ಸಿಂದಗಿ: ಪಟ್ಟಣದ ವಿಜಯಪುರ ರಸ್ತೆಯಲ್ಲಿನ ಹೊನ್ನಪ್ಪಗೌಡ ಬಡಾವಣೆಯಲ್ಲಿ 2 ಎಕರೆ 36 ಗುಂಟೆ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಟ್ರೀ ಕಾರ್ಕ್ ಯೋಜನೆಯಡಿ ₹ 1 ಕೋಟಿ ಅನುದಾನದಡಿ ಸಾಲು ಮರದ ತಿಮ್ಮಕ್ಕನವರ ವೃಕ್ಷೊದ್ಯಾನ ನಿರ್ಮಾಣಕ್ಕೆ ಶಾಸಕ ಅಶೋಕ ಮನಗೂಳಿ ಮುಂದಾಗಿದ್ದಾರೆ. ಈಗಾಗಲೇ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ.

ಈ ಉದ್ಯಾನದಲ್ಲಿ ವಾಯು ವಿಹಾರ ಮಾಡುವ ವ್ಯವಸ್ಥೆ ಇದೆ. ಯೋಗ ವೇದಿಕೆ ಇದೆ. ಮಕ್ಕಳಿಗೆ ಆಟವಾಡಲು ಆಟಿಕೆಗಳನ್ನು ಅಳವಡಿಸಲಾಗಿದೆ. ವಿಶ್ರಾಂತಿ ಪಡೆಯಲು ಆಸನಗಳಿವೆ. ಜಿಮ್ ವ್ಯವಸ್ಥೆಯೂ ಇದೆ. ಪರಗೋಲಗಳಿವೆ.

ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ. ಕುಡಿಯುವ ನೀರಿನ ಆರ್ ಒ ಪ್ಲಾಂಟ್ ಇದೆ. ಶೌಚಾಲಯ ವ್ಯವಸ್ಥೆಯೂ ಮಾಡಲಾಗಿದೆ. ಬೆಳಿಗ್ಗೆ 6 ರಿಂದ ಸಂಜೆ 7 ರವರೆಗೆ ಉದ್ಯಾನ ತೆರೆದಿರುತ್ತದೆ ಎಂದು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರಾಜೀವ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಂದಗಿಯಲ್ಲೊಂದು ಸುಸಜ್ಜಿತ ಉದ್ಯಾನ ನಿರ್ಮಾಣಗೊಂಡಿರುವುದು ಸಂತಸ ತರಿಸಿದೆ. ಶೀಘ್ರದಲ್ಲಿಯೇ ಲೋಕಾರ್ಪಣೆಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ಶಾಸಕ ಮನಗೂಳಿಯವರು ಪ್ರಾದೇಶಿಕ ಅರಣ್ಯ ಇಲಾಖೆಯ ಟ್ರೀ ಪಾರ್ಕ್ ಯೋಜನೆಯಡಿ ₹ 1 ಕೋಟಿ ಅನುದಾನ ಮಂಜೂರುಗೊಳಿಸಿದ್ದು ಸುಂದರವಾದ ವೃಕ್ಷೊದ್ಯಾನ ನಿರ್ಮಾಣಗೊಳ್ಳಲು ಸಾಧ್ಯವಾಗಿದೆ.
– ರಾಜೀವ್ ಬಿರಾದಾರ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಸಿಂದಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.