ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ನದಿಯ ಒಂದು ಹನಿ ನೀರೂ ಕೊಡಲ್ಲ: ದೇವೇಗೌಡ ಮಾತಿಗೆ ಎಂ.ಬಿ ಪಾಟೀಲ ತಿರುಗೇಟು

Published 25 ಏಪ್ರಿಲ್ 2024, 11:36 IST
Last Updated 25 ಏಪ್ರಿಲ್ 2024, 11:36 IST
ಅಕ್ಷರ ಗಾತ್ರ

ವಿಜಯಪುರ: ‘ಕೃಷ್ಣಾ ನದಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರಕ್ಕೆ ಕೊಂಡೊಯ್ಯಲಾಗುವುದು’ ಎಂಬ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಹೇಳಿಕೆ ಜನರನ್ನು ದಾರಿ ತಪ್ಪಿಸುವಂತಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಆಕ್ಷೇಪ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ನದಿ ನೀರಿನ ವಿಷಯವಾಗಿ ದೇವೇಗೌಡರ ಹೇಳಿಕೆ ಸರಿಯಿಲ್ಲ. ಕೃಷ್ಣಾ ನದಿಯಿಂದ ಒಂದು ಹನಿ ನೀರು ತೆಗೆದುಕೊಂಡು ಹೋಗಲು ನಾವೂ ಬಿಡುವುದಿಲ್ಲ ಎಂದು ಹೇಳಿದರು.

ಕೃಷ್ಣಾ ನದಿ ನೀರು ಹಂಚಿಕೆ ಕುರಿತಂತೆ 2010ರಲ್ಲಿ ಪ್ರಕಟವಾಗಿರುವ ಬ್ರಿಜೇಶ್‌ ಕುಮಾರ್‌ ಅಂತಿಮ ತೀರ್ಪಿನ ಪ್ರಕಾರ ಕರ್ನಾಟಕದ ಪಾಲಿನ 173 ಟಿಎಂಸಿ ನೀರಲ್ಲಿ ಯಾವಾವ ಯೋಜನೆಗೆ ಎಷ್ಟೆಷ್ಟು ಟಿಎಂಸಿ ನೀರು ಎಂಬುದು ಖಚಿತವಾಗಿ ತಿಳಿಸಲಾಗಿದೆ. ಇದರಲ್ಲಿ ಒಂದು ಟಿಎಂಸಿ ನೀರನ್ನು ಬೇರೆ ಉದ್ದೇಶಕ್ಕೆ ಬಳಸಲು ತೀರ್ಪಿನಲ್ಲೇ ಅವಕಾಶವಿಲ್ಲ ಎಂದರು.

ಹಿರಿಯರಾದ ಎಚ್‌.ಡಿ. ದೇವೇಗೌಡರಿಗೆ ಈ ಎಲ್ಲ ವಿಷಯ ಗೊತ್ತಿದ್ದೂ ರಾಜಕೀಯ ಲಾಭಕ್ಕಾಗಿ ಮಾತನಾಡುವುದು ತಪ್ಪು, ಒಂದು ವೇಳೆ ಅವರಿಗೆ ಗೊತ್ತಿಲ್ಲದಿದ್ದರೆ, ಮರೆತಿದ್ದರೆ ತಿಳಿಸಲು ಬಯಸುತ್ತೇನೆ. ಅನಗತ್ಯ ಗೊಂದಲ ಸೃಷ್ಟಿ ಮಾಡಿ, ದಕ್ಷಿಣ ಕರ್ನಾಟಕ– ಉತ್ತರ ಕರ್ನಾಟಕದ ನಡುವೆ ಕಿಡಿ ಹಚ್ಚಲು ಮುಂದಾಗಬಾರದು ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT