ಅಂಗವಿಕಲ ಕ್ರೀಡಾಪಟು: 25 ಸಾವಿರ ನಗದು ಪುರಸ್ಕಾರ 

7

ಅಂಗವಿಕಲ ಕ್ರೀಡಾಪಟು: 25 ಸಾವಿರ ನಗದು ಪುರಸ್ಕಾರ 

Published:
Updated:
Deccan Herald

ಹುಣಸಗಿ: ‘ಸಾಧನೆ ಯಾರ ಸ್ವತ್ತು ಅಲ್ಲ ಅದು ಸಾಧಕನ ಸೋತ್ತು ಎಂಬುದನ್ನು ಅಂಗವಿಕಲ ಕ್ರೀಡಾಪಟು ಮಹಾಂತೇಶ ಮಡಿವಾಳರ ತೋರಿಸಿಕೊಟ್ಟಿದ್ದಾರೆ’ ಎಂದು ಬಿಜೆಪಿ ಯುವ ಮುಖಂಡ ಶಂಕರನಾಯಕ ಹೇಳಿದರು.

ಹುಣಸಗಿ ತಾಲ್ಲೂಕಿನ ವಜ್ಜಲ ಗ್ರಾಮದಲ್ಲಿ ಶಾಸಕ ರಾಜುಗೌಡರ ಪರವಾಗಿ ಅಂಗವಿಕಲ ಕ್ರೀಡಾಪಟುವಿಗೆ 25 ಸಾವಿರ ನಗದು ಸಹಾಯ ನೀಡಿ ಸನ್ಮಾನಿಸಿ ಮಾತನಾಡಿದರು.

ಸುರಪುರ ವಿಧಾನಸಭಾ ಕ್ಷೇತ್ರದಿಂದ ಅಂತರ್ ರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಪಾಲ್ಗೋಂಡು ಚಿನ್ನದ ಪದಕ ಗೆದ್ದಿರುವುದು ಸಂತಸ ವಿಷಯವಾಗಿದೆ. ಅದಕ್ಕಾಗಿಯೇ ಶಾಸಕ ರಾಜುಗೌಡ ಅವರು ಅಂಗವಿಕಲ ಕ್ರೀಡಾಪಟು ಮಹಾಂತೇಶ ಮಡಿವಾಳರ ಅವರಿಗೆ 25000 ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಿ ಕ್ರೀಡಾಪ್ರೇಮ ಮೆರೆದಿದ್ದಾರೆ ಎಂದರು.

ರಡ್ಡಿ ಸಮಾಜದ ತಾಲ್ಲೂಕು ಅಧ್ಯಕ್ಷ ಸಂಗನಗೌಡ ಪಾಟೀಲ ವಜ್ಜಲ ಮಾತನಾಡಿ, ಗ್ರಾಮೀಣ ಭಾಗದ ಪ್ರತಿಭೆಯಾಗಿರುವ ಕ್ರೀಡಾಪಟು ಮಹಾಂತೇಶ ಮಡಿವಾಳರ ನೇಪಾಳ ದಲ್ಲಿ ನಡೆದ ಸೌತ್ ವೇಷ್ಟ್ ಏಷಿಯನ್ ಪ್ಯಾರಾ ಗೇಮ್ಸ್ನಲ್ಲಿ ಭಾಗವಹಿಸಿ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಗಳಿಸಿ ಯಾದಗಿರಿ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಇಂತಹ ಕ್ರೀಡಾಪಟುವನ್ನು ಸನ್ಮಾನಿಸುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಇಂತಹ ಕ್ರೀಡಾಪಟುಗಳು ಗ್ರಾಮೀಣ ಪ್ರದೇಶದಿಂದ ಇನ್ನು ಹೆಚ್ಚು ಹೊರಹೊಮ್ಮುವಂತಾಗಲಿ ಎಂದರು.

ಈ ಸಂದರ್ಭದಲ್ಲಿ ರಾಜಾ ಜೈರಾಮ ನಾಯಕ, ಬಸವರಾಜ ಬಜನಿ, ಯಲ್ಲಪ್ಪ ದೊರಿ, ನಿಂಗಪ್ಪ ಮಡಿವಾಳ, ಸಂಗಮೇಶ ಕತ್ತಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !