ಆಲಮೇಲ: ಸಂಗೀತ ಆಲಿಸುವುದರಿಂದ ಮನ್ಯಷನಲ್ಲಿ ಮೃದುತ್ವ ಗುಣಗಳು ಬರುತ್ತವೆ,ಉತ್ತಮ ಸಂಗೀತವನ್ನು ಇಲ್ಲಿನ ಕಲಾವಿದರು ಕಳೆದ ಹತ್ತು ವರ್ಷಗಳಿಂದ ನೀಡುತ್ತಾ ಬಂದಿರುವುದು ಸ್ತುತ್ಯಾರ್ಹ ಮತ್ತು ಆದರಣೀಯವಾಗಿದೆ ಎಂದು ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಹೇಳಿದರು.

ಅವರು ಇಲ್ಲಿನ ಮೂರುಜಾವಧೀಶ್ವರ ಮಠದಲ್ಲಿ ಭಾನುವಾರ ನಡೆದ ಭಕ್ತಿ ವಂದನಾ ದಶಮಾನೋತ್ವವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದರು.

ವಿಶ್ವ ಕರ್ಮರು ಜಗತ್ತಿನ ನವ ನಿರ್ಮಾಣ ಮಾಡಿದರು. ಅವರನ್ನು ಶಿಲ್ಪಿಗಳು ಎನ್ನಲಾಗುತ್ತದೆ. ಅವರಿಲ್ಲದ ಸಂಸ್ಕ್ರತಿ ಇಲ್ಲ,ಇಲ್ಲಿನ ಈ ಮಠದಲ್ಲಿ ವಿಶ್ವಕರ್ಮದ ಶ್ರೀಗಳು ಉತ್ತಮ ಸೇವೆ ನೀಡಿದ್ದರಿಂದ ಇಲ್ಲಿ 10 ವರ್ಷಗಳ ಕಾಲ ಸಂಗೀತ ಸೇವೆ ನಿರಂತರವಾಗಿ ಪೋಷಿಸಿಕೊಂಡು ಬಂದಿದ್ದಾರೆ. ಅದನ್ನು ಮೆಚ್ಚುತಕ್ಕಂತಹದ್ದು ಎಂದರು.

ಸಮಾಜದ ಎಲ್ಲ ಒಳಪಂಗಡಗಳು ಭೇದ ಮರೆತು ಒಗ್ಗಟ್ಟಿನಿಂದ ಸಂಘಟನೆಗೆ ಮುಂದಾಗಬೇಕಾಗಿದೆ. ಒಗ್ಗಟ್ಟಿನಿಂದ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡಿ, ಶೈಕ್ಷಣಿಕವಾಗಿ ಉನ್ನತಿ ಸಾಧಿಸಿದರೆ ರಾಜಕೀಯ ಮತ್ತು ಸಾಮಾಜಿಕ ಬಲ ಸಿಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗಂಗಾಧರ ಪತ್ತಾರ ವಿಶ್ವಕರ್ಮ ಜನಾಂಗ ಇಂದು ಸಣ್ಣ ಪ್ರಮಾಣ ದಲ್ಲಿದ್ದರೂ ಅವರು ಸಮಾಜಕ್ಕೆ ಕೊಟ್ಟ ಸೇವೆ ಅನನ್ಯ, ಆದರೆ ಇಂದು ಅವರನ್ನು ಸರಿಯಾದ ರೀತಿಯಲ್ಲಿ ಅವಕಾಶ ಕೊಡುವಲ್ಲಿ ಸರಕಾರ ಹಿಂದೆ ಬಿದ್ದಿದೆ. ಈ ಜನಾಂಗದ ಅಭಿವೃದ್ಧಿಗೆ ರಾಜಕೀಯ ಇಚ್ಚಾಶಕ್ತಿಯ ಕೊರತೆ ಇದೆ.

ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ ಕೊಡುವ ಕೆಲಸವನ್ನು ತಾಯಂದಿರು ಮಾಡಬೇಕಾಗಿದೆ ಎಂದರು.
ಶ್ರೀಶೈಲ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಲಾವಿದ ಮೋನಪ್ಪ ಬಡಿಗೇರ ಅವರನ್ನು ಸನ್ಮಾನ ನೀಡಲಾಯಿತು.

ವೇದಿಕೆಯಲ್ಲಿ ಆರ್.ಕೆ. ಕುಲಕರ್ಣಿ, ಲಚ್ಚಪ್ಪ ಪತ್ತಾರ, ಶ್ರೀಧರಾಚ್ಯಾರರು ಮೊದಲಾದವರು ಭಾಗವಹಿಸಿದ್ದರು.
ದುಂಡಮ್ಮ ಬಡಿಗೇರ, ವಿಜಯಲಕ್ಷ್ಮಿ ಸಲಗೊಂಡ ಪ್ರಾರ್ಥನೆ ಗೀತೆ ಹಾಡಿದರು. ರಾಜು ಬಡಿಗೇರ ಸ್ವಾಗತಿಸಿದರು. ಅಶೋಕ ಬಡಿಗೇರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.