ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದೇಬಿಹಾಳ: ಕಾಂಪೌಂಡ್‌ ಕುಸಿತ; ಕಾರ್ಮಿಕ ಸಾವು

Published 18 ಮಾರ್ಚ್ 2024, 15:04 IST
Last Updated 18 ಮಾರ್ಚ್ 2024, 15:04 IST
ಅಕ್ಷರ ಗಾತ್ರ

ಮುದ್ದೇಬಿಹಾಳ(ವಿಜಯಪುರ): ನಿರ್ಮಾಣ ಹಂತದಲ್ಲಿರುವ ಕೆಪಿಟಿಸಿಎಲ್ ವಿದ್ಯುತ್ ಕೇಂದ್ರದ ಆವರಣ ಗೋಡೆ(ಕಾಂಪೌಂಡ್‌) ಕುಸಿದಿದ್ದರಿಂದ ಕಾರ್ಮಿಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಜಟ್ಟಗಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕು ಕನ್ನಿಹಳ್ಳಿಯ ಬಸವಲಿಂಗಯ್ಯ ಕೊಟ್ರಯ್ಯ ಹಿರೇಮಠ(38) ಸಾವನ್ನಪ್ಪಿದ್ದ ಕಾರ್ಮಿಕ.  ವೆಲ್ಡಿಂಗ್‌ ಹಾಕುವ ಕೆಲಸಕ್ಕಾಗಿ ಬಸವಲಿಂಗಯ್ಯ ಬಂದಿದ್ದರು. ಕಾಮಗಾರಿ ಪ್ರಗತಿಯಲ್ಲಿರುವಾಗಲೇ ದೊಡ್ಡ ಗಾತ್ರದ ಕಲ್ಲುಗಳು ಉರುಳಿವೆ.

ಬೆಂಗಳೂರಿನ ಕುಮಾರ ಎಲೆಕ್ಟ್ರಿಕಲ್ ಕಂಪನಿಯು ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಗೋಡೆ ಕುಸಿತಕ್ಕೆ ಕಳಪೆ ಕಾಮಗಾರಿ ಕಾರಣ ಎಂದು ಆರೋಪಿಸಲಾಗಿದೆ.

ಘಟನಾ ಸ್ಥಳಕ್ಕೆ ಪಿಎಸ್‌ಐ ಸಂಜಯ ತಿಪರೆಡ್ಡಿ, ಅಪರಾಧ ವಿಭಾಗದ ಎಎಸ್‌ಐ ಎಸ್.ಎನ್.ನಾಯ್ಕ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸ್ಥಳೀಯರ ಆಕ್ರೋಶ: ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರ ಕೊಡುವ ಬಗ್ಗೆಯಾಗಲೀ, ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರನ ಮೇಲಾಗಲೀ ಕ್ರಮ ಕೈಗೊಳ್ಳುವ ಮಾತು ಆಡುತ್ತಿಲ್ಲ ಎಂದು ನೆರೆದಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT