ಬುಧವಾರ, ಡಿಸೆಂಬರ್ 11, 2019
27 °C

ಕಳಪೆ ಕಾಮಗಾರಿ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮಾಗಡಿ: ಪುರಸಭೆ ವ್ಯಾಪ್ತಿಯ ನಗರೋತ್ಧಾನ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಎಂದು ಎಪಿಎಂಸಿ ನಿರ್ದೇಶಕ ಸಿ.ಎಂ.ಮಾರೇಗೌಡ ಆರೋಪಿಸಿದರು.

ಅರಳೆಪೇಟೆಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು. ಅರಳೆಪೇಟೆ ಚರಂಡಿಯಲ್ಲಿ ಹೂಳು ತುಂಬಿದೆ. ಹೂಳು ತೆಗೆದಿದ್ದರೆ ಸಾಕಾಗಿತ್ತು. ಬದಲಾಗಿ ರಸ್ತೆಯನ್ನು ಬೇಕಾಬಿಟ್ಟಿ ಅಗೆಯಲಾಗಿದೆ. ಒಂದು ಕಡೆ ಕಟ್ಟಿರುವ ಚರಂಡಿ ಕಾಮಗಾರಿ ಕಳಪೆಯಾಗಿದೆ. ಚರಂಡಿ ನಿರ್ಮಿಸುವಾಗ ತೆಗೆದ ಗುಂಡಿಗಳಿಗೆ ತ್ಯಾಜ್ಯದಿಂದ ಕೂಡಿರುವ ಹಳೆ ಮನೆ ಮಣ್ಣು ತುಂಬಲಾಗುತ್ತಿದೆ ಎಂದರು.

ಪುರಸಭೆ ಸದಸ್ಯೆ ಶಿವರುದ್ರಮ್ಮ ವಿಜಯಕುಮಾರ್‌ ಮಾತನಾಡಿ, ಗುಣಮಟ್ಟದಲ್ಲಿ ಚರಂಡಿ ಕಾಮಗಾರಿ ನಡೆಸಲು ಗುತ್ತಿಗೆದಾರ ಮತ್ತು ಅಧಿಕಾರಿಗಳಿಗೆ ಸೂಚಿಸಿದ್ದರೂ ಮನವಿಗೆ ಸ್ಪಂದಿಸಿಲ್ಲ ಎಂದರು.

ಮುಖ್ಯಾಧಿಕಾರಿ ನಟರಾಜ್‌ ಮತ್ತು ಎಂಜಿನಿಯರ್‌ ಪ್ರಕಾಶ್‌ ಶೆಟ್ಟಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು. ಗುಣಮಟ್ಟದ ಕಾಮಗಾರಿ ಮಾಡಿಸುವುದಾಗಿ ಭರವಸೆ ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು