ವಿಜಯಪುರ: ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ 12 ಶಿಕ್ಷಕರನ್ನು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಬಿರಾದಾರ ತಿಳಿಸಿದ್ದಾರೆ.
ಪ್ರಾಥಮಿಕ ವಿಭಾಗದಿಂದ 7, ಪ್ರೌಢಶಾಲೆ ವಿಭಾಗದ ಐವರು ಶಿಕ್ಷಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಾಥಮಿಕ ವಿಭಾಗ: ಇವಣಗಿ ಗ್ರಾಮದ ಕೆಎಚ್ಪಿಎಸ್ ಶಾಲೆಯ ಸಹ ಶಿಕ್ಷಕಿ ಗಿರಿಜಾ ಬ.ಪಾಟೀಲ, ಸಹ ಶಿಕ್ಷಕರಾದ ಸಿ.ಎಂ.ಬಾಸರಗಾಂವ (ಎಲ್ಪಿಎಸ್ ಬನಪುರೆ ವಸ್ತಿ, ಜಿಗಜೇವಣಿ), ಎ.ಎಂ.ಹೊಸೂರ (ಯುಬಿಎಚ್ಪಿಎಸ್ ಹಿರೇಮಸಳಿ), ಆರ್.ಆರ್.ಹುಣಸಿಗಿಡದ (ಎಲ್ಪಿಎಸ್ ಬರಟಗಿ ಎಲ್.ಟಿ.2), ದೈಹಿಕ ಶಿಕ್ಷಣ ಶಿಕ್ಷಕ ಎಸ್.ಆರ್. ಜಾಗೀರದಾರ (ಕೆಬಿಎಸ್ ನಂ.1 ವಿಜಯಪುರ), ಮುಖ್ಯೋಪಾಧ್ಯಾಯರಾದ ಎಸ್.ಎಚ್.ಬಿರಾದಾರ (ಎಚ್ಪಿಎಸ್, ವಿಭೂತಿಹಳ್ಳಿ), ಆರ್.ವೈ.ದಾಸರ (ಕೆಬಿಎಚ್ಪಿಎಸ್ ತಾಳಿಕೋಟೆ).
ಪ್ರೌಢಶಾಲೆ ವಿಭಾಗ: ಮುಖ್ಯೋಪಾಧ್ಯಾಯ ಎಸ್.ವಿ.ಬಿರಾದಾರ (ಎಸ್.ಎಸ್.ಪ್ರೌಢಶಾಲೆ, ಸುಂಗಠಾಣ), ಸಂಗೀತ ಶಿಕ್ಷಕ ಬಸವರಾಜ ಹಿರೇಮಠ (ಬಿಎಲ್ಡಿಇ ಬಾಲಕಿಯರ ಪ್ರೌಢಶಾಲೆ,- ವಿಜಯಪುರ), ಸಹ ಶಿಕ್ಷಕರಾದ ಅಜಿತ ಗಾವಡೆ (ಸರ್ಕಾರಿ ಪ್ರೌಢಶಾಲೆ, ಹಡಲಸಂಗ), ವಿ.ಎನ್.ಯಾತಗಿರಿ (ಸರ್ಕಾರಿ ಪ್ರೌಢಶಾಲೆ, ಪೀರಾಪುರ) ದೈಹಿಕ ಶಿಕ್ಷಣ ಶಿಕ್ಷಕ ಸೋಮನಗೌಡ ಬರಗಿ (ಗ್ರಾಮೀಣ ವಿದ್ಯಾವರ್ಧಕ ಸಂಘ, ಹಣಮಾಪುರ) ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಡಿಡಿಪಿಐ ಬಿರಾದಾರ ತಿಳಿಸಿದ್ದಾರೆ.