ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊರ್ತಿ | ಕೈಕೊಟ್ಟ ಮಳೆ: ನೀರಿಲ್ಲದೇ ಒಣಗಿದ ಜೋಳ, ಶೇಂಗಾ

Published 9 ನವೆಂಬರ್ 2023, 4:57 IST
Last Updated 9 ನವೆಂಬರ್ 2023, 4:57 IST
ಅಕ್ಷರ ಗಾತ್ರ

ಹೊರ್ತಿ: ನೀರಿನ ಕೊರತೆಯಿಂದಾಗಿ ಸಾವಳಸಂಗ ಗ್ರಾಮದ ರೈತರೊಬ್ಬರ ನಾಲ್ಕು ಎಕರೆಯಲ್ಲಿ ಬೆಳೆದ ಗೋವಿನ ಜೋಳ, ಶೇಂಗಾ, ಈರುಳ್ಳಿ ಸಂಪೂರ್ಣ ಒಣಗಿದೆ.

ರೈತ ನಿಂಗಪ್ಪ ಬೈಗಳ್ಳಿ ಅವರು ಬೀಜ, ಬಿತ್ತನೆ, ಕಳೆ ಕೀಳುವುದಕ್ಕಾಗಿ ಮೂರು ತಿಂಗಳಲ್ಲಿ ₹50ಸಾವಿರ ಖರ್ಚು ಮಾಡಿದ್ದಾರೆ. ಮಳೆಯಾಗಿ, ತೇವಾಂಶ ಇದ್ದರೆ ₹2.5ಲಕ್ಷದ ಗೋವಿನ ಜೋಳದ ಬೆಳೆ ಬರುತ್ತಿತ್ತು. ಶೇಂಗಾ ಕೂಡ ಕಾಯಿ ಆಗುವ ಮೊದಲೇ ಒಣಗಿದೆ.

‘ಇಂಡಿ ಮತ್ತು ಚಡಚಣ ತಾಲ್ಲೂಕುಗಳು ಜಿಲ್ಲೆಯಲ್ಲಿಯೇ ಅತ್ಯಂತ ಕಡಿಮೆ ಮಳೆ ಆಗುವ ಪ್ರದೇಶಗಳು. ಈ ಭಾಗದ ಕೆರೆಗಳಿಗೆ ನೀರು ತುಂಬುವ ಕಾರ್ಯವೂ ಮಂದಗತಿಯಲ್ಲಿ ಸಾಗಿದ್ದರಿಂದ ಅಂತರ್ಜಲ ಮಟ್ಟವೂ ಕುಸಿದಿದೆ. 700 ಅಡಿಗೂ ಹೆಚ್ಚು ಕೊಳವೆ ಬಾವಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಕುಡಿಯಲೂ ನೀರು ಸಿಗದಂತಾಗಿದೆ’ ಎಂದು ರೈತ ನಿಂಗಪ್ಪ ಅಳಲು ತೋಡಿಕೊಂಡರು.

‘ಇಂಚಗೇರಿ ಗ್ರಾಮದ ಕೆರೆಯಲ್ಲಿ ಹನಿ ನೀರಿಲ್ಲದೇ ಒಣಗಿರುವುದರಿಂದ ಮುಂಗಾರು, ಹಿಂಗಾರು ಬೆಳೆ, ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಕೂಡಲೇ ಜಿಲ್ಲಾಡಳಿತ ಹಾಗೂ ಸರ್ಕಾರ ಗಮನ ಹರಿಸಿ ಬೆಳೆಗಳಿಗೆ ಸೂಕ್ತ ಪರಿಹಾರ ಕೋಡಬೇಕು ಮತ್ತು ಕುಡಿಯುವ ನೀರು ಒದಗಿಸುವ ವ್ಯವಸ್ಥೆಯಾಗಬೇಕು’ ಎಂದು ಇಂಚಗೇರಿ ಗ್ರಾಮದ ರೈತರಾದ ರೇವಣಸಿದ್ಧ ಕನಮಡಿ ಮತ್ತು ರಾಜು ಕನಮಡಿ ಒತ್ತಾಯಿಸಿದ್ದಾರೆ.

ಹೊರ್ತಿ ಸಮೀಪದ ಸಾವಳಸಂಗ ಗ್ರಾಮದ ರೈತ ನಿಂಗಪ್ಪ ಆರ್.ಬೈಗಳ್ಳಿ ಅವರ ಹೊಲದಲ್ಲಿ ಗೋವಿನ ಜೋಳ ಬೆಳೆ ಒಣಗಿದೆ
ಹೊರ್ತಿ ಸಮೀಪದ ಸಾವಳಸಂಗ ಗ್ರಾಮದ ರೈತ ನಿಂಗಪ್ಪ ಆರ್.ಬೈಗಳ್ಳಿ ಅವರ ಹೊಲದಲ್ಲಿ ಗೋವಿನ ಜೋಳ ಬೆಳೆ ಒಣಗಿದೆ
ಹೊರ್ತಿ ಸಮೀಪದ ಚಡಚಣ ತಾಲ್ಲೂಕಿನ ಇಂಚಗೇರಿ ಗ್ರಾಮದ ಕೆರೆ ಸಂಪೂರ್ಣವಾಗಿ ಬತ್ತಿದೆ
ಹೊರ್ತಿ ಸಮೀಪದ ಚಡಚಣ ತಾಲ್ಲೂಕಿನ ಇಂಚಗೇರಿ ಗ್ರಾಮದ ಕೆರೆ ಸಂಪೂರ್ಣವಾಗಿ ಬತ್ತಿದೆ
ಹೊರ್ತಿ ಸಮೀಪದ ಚಡಚಣ ತಾಲ್ಲೂಕಿನ ಇಂಚಗೇರಿ ಗ್ರಾಮದ ಕೆರೆ ಬತ್ತಿದೆ
ಹೊರ್ತಿ ಸಮೀಪದ ಚಡಚಣ ತಾಲ್ಲೂಕಿನ ಇಂಚಗೇರಿ ಗ್ರಾಮದ ಕೆರೆ ಬತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT