ಸೋಮವಾರ, 2 ಫೆಬ್ರುವರಿ 2026
×
ADVERTISEMENT
ADVERTISEMENT

ವಿಜಯಪುರ | ವರ್ಷವೊಂದರಲ್ಲಿ 32 ಸಾವಿರ ಮಂದಿಗೆ ಕಚ್ಚಿದ ಬೀದಿ ನಾಯಿಗಳು: ಐವರ ಸಾವು

Published : 2 ಫೆಬ್ರುವರಿ 2026, 2:27 IST
Last Updated : 2 ಫೆಬ್ರುವರಿ 2026, 2:27 IST
ಫಾಲೋ ಮಾಡಿ
Comments
ಮುದ್ದೇಬಿಹಾಳ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುಂಪುಗುಂಪಾಗಿ ಸಂಚರಿಸುತ್ತಿರುವ ಬೀದಿ ನಾಯಿಗಳು 
ಮುದ್ದೇಬಿಹಾಳ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುಂಪುಗುಂಪಾಗಿ ಸಂಚರಿಸುತ್ತಿರುವ ಬೀದಿ ನಾಯಿಗಳು 
ವಿಜಯಪುರ ಜಿಲ್ಲೆಯಲ್ಲಿ 2025ರ ಜನವರಿ 1ರಿಂದ ಡಿಸೆಂಬರ್‌ 31ರ ವರೆಗೆ 32317 ಜನರಿಗೆ ಬೀದಿ ನಾಯಿಗಳು ಕಚ್ಚಿವೆ. ಇದರಲ್ಲಿ ಐದು ಜನ ಸಾವಿಗೀಡಾಗಿದ್ದಾರೆ
-ಡಾ.ಸಂಪತ್‌ ಗುಣಾರಿ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವಿಜಯಪುರ
ಶಾಲಾ ಕಾಲೇಜು ಆಸ್ಪತ್ರೆ ಬಸ್ ನಿಲ್ದಾಣ ರೈಲು ನಿಲ್ದಾಣ ವ್ಯಾಪ್ತಿಯಲ್ಲಿ ಆಶ್ರಯ ಪಡೆದಿರುವ ಬೀದಿನಾಯಿಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಸ್ಥಳಾಂತರಿಸಲು ಕ್ರಮಕ್ಕೆ ಮುಂದಾಗಲಾಗಿದೆ 
-ಬದ್ರುದ್ದಿನ್‌ ಸೌದಾಗರ ಯೋಜನಾ ನಿರ್ದೇಶಕ ನಗರಾಭಿವೃದ್ಧಿ ಕೋಶ ವಿಜಯಪುರ
ವಿಜಯಪುರ ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸರ್ವೇ ಮಾಡಲಾಗಿದೆ. ಅವುಗಳಿಗೆ ಪ್ರತಿ ದಿನ ಆಹಾರ ನೀರು ಪೂರೈಕೆ 35 ಸ್ಥಳಗಳನ್ನು ಗುರುತಿಸಲಾಗಿದೆ
-ಡಾ.ಲಕ್ಕಣ್ಣವರಆರೋಗ್ಯಾಧಿಕಾರಿಮಹಾನಗರ ಪಾಲಿಕೆ ವಿಜಯಪುರ
ವಿಜಯಪುರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಕೈಗೊಳ್ಳಲು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ₹82.50 ಲಕ್ಷ ಕಾಯ್ದಿರಿಸಲಾಗಿದೆ.
–ವಿಜಯ್‌ ಮೆಕ್ಕಳಕಿ ಆಯುಕ್ತ ಪಾಲಿಕೆ ವಿಜಯಪುರ
ವಿಜಯಪುರ ನಗರದ ಸೊಲ್ಲಾಪುರ ರಸ್ತೆ ಬಾಗಲಕೋಟೆ ರಸ್ತೆಯಲ್ಲಿ ರಾತ್ರಿ ವೇಳೆ ಓಡಾಡುವುದಕ್ಕೆ ಹೆದರಿಕೆಯಾಗುತ್ತಿದೆ. ಬೀದಿ ನಾಯಿಗಳ ಸಂಖ್ಯೆ ಹೆಚ್ಚಿದ್ದು ಅವುಗಳನ್ನು ಹಿಡಿದು ಬೇರೆಡೆ ಸಾಗಿಸಬೇಕು 
-ಸಂಗಮೇಶ ಬಿರಾದಾರ ವಿಜಯಪುರ ನಿವಾಸಿ
ಬೀದಿನಾಯಿ ಹಾವಳಿ: ಸಹಾಯವಾಣಿ  
ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ  ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ  ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆ ಆಸ್ಪತ್ರೆ ಕ್ರೀಡಾ ಸಂಕೀರ್ಣ ಬಸ್ ಹಾಗೂ ರೈಲು ನಿಲ್ದಾಣಗಳ ಆವರಣದಲ್ಲಿ ಬೀದಿ ನಾಯಿಗಳು ಕಂಡುಬಂದಲ್ಲಿ ಸಂಬಂಧಿಸಿದವರು ಮಹಾನಗರ ಪಾಲಿಕೆ ಕಚೇರಿಯ ಸಹಾಯವಾಣಿ ಸಂಖ್ಯೆ: 08352-222474 ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತ ವಿಜಯ್‌ ಮೆಕ್ಕಳಕಿ ತಿಳಿಸಿದ್ದಾರೆ.
ದತ್ತು ಪಡೆಯಲು ಅವಕಾಶ:  
ಬೀದಿನಾಯಿ ದತ್ತು ಪಡೆಯಲು ಅಥವಾ ಆಶ್ರಯ ತಾಣದಲ್ಲಿರುವ ನಾಯಿಗಳಿಗೆ ಆಹಾರ ಪೂರೈಸಲು ಇಚ್ಚಿಸುವವರು ಮಹಾನಗರ ಪಾಲಿಕೆಯ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT