ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಬಾಂಡ್ | ಪ್ರಧಾನಿ ಮೋದಿ ಮುಖವಾಡ ಕಳಚಿದೆ: ಎಂ.ಬಿ. ಪಾಟೀಲ

Published 31 ಮಾರ್ಚ್ 2024, 16:00 IST
Last Updated 31 ಮಾರ್ಚ್ 2024, 16:00 IST
ಅಕ್ಷರ ಗಾತ್ರ

ವಿಜಯಪುರ: ‘ಚುನಾವಣಾ ಬಾಂಡ್ ವಿಚಾರ ಬಹಿರಂಗವಾದ ಬಳಿಕ ಮೋದಿ ಅವರ ಮುಖವಾಡ ಕಳಚಿದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಬಬಲೇಶ್ವರ ಪಟ್ಟಣದಲ್ಲಿ ಭಾನುವಾರ ನಡೆದ ಬಬಲೇಶ್ವರ ಪಟ್ಟಣ, ಸಾರವಾಡ ಮತ್ತು ಮಮದಾಪುರ ಜಿ. ಪಂ. ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಯುವಕರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಐಟಿ, ಇಡಿ, ಸಿಬಿಐ ದಾಳಿಗೆ ಒಳಗಾದವರು ಚುನಾವಣಾ ಬಾಂಡ್ ಖರೀದಿಸಿ, ಹಣ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ನೀಡದಿದ್ದರೆ ಈ ವಿಚಾರ ಹೊರಗೆ ಬರುತ್ತಿರಲಿಲ್ಲ. ಕೆಲವು ಕಂಪನಿಗಳ ಮೂಲ ಆಸ್ತಿಗಿಂತಲೂ ಬಾಂಡ್ ಖರೀದಿಸಲು ನೀಡಿರುವ ಹಣ ಹೆಚ್ಚಾಗಿದೆ’ ಎಂದು ಅವರು ಆರೋಪಿಸಿದರು.

‘ಬಬಲೇಶ್ವರ ಮತಕ್ಷೇತ್ರದಲ್ಲಿ ಆಲಗೂರ ಅವರಿಗೆ 50 ಸಾವಿರ ಮತಗಳ ಲೀಡ್ ಕೊಡಿಸಬೇಕು. ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ವಾತಾವರಣ ಬದಲಾಗಿದ್ದು, ಬಿಜೆಪಿ ಹವಾ ಕಾಣಿಸುತ್ತಿಲ್ಲ’ ಎಂದರು.

‘ಜಿಲ್ಲೆಯಲ್ಲಿ 4.50 ಲಕ್ಷ ಜನರಿಗೆ ಗ್ಯಾರಂಟಿ ಯೋಜನೆಗಳ ಲಾಭ ದೊರಕಿದೆ. ಇವರೆಲ್ಲರೂ ಎರಡು ಮತ ಹಾಕಿಸಿದರೆ ಆಲಗೂರ ಅತೀ ಹೆಚ್ಚು ಮತಗಳಿಂದ ಗೆಲುವು ಸಾಧಿಸಲಿದ್ದಾರೆ’ ಎಂದು  ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಮಾತನಾಡಿ, ‘ಎಲ್ಲ ನಾಯಕರ ಒಮ್ಮತದ ಅಭ್ಯರ್ಥಿಯಾಗಿ ನನಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ಸಿಗೆ ಮತ ಕೇಳುವ ಹಕ್ಕಿದೆ, ಬಿಜೆಪಿಗೆ ಹಕ್ಕಿಲ್ಲ. ನೀಡಿದ ಭರವಸೆಗಳನ್ನು ಕಾಂಗ್ರೆಸ್ ಈಡೇರಿಸಿದೆ’ ಎಂದರು.

‘ಸಂಸದ ಜಿಗಜಿಣಗಿ ಅವರನ್ನು ಬದಲಾವಣೆ ಮಾಡುವ ಪರ್ವಕಾಲ ಬಂದಿದೆ. 25 ವರ್ಷಗಳಿಂದ ಸಂಸದರಾಗಿ ಜಿಗಜಿಣಗಿ ಚಿಕ್ಕೋಡಿ, ವಿಜಯಪುರದಲ್ಲಿ ಯಾವ ಕೆಲಸವನ್ನೂ ಮಾಡಿಲ್ಲ’ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ವಿ.ಎಸ್.ಪಾಟೀಲ, ಕೆ.ಎಚ್.ಮುಂಬಾರೆಡ್ಡಿ, ಬಾಪುಗೌಡ ಪಾಟೀಲ ಶೇಗುಣಸಿ, ಚನ್ನಪ್ಪ ಕೊಪ್ಪದ, ಮುತ್ತಪ್ಪ ಶಿವಣ್ಣವರ, ವಿದ್ಯಾರಾಣಿ ತುಂಗಳ, ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಡಿ. ಎಲ್. ಚವ್ಹಾಣ, ಧರ್ಮರಾಜ ಬಿಳೂರ, ಬಾಬುಗೌಡ ಪಾಟೀಲ ಯಕ್ಕುಂಡಿ, ಸುಜಾತಾ ಕಳ್ಳಿಮನಿ, ಬಿ. ಜಿ. ಬಿರಾದಾರ, ಆರ್. ಜಿ. ಯರನಾಳ, ಭೀಮಶಿ ಬಾಗಾದಿ, ಗೀತಾಂಜಲಿ ಪಾಟೀಲ, ಸುಜಾತಾ ಜಂಗಮಶೆಟ್ಟಿ, ದಾನಮ್ಮ ಜಿರಲಿ, ಆನಂದ ಬೂದಿಹಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT