ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಗುರುವಾರ ಮಧ್ಯಾಹ್ನ ಮಳೆ ಸುರಿಯಿತು. ಬುಧವಾರ ರಾತ್ರಿ 11. 30ಕ್ಕೆ ಆರಂಭವಾದ ಮಳೆ ಒಂದು ಗಂಟೆಗಿಂತ ಹೆಚ್ಚು ಕಾಲ ಸುರಿಯಿತು. ಮಳೆಯ ಅರ್ಭಟ ಜೋರಾಗಿತ್ತು. ಗುರುವಾರ ಮಧ್ಯಾಹ್ನ ವೇಳೆ ಪಟ್ಟಣ ಹಾಗೂ ಸುತ್ತಮುತ್ತಲೂ ಪ್ರದೇಶಗಳಲ್ಲಿ ಕೆಲ ಹೊತ್ತು ಮಳೆಯಾಯಿತು.

ಮಳೆಯಿಂದಾಗಿ ಅಲ್ಲಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಅಲ್ಲದೇ ಜಮೀನಿನಲ್ಲಿ ನೀರು ಹರಿದು ಬದುವಿನಲ್ಲಿ ನೀರು ನಿಂತಿದೆ. ಹೊಲಗಳಲ್ಲಿ ನೀರು ನಿಂತು ಕೆರೆಯ ಪರಿಸ್ಥಿತಿ ಕಂಡುಬಂತು.

ಕಳೆದ ಒಂದು ವಾರದಿಂದ ಆರಂಭವಾದ ಮಳೆಯಿಂದಾಗಿ ರೈತರನ್ನು ಕೃಷಿ ಚಟುವಟಿಕೆಯಲ್ಲಿ ತೊಡಗುವ ಉತ್ಸಾಹ ಹೆಚ್ಚಿಸಿದೆ. ಯಾವ ಬೆಳೆಯನ್ನು ಬೆಳೆಯಬೇಕು ಎಂಬ ಯೋಚನೆಯಲ್ಲಿ ತೊಡಗಿದ ರೈತರು ಬೀಜ, ಗೊಬ್ಬರಗಳನ್ನು ಸಂಗ್ರಹಿಸುವತ್ತ ಗಮನ ಹರಿಸುತ್ತಿದ್ದಾರೆ.

ತಾಲ್ಲೂಕಿನ ವಿವಿಧ ಮಳೆ ಮಾಪನ ಕೇಂದ್ರದಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ದಾಖಲಾದ ಮಳೆ ವಿವಿರ ಹೀಗಿದೆ.
ಬಸವನಬಾಗೇವಾಡಿ (47.4 ಮಿ.ಮೀ), ಆಲಮಟ್ಟಿ (28.4 ಮಿ.ಮೀ), ಆರೇಶಂಕರ (17.4 ಮಿ.ಮೀ), ಹೂವಿನಹಿಪ್ಪರಗಿ (40.2 ಮಿ.ಮೀ), ಮಟ್ಟಿಹಾಳ (8 ಮಿ.ಮೀ), ಮನಗೂಳಿ ಕೆಂದ್ರದಲ್ಲಿ (19 ಮಿ.ಮೀ) ಮಳೆಯಾದ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.