ಗುರುವಾರ , ಆಗಸ್ಟ್ 5, 2021
21 °C
1,043ಕ್ಕೆ ಕೋವಿಡ್‌ ಸೋಂಕಿತರ ಸಂಖ್ಯೆ, 876 ಜನ ಬಿಡುಗಡೆ

ಯಾದಗಿರಿಯಲ್ಲಿ 16 ಮಂದಿಗೆ ಕೋವಿಡ್‌ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯಲ್ಲಿ ಗುರುವಾರ ಮತ್ತೆ 16 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 1,043ಕ್ಕೆ ಏರಿಕೆಯಾಗಿದೆ.

24, 26, ವರ್ಷದ ಪುರುಷ, 22, 65, 40, 4, 80 ವರ್ಷದ ಮಹಿಳೆ ಸೇರಿದಂತೆ 16 ಜನರಲ್ಲಿ ಸೋಂಕು ಕಂಡು ಬಂದಿದೆ. ಸುರಪುರ ತಾಲ್ಲೂಕಿನ ದಿವಳಗುಡ್ಡ, ಸುಗೂರಿನ ಜನರಿಗೆ ಕೋವಿಡ್‌ ಪತ್ತೆಯಾಗಿದೆ. ಸುರಪುರದ 15, ವಡಗೇರಾ ತಾಲ್ಲೂಕಿನ ಒಬ್ಬರಿಗೆ ಸೋಂಕು ತಗುಲಿದೆ. 6 ಜನ ಪುರುಷ, 10 ಮಹಿಳೆಯರು ಸೇರಿದ್ದಾರೆ. ಒಬ್ಬರು ಮಾತ್ರ ಮಹಾರಾಷ್ಟ್ರದಿಂದ ಬಂದಿದ್ದರೆ ಇನ್ನುಳಿದವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. 166 ಪ್ರಕರಣಗಳು ಕ್ರಿಯಾಶೀಲವಾಗಿದ್ದು, 105 ಧಾರಕವಲಯ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.