ಹುಣಸಗಿ: ‘ಸಮೀಪದ ಅಗ್ನಿ ಗ್ರಾಮದ ಹತ್ತಿರ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯ 61.720 ಕಿ.ಮೀ.ನಲ್ಲಿ ಉಂಟಾಗಿದ್ದ ಕುಸಿತದ ಸ್ಥಳದಲ್ಲಿ ಇದೀಗ ತಾತ್ಕಾಲಿಕ ದುರಸ್ತಿ ಕಾರ್ಯ ಪೂರ್ಣಗೊಂಡಿದೆ’ ಎಂದು ಕೆಬಿಜೆಎನ್‌ಎಲ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ರೆಹಮಾನ್ಸಾಬ್ ಹೇಳಿದ್ದಾರೆ.

‘ವಾರಾಬಂದಿ ಪದ್ಧತಿಯಂತೆ ಜ.31ರ ರಾತ್ರಿ ಕಾಲುವೆಗೆ ನೀರು ಹರಿಸುವುದಕ್ಕೆ ಯಾವುದೇ ಅಡಚಣೆ ಇಲ್ಲ. ಹೀಗಾಗಿ ರೈತರು ಆತಂಕ ಪಡಬೇಕಾಗಿಲ್ಲ. ಮುಖ್ಯ ಕಾಲುವೆಯ ಈ ಸ್ಥಳದಲ್ಲಿ ಸುಮಾರು 35 ಮೀಟರ್‌ಗಳಷ್ಟು ಕುಸಿತವಾಗಿದ್ದು, ಸದ್ಯ ನೀರು ಹರಿಸುವುದಕ್ಕೆ ತೊಂದರೆ ಆಗದಂತೆ ಮರಳಿನ ಚೀಲಗಳನ್ನು ಅಳವಡಿಸಲಾಗಿದೆ’ ಎಂದರು.

‘ಜ. 21ರಂದು ಕಾಲುವೆಯ ಈ ಸ್ಥಳದಲ್ಲಿ ಕುಸಿತ ಕಂಡು ಬಂದಿದ್ದರೆ, ಇದಕ್ಕೂ ಮೊದಲು ನವೆಂಬರ್ 3 ರಂದು ಕಾಲುವೆಯ 61.45 ಕಿ.ಮೀನಲ್ಲಿ 50 ಮೀಟರ್‌ಗಳಷ್ಟು ದೊಡ್ಡ ಪ್ರಮಾಣದ ಕುಸಿತ ಕಂಡು ಬಂದಾಗ ರೈತರು ಹಾಗೂ ಮಾಜಿ ಸಚಿವ ರಾಜುಗೌಡರು ಒಮ್ಮಿಂದೊಮ್ಮಿಗೆ ನೀರು ಹರಿಸುವುದನ್ನು ಬಂದ್ ಮಾಡಿರುವುದೆ ಕಾರಣ ಎಂದು’ ನಿಗಮದ ಅಧಿಕಾರಿಗಳ ಮೇಲೆ ಹರಿಹಾಯ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.