ಆರೈಕೆ ಮಾಡುವಂತೆ ಸೂಚಿಸಲಾಗುತ್ತದೆ. 3 ರಿಂದ 6 ವರ್ಷದ ಮಕ್ಕಳಿಗೆ ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ವಿತರಿಸಲಾಗುತ್ತದೆ. ವಾರದಲ್ಲಿ ಐದು ದಿನ ಮೊಟ್ಟೆ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಆರೋಗ್ಯ ಇಲಾಖೆ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶುಕ್ರವಾರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಮನೆಗಳಿಗೆ ಭೇಟಿ ನೀಡುತ್ತಾರೆ. ಆ ಮಕ್ಕಳ ಪಾಲನೆ, ಪೋಷಣೆ ಬಗ್ಗೆ ಪಾಲಕರಿಗೆ ತಿಳಿವಳಿಕೆ ನೀಡುತ್ತಾರೆ. ಅಗತ್ಯ ಔಷಧಿ, ಮಾತ್ರೆಗಳನ್ನು ಕೂಡ ವಿತರಿಸುತ್ತಾರೆ’ ಎಂದು ತಿಳಿಸಿದರು.

ತೀವ್ರ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ, ಅವರಿಗೆ ಪೂರಕ ಪೌಷ್ಟಿಕ ಆಹಾರ ಕೊಡಲಾಗುತ್ತಿದೆ. ಅಲ್ಲದೆ, ಅವರ ಆರೈಕೆ ಬಗ್ಗೆ ಪಾಲಕರಿಗೆ ತಿಳಿವಳಿಕೆ ನೀಡಲಾಗುತ್ತಿದೆ.
- ಚಂದ್ರಕಾಂತ ಕುಂಬಾರ, ಉಪನಿರ್ದೆಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ತಾಲ್ಲೂಕು

ತೂಕ ಮಾಡಿದ ಮಕ್ಕಳು

ಕಡಿಮೆ ತೂಕದ ಮಕ್ಕಳು

ಇಂಡಿ

39,033

45

ಚಡಚಣ

21,710

15

ಸಿಂದಗಿ

46,608

39

ವಿಜಯಪುರ ಗ್ರಾಮೀಣ

27,585

37

ವಿಜಯಪುರ ನಗರ

21,491

42

ಬಸವನಬಾಗೇವಾಡಿ

32,756

49

ಮುದ್ದೇಬಿಹಾಳ

31,107

32

ಒಟ್ಟು

2,20,290

259

(ಮಾಹಿತಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.