ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಿ ಫಲಶ್ರುತಿ| 11 ತಿಂಗಳ ಗೌರವ ಧನ ಬಂತು

ಪ್ರಜಾವಾಣಿ ವರದಿ ಫಲಶೃತಿ, ಮಾಜಿ ಶಾನುಭೋಗರಿಗೆ ವೇತನ ಜಮಾ
Last Updated 18 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಯಾದಗಿರಿ: ಕಳೆದ 11 ತಿಂಗಳಿಂದ ಮಾಜಿ ಶಾನುಭೋಗರು, ಪೊಲೀಸ್‌ ಪಾಟೀಲರು, ಪಟವಾರರು ಗೌರವಧನವಿಲ್ಲದೆ ಪರದಾಡುತ್ತಿದ್ದರು. ಈಗ ಸರ್ಕಾರ 11 ತಿಂಗಳ ಗೌರವ ಧನವನ್ನು ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಿದೆ.

ನವೆಂಬರ್ 13 ರಂದು ‘11 ತಿಂಗಳಿಂದ ಜಿಲ್ಲೆಯಲ್ಲಿ ಗೌರವಧನ ಸ್ಥಗಿತ ’ ಎನ್ನುವ ಶೀರ್ಷಿಕೆಯಡಿ ಪ್ರಜಾವಾಣಿ ವಿಸ್ತೃತ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಸರ್ಕಾರ 11 ತಿಂಗಳ ಗೌರವಧನವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಿದೆ.

ಶಾನುಭೋಗರು, ಪಟವಾರಿ, ಪೊಲೀಸ್‌ ಮಾಲಿಪಾಟೀಲ ಸೇರಿದಂತೆ ಜಿಲ್ಲೆಯಲ್ಲಿ 43 ಫಲಾನುಭವಿಗಳಿದ್ದಾರೆ. ಇವರೆಲ್ಲರೂ ವಯೋ ವೃದ್ಧರಾಗಿದ್ದು, ಚಿಕಿತ್ಸೆಗಾಗಿ ಪರದಾಡುತ್ತಿದ್ದರು. ಕೆಲವರು ಔಷಧಿಗಾಗಿ ಇನ್ನಿಲ್ಲದ ಸಮಸ್ಯೆ ಅನುಭವಿಸುತ್ತಿದ್ದರು. ಈಗ ಗೌರವ ಧನ ಜಮಾ ಆಗಿದ್ದರಿಂದ ಖುಷಿಯಾಗಿದೆ ಎನ್ನುತ್ತಾರೆ ಮಾಜಿ ಪೊಲೀಸ್‌ ಮಾಲಿ ಪಾಟೀಲ ನಾಗನಗೌಡ ಪೊಲೀಸ್‌ ಪಾಟೀಲ ಬೋನಾಳ.

ಗೌರವಧನಕ್ಕಾಗಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರೂ ವೇತನ ಸ್ಥಗಿತವಾಗಿದ್ದರಿಂದ ಬಹಳ ಬೇಸರಗೊಂಡಿದ್ದರು. ವೇತನ ಬಂದಿದ್ದರಿಂದ ಈಗ ಖುಷಿಗೊಂಡಿದ್ದಾರೆ.

***

ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದ ಗೌರವಧನ ಸ್ಥಗಿತವಾಗಿರುತ್ತದೆ. ಈಗ ಫಲಾನುಭವಿಗಳಿಗೆ ಗೌರವ ಧನ ಜಮಾ ಆಗಿದ್ದು, ಸಮಸ್ಯೆ ನಿವಾರಣೆ ಆಗಿದೆ.

–ಎಂ.ಕೂರ್ಮಾರಾವ್‌, ಜಿಲ್ಲಾಧಿಕಾರಿ

***

ಕಳೆದ 11 ತಿಂಗಳ ಹಿಂದೆ ಸ್ಥಗಿತವಾಗಿದ್ದ ಗೌರವ ಧನ ಬ್ಯಾಂಕ್‌ಗೆ ಜಮಾ ಆಗಿದೆ. ಬಹಳ ಅನುಕೂಲವಾಗಿದೆ. ನಮ್ಮ ಬಗ್ಗೆ ಕಾಳಜಿ ತೋರಿದ ‘ಪ್ರಜಾವಾಣಿ‘ಗೆ ಧನ್ಯವಾದ.

–ನರಸಿಂಗ ರಾವ್‌ ಕಾಮನಟಗಿ, ಮಾಜಿ ಪೊಲೀಸ್‌ ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT