ವಿಜಯಪುರ: ಅದೊಂದು ಕೇವಲ ಪ್ರವಾಸಿತಾಣವಲ್ಲ; ಪೈಶಾಚಿಕ, ಭೀಬತ್ಸ, ಸಾಮೂಹಿಕ ಕೊಲೆಗೆ ಸಾಕ್ಷಿಯಾದ ಸ್ಮಾರಕ. ಅಲ್ಲಿ ನಡೆದಿರುವುದು ಒಂದಲ್ಲ, ಎರಡಲ್ಲ, ಮೂರಲ್ಲ... ಬರೋಬ್ಬರಿ 60ಕ್ಕೂ ಅಧಿಕ ಹತ್ಯೆಗಳು! ಇಷ್ಟೊಂದು ಕೊಲೆಗಳಿಗೆ ಇಂದಿಗೂ ಮೂಕ ಸಾಕ್ಷಿಯಾಗಿ ನಿಂತಿದೆ ವಿಜಯಪುರದ ‘ಸಾಠ್ ಕಬರ್’ ಎಂಬ ಐತಿಹಾಸಿಕ ಸ್ಮಾರಕ.

ಹೆಸರೇ ಹೇಳುವಂತೆ ಇದು 60 ಜನರ ಸಮಾಧಿ. ಈ ಸಾಮೂಹಿಕ ಸಮಾಧಿ ಯಾರಿಗೆ ಸಂಬಂಧಿಸಿದ್ದು? ಇಷ್ಟೊಂದು ಜನರನ್ನು ಒಂದೇ ಕಡೆ ಹೂತಿರುವುದು ಏಕೆ? ಈ ಸಮಾಧಿ ಮಾಡಿರುವುದಾದರೂ ಯಾವಾಗ? ಗೋರಿಗಳನ್ನು ಕಟ್ಟಿಸಿದವರು ಯಾರು? ಪ್ರೀತಿಯ ಸ್ಮರಣೆಗಾಗಿ ಕಟ್ಟಿಸಿದ ಸಮಾಧಿಗಳೇ ಅಥವಾ ಸೇಡಿನ ಸಮಾಧಿಗಳೇ? ಏತಕ್ಕಾಗಿ ಸಾಮೂಹಿಕ ಸಮಾಧಿ ಕಟ್ಟಿದ್ದಾರೆ? 63 ಸಮಾಧಿಗಳಿದ್ದರೂ 'ಅರವತ್ತು ಸಮಾಧಿಗಳು' (Sixty Graves) ಎಂದು ಏಕೆ ಜನಜನಿತವಾಗಿದೆ? ಈ ಸಮಾಧಿಗಳನ್ನು ಸ್ಮಾರಕ ಎಂದು ಏಕೆ ಕರೆಯಲಾಗುತ್ತದೆ? ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಈ ಸಮಾಧಿಯನ್ನು ‘ಐತಿಹಾಸಿಕ ಸ್ಮಾರಕ’ ಎಂದು ಸಂಕ್ಷಿಸಿರುವುದು ಏಕೆ? ಈ ಸಮಾಧಿಗಳ ಬಗ್ಗೆ ಸ್ಥಳೀಯ ಜನರಲ್ಲಿ ಇಂದಿಗೂ ಹರಿದಾಡುತ್ತಿರುವ ಕಥೆ ಏನು? ಇತಿಹಾಸದ ಪುಟಗಳು ಏನು ಹೇಳುತ್ತವೆ? ಇತಿಹಾಸಕಾರರು ಏನು ಹೇಳುತ್ತಾರೆ? ಸಾಠ್ ಕಬರ್ ಹಿಂದಿರುವುದು ನೈಜ ಕಥೆಯೋ ಅಥವಾ ದಂತ ಕಥೆಯೋ? ಅಥವಾ ದುರಂತ ಕಥೆಯೋ? ಎಂಬೆಲ್ಲ ಹತ್ತಾರು ಪ್ರಶ್ನೆಗಳು ಈ ಸ್ಥಳಕ್ಕೆ ಭೇಟಿ ನೀಡುವ ಪ್ರವಾಸಿಗರಲ್ಲಿ ಅನುರಣಿಸದೇ ಇರದು.

‘ಬಾರಾ ಕಮಾನ್’ ಸ್ಮಾರಕ ಕಟ್ಟಿಸಿದ ಎರಡನೇ ಅಲಿ ಆದಿಲ್ ಶಾಹ ಆಳ್ವಿಕೆ ಕಾಲದಲ್ಲಿ ‘ಬಿಜಾಪುರ ಸಾಮ್ರಾಜ್ಯ’ವು ಮರಾಠ ನಾಯಕ ಛತ್ರಪತಿ ಶಿವಾಜಿ ಉಪಟಳದಿಂದ ನಲುಗಿ ಹೋಗಿರುತ್ತದೆ. ಶಿವಾಜಿಯನ್ನು ಹತ್ತಿಕ್ಕಲು ಅಲಿ ಆದಿಲ್ ಶಾಹ ತನ್ನ ಸೇನಾಧಿಪತಿಗಳಿಗೆ ಕರೆ ನೀಡುತ್ತಾನೆ. ಶಿವಾಜಿ ಸದ್ಧಡಗಿಸುವುದಾಗಿ ‘ರಣವೀಳ್ಯಾ’ ಸ್ವೀಕರಿಸಿದ ಸೇನಾಪತಿ ಅಫ್ಜಲ್ ಖಾನ್ ಸಿದ್ಧತೆಯಲ್ಲಿ ತೊಡಗುತ್ತಾನೆ.

ಅಫ್ಜಲ್ ಖಾನ್ ಮೂಲತಃ ಅಫ್ಘಾನ್ ಮೂಲದವನು. ಬಲಶಾಲಿಯಾಗಿದ್ದ ಆತ ಹಲವು ಯುದ್ಧಗಳನ್ನು ಗೆದ್ದಿದ್ದರೂ ಜ್ಯೋತಿಷ್ಯದಲ್ಲಿ ಅಪಾರ ನಂಬಿಕೆ ಇಟ್ಟಿದ್ದನು ಮತ್ತು ಯಾವುದೇ ಯುದ್ಧ ಪ್ರಾರಂಭಿಸುವ ಮೊದಲು ಜ್ಯೋತಿಷಿಗಳ ಮೊರೆ ಹೋಗುತ್ತಿದ್ದನು ಎನ್ನಲಾಗದೆ.

1659ರಲ್ಲಿ ಅಫ್ಜಲ್ ಖಾನ್ ಶಿವಾಜಿಯ ವಿರುದ್ಧ ಯುದ್ಧಕ್ಕೆ ಹೋಗುವ ಮುನ್ನಾ ಸೂಫಿ ಪೀರ್ ಬಳಿ ಜ್ಯೋತಿಷ್ಯ ಕೇಳುತ್ತಾನೆ. ‘ತಾನು ಮರಳಿ ಬರುವುದಿಲ್ಲ’ ಎಂಬ ಸಂದೇಶದಿಂದ ವಿಚಲಿತನಾಗುತ್ತಾನೆ.

‘ಯುದ್ಧದಲ್ಲಿ ನಾನು ಮರಣ ಹೊಂದಿದರೆ ನನ್ನ ಪತ್ನಿಯರು ಮರು ಮದುವೆಯಾಗಬಾರದು ಅಥವಾ ಎದುರಾಳಿಯ ಕೈಗೆ ಸಿಕ್ಕು ದೌರ್ಜನ್ಯಕ್ಕೆ ಒಳಗಾಗಬಾರದು’ ಎಂಬ ಉದ್ದೇಶದಿಂದ ತನ್ನ 60ಕ್ಕೂ ಹೆಚ್ಚು ಪತ್ನಿಯರನ್ನು ಬಾವಿಗೆ ತಳ್ಳಿ ಹತ್ಯೆಗೈದು, ನಂತರ ಅಲ್ಲಿ ಸಮಾಧಿಗಳನ್ನು ನಿರ್ಮಿಸಿದನೆಂಬ ದಂತಕಥೆ ಇದೆ.

ಪತ್ನಿಯರನ್ನು ಕ್ರೂರವಾಗಿ ಕೊಂದು ಸಮಾಧಿ ಮಾಡಿದ ಬಳಿಕ ಶಿವಾಜಿಯನ್ನು ಎದುರಿಸಲು ಅಫ್ಜಲ್ ಖಾನ್ ದೂರದ ಈಗಿನ ಮಹಾರಾಷ್ಟ್ರದ ಪ್ರತಾಪಗಡಕ್ಕೆ ತೆರಳುತ್ತಾನೆ. ಅಲ್ಲಿ ಯುದ್ಧದ ಬದಲು ಇಬ್ಬರ ನಡುವೆ ಸಂಧಾನ ಮಾತುಕತೆಗೆ ವೇದಿಕೆ ಸಿದ್ಧವಾಗುತ್ತದೆ.

ಅಜಾನುಬಾಹುವಾದ ಅಫ್ಜಲ್ಖಾನ್ ಸಂಧಾನದ ನೆಪದಲ್ಲಿ ಶಿವಾಜಿಯನ್ನು ಬಿಗಿದಪ್ಪಿ ಕೊಲ್ಲಲು ಕುತಂತ್ರ ರೂಪಿಸಿರುತ್ತಾನೆ. ಈ ಸಂಚನ್ನು ಮೊದಲೇ ಬಲ್ಲವನಾಗಿದ್ದ ಶಿವಾಜಿ ಆತ್ಮರಕ್ಷಣೆ ಉಡುಗೆ, ಕೈ ಬೆರಳುಗಳಿಗೆ ಹುಲಿ ಉಗುರು ಹಾಕಿಕೊಂಡು ಶಸ್ತ್ರಸಜ್ಜಿತನಾಗಿ ಬರುತ್ತಾನೆ. ಪೂರ್ವ ನಿಗದಿಯಂತೆ ಇಬ್ಬರ ಭೇಟಿಯಾಗುತ್ತದೆ. ಸಾಂಪ್ರದಾಯಿಕ ಅಪ್ಪುಗೆಯ ಸಮಯದಲ್ಲಿ ದೈತ್ಯ ಅಫ್ಜಲ್ ಖಾನ್, ಶಿವಾಜಿಯನ್ನು ತನ್ನ ತೋಳುಗಳಲ್ಲಿ ಪುಡಿಗಟ್ಟಲು ಪ್ರಯತ್ನಿಸುತ್ತಾನೆ. ಆದರೆ, ರಕ್ಷಾಕವಚದಿಂದಾಗಿ ಶಿವಾಜಿ ಬದುಕುಳಿಯುತ್ತಾನೆ. ಗೆರಿಲ್ಲಾ ಯುದ್ಧ ಪ್ರಣೀತನಾಗಿದ್ದ ಶಿವಾಜಿ ತನ್ನ ತಂತ್ರಗಾರಿಕೆಯಿಂದ ಅಫ್ಜಲ್ಖಾನ್ನನ್ನು ಹತ್ಯೆಗೈಯುತ್ತಾನೆ. ಶಿವಾಜಿಯು ಅಫ್ಜಲ್ ಖಾನ್ನ ಮೃತ ದೇಹವನ್ನು ಪ್ರತಾಪಗಡ ಕೋಟೆಯ ಬುಡದಲ್ಲಿ ಸಮಾಧಿ ಮಾಡುತ್ತಾನೆ ಎಂದು ಇತಿಹಾಸದ ಪುಟಗಳಿಂದ ತಿಳಿಯುತ್ತದೆ.

ಕೊಲೆಗೆ ದಾಖಲೆಯಿಲ್ಲ...

‘ಅಫ್ಜಲ್ ಖಾನನ ಕ್ರೂರತೆಗೆ ಸಾಕ್ಷಿಯಾಗಿ ನಿಂತಿರುವ ಸಾಠ್ ಕಬರ್ ಕುರಿತು ಪ್ರಚಲಿತದಲ್ಲಿರುವ 60 ಪತ್ನಿಯರ ಕೊಲೆಗೈದ ದಂತಕಥೆಯ ಬಗ್ಗೆ ಇತಿಹಾಸದ ಪುಟಗಳಲ್ಲಿ ಯಾವುದೇ ಲಿಖಿತ ದಾಖಲೆಗಳಾಗಲಿ, ಸ್ಪಷ್ಟ ಉಲ್ಲೇಖಗಳಾಲಿ ಇಲ್ಲ’ ಎನ್ನುತ್ತಾರೆ ಖ್ಯಾತ ಸಂಶೋಧಕ, ಇತಿಹಾಸಕಾರ ವಿಜಯಪುರದ ಕೃಷ್ಣ ಕೊಲ್ಹಾರ ಕುಲಕರ್ಣಿ.

‘ಸಾಠ್ ಕಬರ್ ಬಗ್ಗೆ ತಪ್ಪು ಇತಿಹಾಸ ಜನಜನಿತವಾಗಿದೆ. ಇದಕ್ಕೆ ಯಾವುದೇ ಆಧಾರ ಇಲ್ಲ. ನಾನು ಇದುವರೆಗೆ ಅಭ್ಯಾಸ ಮಾಡಿದ ಯಾವುದೇ ಇತಿಹಾಸದ ಪುಸ್ತಕಗಳಲ್ಲಿ ಎಲ್ಲಿಯೂ ಅಫ್ಜಲ್ಖಾನ್ ತನ್ನ ಪತ್ನಿಯರನ್ನು ಕೊಲೆ ಮಾಡಿರುವ ಕೃತ್ಯದ ಬಗ್ಗೆ ದಾಖಲಾಗಿಲ್ಲ. ಅಲ್ಲದೇ, ಸಾಠ್ ಕಬರ್ನಲ್ಲಿ ಸಮಾಧಿಯಾದವರರೆಲ್ಲರೂ ಅಫ್ಜಲ್ಖಾನ್ ಪತ್ನಿಯರು ಎಂದು ಹೇಳಲು ಆಗದು. ಈ ಬಗ್ಗೆ ಇದುವರೆಗೆ ಯಾವುದೇ ಆಧಾರ ಸಿಗದೇ ಇರುವುದರಿಂದ ಇದೊಂದು ದಂತ ಕಥೆ. ಸತ್ಯಾಸತ್ಯತೆ ಬೆಳಕಿಗೆ ಬರಬೇಕೆಂದರೆ ಈ ಬಗ್ಗೆ ಇನ್ನಷ್ಟು ಅಧ್ಯಯನವಾಗಬೇಕಿದೆ’ ಎನ್ನುತ್ತಾರೆ ಅವರು.

ನಿಗೂಢವಾಗಿಯೇ ಉಳಿದ ಸಾಠ್ ಕಬರ್...

ವಿಜಯಪುರಕ್ಕೆ ಬರುವ ಬಹುತೇಕ ಪ್ರವಾಸಿಗರು ವಿಶ್ವ ಪ್ರಸಿದ್ಧ ಗೋಳಗುಮ್ಮಟ, ಬಾರಾ ಕಮಾನ್, ಇಬ್ರಾಹಿಂ ರೋಜಾದಂತಹ ನಾಲ್ಕೈದು ಸ್ಮಾರಕಗಳ ವೀಕ್ಷಣೆಗೆ ಸೀಮಿತರಾಗುತ್ತಾರೆ. ಪ್ರವಾಸಿಗರಿಂದ ದೂರ ಇರುವ ಹತ್ತಾರು ಸ್ಮಾರಕಗಳು ವಿಜಯಪುರದಲ್ಲಿ ಇವೆ. ಅವುಗಳಲ್ಲೇ ಅತ್ಯಂತ ರೋಚಕ, ಭಯಾನಕ ಕಥೆ ಹೇಳುವ ‘ಸಾಠ್ ಕಬರ್’ ಸ್ಮಾರಕವು ವಿಜಯಪುರ ನಗರಕ್ಕೆ ಹೊಂದಿಕೊಂಡಿರುವ ‘ನವರಸಪುರ’ ಎಂಬಲ್ಲಿದೆ.

ಕಪ್ಪು ಕಲ್ಲಿನ ವೇದಿಕೆಯ ಮೇಲೆ ಒಟ್ಟು 63 ಸಮಾಧಿಗಳಿವೆ. ಸಾಠ್ ಕಬರ್ ಆವರಣದಲ್ಲೇ ಒಂದು ಪುರಾತನವಾದ ಬಾವಿಯನ್ನು ಈಗಲೂ ನೋಡಬಹುದಾಗಿದೆ. ಬಾವಿಯನ್ನು ಕಪ್ಪು ಕಲ್ಲಿನಿಂದ ಆಲಂಕರಿಸಲಾಗಿದ್ದು, ಹೂಳು ತುಂಬಿ ಪಾಳು ಬಿದ್ದರೂ ಇಂದಿಗೂ ಭವ್ಯವಾಗಿದೆ. ಬಾವಿಯ ಪಕ್ಕದಲ್ಲೇ ಎತ್ತರದ ಗೋಪರವೂ ಇದೆ.

‘ಸಾಠ್ ಕಬರ್’ ಇಂದಿಗೂ ಪ್ರವಾಸಿಗರಿಗೆ ನಿಗೂಢವಾಗಿಯೇ ಉಳಿದಿದೆ. ಈ ಸ್ಮಾರಕವನ್ನು ವಿಜಯಪುರದ ಅದೆಷ್ಟೋ ಜನರೇ ಇಂದಿಗೂ ನೋಡಿಲ್ಲ. ಕಾರಣ ಪ್ರವಾಸೋದ್ಯಮ ಇಲಾಖೆಯಾಗಲಿ ಅಥವಾ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಾಗಲಿ ಈ ಸ್ಮಾರಕದ ಬಗ್ಗೆ ಹೆಚ್ಚಿನ ಪ್ರಚಾರ ಮಾಡಿಲ್ಲ. ಅಲ್ಲದೇ, ಅನೇಕ ಸಮಾಧಿಗಳ ಕಲ್ಲುಗಳು ಕಿತ್ತುಹೋಗಿವೆ. ಒಡೆದು ಹೋಗಿವೆ. ಆವರಣದಲ್ಲಿರುವ ಕಲ್ಲಿನ ಸ್ಮಾರಕ ಶಿಥಿಲವಾಗಿ, ತೀವ್ರ ನಿರ್ಲಕ್ಷ್ಯಕ್ಕೂ ಒಳಗಾಗಿದೆ. ಇಲ್ಲಿಗೆ ಸರಿಯಾದ ಸಂಪರ್ಕ ರಸ್ತೆಯಿಲ್ಲ, ದಾರಿ ತೋರುವ ಒಂದೇ ಒಂದು ಸೂಚನಾ ಫಲಕಗಳೂ ಇಲ್ಲ. ಮುಳು–ಕಂಠಿಗಳ ನಡುವೆ ಸ್ಥಳೀಯರ ಬಳಿ ಮಾರ್ಗವನ್ನು ಕೇಳುತ್ತಾ ಸುತ್ತಿಬಳಸಿ ಹುಡುಕ ಹೋಗಬೇಕಾಗುತ್ತದೆ.

ಅಷ್ಟೊಂದು ಆಕರ್ಷಣೀಯವಲ್ಲದ ಈ ಸ್ಮಾರಕದ ಬಳಿಗೆ ಜನಸಾಮಾನ್ಯರು ಹೋಗಲೂ ಇಷ್ಟಪಡುವುದಿಲ್ಲ. ಇತಿಹಾಸದ ಬಗ್ಗೆ ಆಸಕ್ತಿ ಇರುವವರಿಗೆ ಇದೊಂದು ಅಧ್ಯಯನ ಸ್ಮಾರಕ ಎಂಬುದರಲ್ಲಿ ಎರಡು ಮಾತಿಲ್ಲ. ನಿರ್ಜನ ಪ್ರದೇಶದಲ್ಲಿ ಕಪ್ಪು ಶಿಲೆಯಿಂದ ನಿರ್ಮಿಸಲಾದ ಈ ಸಮಾಧಿಗಳು ಡಾರ್ಕ್ ಟೂರಿಸಂ (Dark Tourism) ತಾಣವಾಗಿ ಗುರುತಿಸಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.