ವಿಜಯಪುರ: ಇಲ್ಲಿಯ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಜಯತೀರ್ಥರ ಆರಾಧನೆ ನಡೆಯಿತು.

ಬೆಳಿಗ್ಗೆ ಗುರುಸಾರ್ವಭೌಮರ ಅಷ್ಟೋತ್ತರ, ಸುಧಾ ಪಾರಾಯಣ, ಬಳಿಕ ವೃಂದಾವನಕ್ಕೆ ಫಲ ಪಂಚಾಮೃತ, ಅಲಂಕಾರ, ಮಹಾಪೂಜೆ ಜರುಗಿದವು.

ಜಯತೀರ್ಥರ ಭಾವಚಿತ್ರಕ್ಕೆ ಹೂಮಾಲೆಗಳಿಂದ ಅಲಂಕರಿಸಿ, ಶ್ರದ್ಧಾಭಕ್ತಿಯಿಂದ ನಮಿಸಲಾಯಿತು. ಆನಂತರ ಮಠದ ಒಳಾವರಣದಲ್ಲಿ ಟೀಕಾರಾಯರ ರಚಿಸಿದ ಗ್ರಂಥಗಳನ್ನು ಹಾಗೂ ಭಾವಚಿತ್ರವನ್ನು ಅಲಂಕೃತ ರಥದಲ್ಲಿಟ್ಟು ರಥೋತ್ಸವ ನಡೆಸಲಾಯಿತು.

ರಥೋತ್ಸವ ಸಮಯದಲ್ಲಿ ದೇವರ ನಾಮಗಳ ಸುಮಧುರ ಹಾಡುಗಳು ಭಕ್ತರ ಭಕ್ತಿಯ ಪರಾಕಾಷ್ಠೆ ಮಠದ ಆವರಣದಲ್ಲಿ ಮಾರ್ದನಿಸಿದವು.

ಪಂಡಿತ ಕೃಷ್ಣಾಚಾರ್ಯ ಕಾಖಂಡಕಿ ಪ್ರವಚನ ನೀಡಿ, ‘ಜಯತೀರ್ಥ ಗುರುವರ್ಯರ ನುಡಿಗಳು ನಮಗೆ ಕಾಮಧೇನು ಇದ್ದಂತೆ’ ಎಂದರು.

‘ಸನಾನತ ಹಿಂದು ಪರಂಪರೆಯ ಯತಿಶ್ರೇಷ್ಠರಲ್ಲಿ ಅವರೂ ಒಬ್ಬರಾಗಿದ್ದರು, ಅವರು ರಚಿಸಿದ ಗ್ರಂಥಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕಿದೆ’ ಎಂದು ತಿಳಿಸಿದರು.

ಬೆಳಿಗ್ಗೆಯಿಂದಲೇ ಅಸಂಖ್ಯ ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಆಗಮಿಸಿ ವೃಂದಾವನದ ದರ್ಶನ ಪಡೆದರು. ವೃಂದಾವನವನ್ನು ಮಠದ ಅರ್ಚಕ ರವಿ ಆಚಾರ್ಯ ಹಾಗೂ ಶ್ರೀಧರಾಚಾರ್ಯ ಅಲಂಕರಿಸಿದ್ದರು.

ಮಠದ ವಿಚಾರಣಾಕರ್ತಾ ಗೋಪಾಲ ನಾಯಕ, ವಾಮನರಾವ್ ದೇಶಪಾಂಡೆ, ಕೆ.ಜಿ. ದೇಶಪಾಂಡೆ, ಕೃಷ್ಣ ಪಡಗಾನೂರ, ದಾಮೋದರಾಚಾರ್ಯ, ಬಂಡಾಚಾರ್ಯ ಜೋಶಿ (ಕೂಡಗಿ), ಪ್ರಕಾಶ ಬಿಜಾಪುರ, ವಿಜಯೀಂದ್ರ ಡಿ. ಜೋಶಿ, ಬಿ.ಜಿ.ಜೋಶಿ, ಪವಮಾನ ಜೋಶಿ, ಪ್ರಾಣೇಶ ಪಾಟೀಲ, ಡಿ.ಆರ್. ನಾಡಿಗ, ಭೀಮಣ್ಣ ಕುಲಕರ್ಣಿ, ಸಂತೋಷ ಕುಲಕರ್ಣಿ (ಸತ್ತಿ) ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.