ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿಯಲ್ಲಿ ₹4,400 ದಂಡ, 22 ಕೇಸ್‌ ದಾಖಲು

ಮಾಸ್ಕ್‌ ಧರಿಸದವರಿಗೆ, ಅಂತರ ಕಾಪಾಡಿಕೊಳ್ಳದವರಿಗೆ ದಂಡ
Last Updated 1 ಮೇ 2020, 15:16 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲಾಧಿಕಾರಿ ಆದೇಶದ ಮೇರಿಗೆ ನಗರದಲ್ಲಿ ಶುಕ್ರವಾರ ನಗರಸಭೆ ವತಿಯಿಂದ ಮಾಸ್ಕ್‌, ಅಂತರ ಕಾಪಾಡಿಕೊಳ್ಳದವರಿಗೆ ದಂಡ ₹4,400 ದಂಡ ವಿಧಿಸಿ 22 ಪ್ರಕರಣಗಳು ದಾಖಲಿಸಿಕೊಳ್ಳಲಾಗಿದೆ.

ನಗರದ ರೈಲ್ವೆ ಸ್ಟೇಷನ್‌ ರಸ್ತೆ, ಚಿತ್ತಾಪುರ ರಸ್ತೆ, ಕಾಡ್ಲೂರು ಪೆಟ್ರೋಲ್‌ ಬಂಕ್‌, ಹತ್ತಿಕುಣಿ ರಸ್ತೆ ಸೇರಿದಂತೆ ವಿವಿಧೆಡೆ ನಗರಸಭೆ ಅಧಿಕಾರಿಗಳು ದಾಳಿ ಮಾಡಿ ದಂಡ ವಿಧಿಸಿದ್ದಾರೆ.

‘ಮಾಸ್ಕ್‌ ಧರಿಸದ್ದಕ್ಕೆ ₹100, ಗುಟ್ಕಾ ತಿಂದು ಸಾರ್ವಜನಿಕವಾಗಿ ಉಗುಳಿದವರಿಗೆ ₹100 ದಂಡ ವಿಧಿಸಲಾಗಿದೆ. ಎರಡನೇ ಬಾರಿಯೂ ನಿಯಮ ಉಲ್ಲಂಘಿಸಿದರೆ ₹200 ಮತ್ತು ₹1000 ಹಾಗೂ ಸಂಬಂಧಿಸಿದ ಪರವಾನಗಿ ರದ್ದು ಮಾಡಲು ಅವಕಾಶವಿದೆ’ ಎಂದು ನಗರಸಭೆ ಪರಿಸರ ಎಂಜಿನಿಯರ್ ಸಂಗಮೇಶ ಪನಿಶೆಟ್ಟಿ ತಿಳಿಸಿದರು.

ಹುಣಸಗಿಯಲ್ಲಿ ಈ ಕುರಿತು ನೋಟಿಸ್ ಜಾರಿ ಮಾಡಲಾಗಿದೆ.ಸುರಪುರ, ವಡಗೇರಾ, ಗುರುಮಠಕಲ್, ಕಕ್ಕೇರಾ, ಕೆಂಭಾವಿಯಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗಿದೆ. ಇನ್ನೂ ದಂಡ ವಿಧಿಸುವ ಪ್ರಕ್ರಿಯೆ ಆರಂಭವಾಗಿಲ್ಲ.

ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದಿದ್ದಲ್ಲಿ ಅಥವಾ ಉಗುಳಿದಲ್ಲಿ ಮತ್ತು ಅಂಗಡಿಗಳ ಮುಂದೆ ಅಂತರ ಕಾಪಾಡದಿದ್ದಲ್ಲಿ ಮೇ 1ರಿಂದ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರೂ ಆಗಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಪ್ರಕಟಣೆಯಲ್ಲಿ ತಿಳಿಸಿದ್ದರು. ಆದರಂತೆ ಶುಕ್ರವಾರ ಯಾದಗಿರಿ, ಶಹಾಪುರ ನಗರಸಭೆ ಅಧಿಕಾರಿಗಳು ದಂಡ ಪ್ರಯೋಗಕ್ಕೆ ಚಾಲನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT