ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಮತದಾರರ ದಿನ: ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ

Published 22 ನವೆಂಬರ್ 2023, 13:39 IST
Last Updated 22 ನವೆಂಬರ್ 2023, 13:39 IST
ಅಕ್ಷರ ಗಾತ್ರ

ನಾಲತವಾಡ: ಮತದಾರರ ಜಾಗೃತ ಸಂಘದ ಅಡಿಯಲ್ಲಿ ಸ್ಥಳೀಯ ಶ್ರೀ ಬಸವೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ತಾಲ್ಲೂಕು ಮಟ್ಟದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಬಿಇಒ ಕಚೇರಿ ಇಸಿಒ ಎ.ಬಿ.ಬಗಲಿ ಉದ್ಘಾಟಿಸಿದರು.

ಭಿತ್ತಿಚಿತ್ರ ಸ್ಪರ್ಧೆ, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಬಂಧ ಬರೆಯುವ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆ ನಡೆಯಿತು. ಕನ್ನಡ ಮಾಧ್ಯಮದ ಪ್ರಬಂಧ ಸ್ಪರ್ಧೆಯಲ್ಲಿ ಮುದ್ದೇಬಿಹಾಳದ ಸರ್ಕಾರಿ ಪ್ರೌಢಶಾಲೆಯ ಚೈತ್ರಾ ಮಾದರ ಪ್ರಥಮ, ನಾಲತವಾಡದ ಶ್ರೀ ಬಸವೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿ ಕಾಶಮ್ಮ ಬಿಜ್ಜೂರ ದ್ವಿತೀಯ ಸ್ಥಾನ ಪಡೆದರು.

ಇಂಗ್ಲಿಷ್ ಮಾಧ್ಯಮ ಪ್ರಬಂಧ ಸ್ಪರ್ಧೆಯಲ್ಲಿ ನಾಲತವಾಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಾಗರಾಜ್ ಮಾದರ ಪ್ರಥಮ, ಘಾಳಪೂಜಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಗಣೇಶ ಕಂಬಾರ್ ದ್ವಿತೀಯ ಸ್ಥಾನ ಪಡೆದರು.

ಭಿತ್ತಿಚಿತ್ರ ಸ್ಪರ್ಧೆಯಲ್ಲಿ ಮುದ್ದೇಬಿಹಾಳದ ಸರ್ಕಾರಿ ಪ್ರೌಢಶಾಲೆ ಪ್ರಿಯಾ ಶನಿವಾರ ಪ್ರಥಮ, ನಾಲತವಾಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹುಲಗೇಶ ಮಾದರ ದ್ವಿತೀಯ ಸ್ಥಾನ ಪಡೆದರು.

ರಸಪ್ರಶ್ನೆಯಲ್ಲಿ ಶ್ರೀ ಬಸವೇಶ್ವರ ಪ್ರೌಢಶಾಲೆ ನಾಲತವಾಡದ ಭೀಮವ್ವ ಹೊಸಮನಿಯವರ ತಂಡ ಪ್ರಥಮ, ಆಲೂರಿನ ಸರ್ಕಾರಿ ಪ್ರೌಢಶಾಲೆಯ ಭಾಗ್ಯಶ್ರೀ ಚಲವಾದಿ ಹಾಗೂ ಸಂಗಡಿಗರು ದ್ವಿತೀಯ, ಮುದ್ದೇಬಿಹಾಳದ ಸರ್ಕಾರಿ ಪ್ರೌಢಶಾಲೆಯ ಭಾಗ್ಯಲಕ್ಷ್ಮಿ ಭದ್ರಗೊಂಡ ಹಾಗೂ ಸಂಗಡಿಗರು ತೃತೀಯ ಸ್ಥಾನ ಪಡೆದರು.

ತಾಲ್ಲೂಕಿನ ನೋಡಲ್ ಅಧಿಕಾರಿ ಅಮೋಘ ಬಗಲಿ ಬಹುಮಾನ ವಿತರಿಸಿದರು. ಸ್ಥಳೀಯ ಪ್ರೌಢಶಾಲೆ ಮುಖ್ಯ ಶಿಕ್ಷಕ ಎ.ಎ.ಅಡ್ಡೊಡಗಿ ಅಧ್ಯಕ್ಷತೆ ವಹಿಸಿದ್ದರು. ಆಲೂರಿನ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಬಿ.ಎಸ್.ಶಾಂತಪ್ಪನವರ, ಸಹ ಶಿಕ್ಷಕ ಜಗದೀಶ ನಾಡಗೌಡ, ಮುದ್ದೇಬಿಹಾಳ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕಿ ರಿಯಾನಾ ಬೇಗಂ, ನಾಲತವಾಡದ ಶ್ರೀ ವೀರೇಶ್ವರ ಪ್ರೌಢಶಾಲೆ ಶಿಕ್ಷಕ ಪಾಟೀಲ್ ನಿರ್ಣಾಯಕರಾಗಿದ್ದರು.

ಶಿಕ್ಷಕರಾದ ಟಿ.ಎಲ್.ಚವ್ಹಾಣ ರಸಪ್ರಶ್ನೆ ಸ್ಪರ್ಧೆ ನಡೆಸಿಕೊಟ್ಟರು. ಬಿ.ಕೆ.ರುದ್ರಗಂಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT