ದೇವರಹಿಪ್ಪರಗಿ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಜರುಗಿದ ಸ್ಪರ್ಧಾತ್ಮಕ ಪರೀಕ್ಷೆ ಭಾನುವಾರ ಕಟ್ಟುನಿಟ್ಟಾಗಿ ಜರುಗಿದವು.
ಪಟ್ಟಣದ ಪರೀಕ್ಷಾ ಕೇಂದ್ರಗಳಾದ ಸಿದ್ಧೇಶ್ವರ ಸ್ವಾಮೀಜಿ, ವೆಂಕಟೇಶ್ವರ ಮತ್ತು ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಪಿ.ಯು ಕಾಲೇಜುಗಳಲ್ಲಿ ಬೆಳಿಗ್ಗೆ ಪರೀಕ್ಷೆ ಆರಂಭಗೊಂಡವು. ಸಿದ್ಧೇಶ್ವರ ಸ್ವಾಮೀಜಿ ಪಿ.ಯು ಕಾಲೇಜಿನ 19 ಕೊಠಡಿಗಳಲ್ಲಿ 450, ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಕಾಲೇಜಿನ 17 ಕೊಠಡಿಗಳಲ್ಲಿ 408 ಹಾಗೂ ವೆಂಕಟೇಶ್ವರ ಕಾಲೇಜಿನ 17 ಕೊಠಡಿಗಳಲ್ಲಿ 408ರಂತೆ ಒಟ್ಟು 3 ಪರೀಕ್ಷಾ ಕೇಂದ್ರಗಳಲ್ಲಿ 1266 ಪರೀಕ್ಷಾರ್ಥಿಗಳು ಪರೀಕ್ಷೆ ಬರೆದರು.
ಬೆಳಿಗ್ಗೆ 9 ಗಂಟೆಯಿಂದಲೇ ಬಂದ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ನಿಯೋಜಿತ ಸಿಬ್ಬಂದಿ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡುವುದರ ಮೂಲಕ ವೈಯಕ್ತಿಕ ತಪಾಸಣೆಗೆ ಮಾಡಿದರು.
ತಹಶೀಲ್ದಾರ್ ಪ್ರಕಾಶ ಸಿಂದಗಿ ಸೇರಿದಂತೆ ನಿಯೋಜಿತ ಪೊಲೀಸ್ ಹಾಗೂ ಪರೀಕ್ಷಾ ಕೇಂದ್ರಗಳ ನಿಯೋಜಿತ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ಪರೀಕ್ಷೆಗಳು ಜರುಗಿದವು.
ದೇವರಹಿಪ್ಪರಗಿ ಸಿದ್ಧೇಶ್ವರ ಸ್ವಾಮೀಜಿ ಪಿ.ಯು.ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಜರುಗಿದ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸರದಿಯಲ್ಲಿ ನಿಂತ ಅಭ್ಯರ್ಥಿಗಳು.