ಭಾನುವಾರ, ಜೂಲೈ 5, 2020
28 °C
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 223ಕ್ಕೆ ಏರಿಕೆ

9 ಮಕ್ಕಳು ಸೇರಿ 60 ಜನರಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಶುಕ್ರವಾರ 10 ವರ್ಷದೊಳಗಿನ 9 ಮಕ್ಕಳು ಹಾಗೂ 11 ರಿಂದ 15 ವರ್ಷದೊಳಗಿನ 6 ಮಕ್ಕಳು ಸೇರಿ ಒಟ್ಟು 60 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದರಿಂದ ಕೋವಿಡ್-19 ಸೋಂಕಿತರ ಸಂಖ್ಯೆ 223ಕ್ಕೆ ಏರಿಕೆಯಾಗಿದೆ. ಈವರೆಗೆ 9 ಮಂದಿ ಗುಣಮುಖರಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.

ಗುರುಮಠಕಲ್ ತಾಲ್ಲೂಕಿನಲ್ಲಿ 37, ಯಾದಗಿರಿ ತಾಲ್ಲೂಕಿನಲ್ಲಿ 20, ಶಹಾಪುರ ತಾಲ್ಲೂಕಿನಲ್ಲಿ 2 ಮತ್ತು ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ 1 ಪ್ರಕರಣ ಪತ್ತೆಯಾಗಿದೆ. ಬಹುತೇಕ ಸೋಂಕುಪೀಡಿತರು ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಮಹಾರಾಷ್ಟ್ರದ ಮುಂಬೈ, ಥಾಣೆ, ಅಂಧೇರಿ ಈಸ್ಟ್, ಪುಣೆ ಸ್ಥಳಗಳಿಂದ ಜಿಲ್ಲೆಗೆ ಮೇ 13ರಂದು ಹಿಂದಿರುಗಿದವರು.

ಈ 60 ಜನರನ್ನು ಶಹಾಪುರ ತಾಲ್ಲೂಕಿನ ಬೇವಿನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಗುರುಮಠಕಲ್‍ನ ಎಸ್‍ಎಲ್‍ಟಿ ಹಾಗೂ ಐಟಿಐ ಕಾಲೇಜು ಕ್ವಾರಂಟೈನ್ ಕೇಂದ್ರಗಳಲ್ಲಿ ಪ್ರತ್ಯೇಕವಾಗಿರಿಸಲಾಗಿದೆ.

ಯಾದಗಿರಿ ತಾಲ್ಲೂಕಿನ ಅರಕೇರಾ ತಾಂಡಾದ 55 ವರ್ಷದ ಮಹಿಳೆ, 22 ವರ್ಷದ ಮಹಿಳೆ, 15 ವರ್ಷದ ಬಾಲಕಿ, 10 ವರ್ಷದ ಬಾಲಕಿ, 13 ವರ್ಷದ ಬಾಲಕ, 30 ವರ್ಷದ ಪುರುಷ, 27 ವರ್ಷದ ಮಹಿಳೆ, 26 ವರ್ಷದ ಯುವಕ, 35 ವರ್ಷದ ಪುರುಷ, 38 ವರ್ಷದ ಪುರುಷ, 30 ವರ್ಷದ ಮಹಿಳೆ, 27 ವರ್ಷದ ಯುವಕ, 18 ವರ್ಷದ ಯುವತಿ, 17 ವರ್ಷದ ಯುವತಿ, 17 ವರ್ಷದ ಯುವಕ, 5 ವರ್ಷದ ಬಾಲಕ, 8 ವರ್ಷದ ಬಾಲಕಿ, ಬಳಿಚಕ್ರ ಗ್ರಾಮದ 25 ವರ್ಷದ ಯುವಕ, ಹೊಸಳ್ಳಿ ಗ್ರಾಮದ 12 ವರ್ಷದ ಬಾಲಕ, ಮುಷ್ಠಳ್ಳಿ ಗ್ರಾಮದ 35 ವರ್ಷದ ಮಹಿಳೆ ಸೋಂಕಿತರಾಗಿದ್ದಾರೆ.

ಗುರುಮಠಕಲ್ ತಾಲ್ಲೂಕಿನ ನಗರದ 44 ವರ್ಷದ ಪುರುಷ, ಎಂ.ಟಿ.ಪಲ್ಲಿಯ 14 ವರ್ಷದ ಬಾಲಕಿ, ಚಂಡ್ರಕಿ ಗ್ರಾಮದ 27 ವರ್ಷದ ಯುವಕ, ನಜರಾಪುರದ 54 ವರ್ಷದ ಮಹಿಳೆ, ಚಪೆಟ್ಲಾ ಗ್ರಾಮದ 24 ವರ್ಷದ ಮಹಿಳೆ, 35 ವರ್ಷದ ಪುರುಷ, ಅನಪುರ ಗ್ರಾಮದ 25 ವರ್ಷದ ಪುರುಷ, 32 ವರ್ಷದ ಮಹಿಳೆ, 3 ವರ್ಷದ ಬಾಲಕ, ನಜರಾಪುರದ 12 ವರ್ಷದ ಬಾಲಕ, 29 ವರ್ಷದ ಮಹಿಳೆ, 35 ವರ್ಷದ ಮಹಿಳೆ, 24 ವರ್ಷದ ಪುರುಷ, ಚಪೆಟ್ಲಾ ಗ್ರಾಮದ 8 ವರ್ಷದ ಬಾಲಕ, ನಜರಾಪುರದ 20 ವರ್ಷದ ಮಹಿಳೆ, ಪುಟಪಾಕ್ ಗ್ರಾಮದ 3 ವರ್ಷದ ಹೆಣ್ಣುಮಗು, ಯಂಪಾಡ್ ತಾಂಡಾದ 40 ವರ್ಷದ ಮಹಿಳೆ, ಇಮ್ಲಾಪುರದ 38 ವರ್ಷದ ಪುರುಷ, ಚಿನ್ನಾಕಾರ ಗ್ರಾಮದ 24 ವರ್ಷದ ಪುರುಷ ಸೋಂಕಿತರಾಗಿದ್ದಾರೆ.

ಯಂಪಾಡ್ ತಾಂಡಾದ 50 ವರ್ಷದ ಪುರುಷ, ಚಿನ್ನಾಕಾರ ಗ್ರಾಮದ 40 ವರ್ಷದ ಪುರುಷ, 10 ವರ್ಷದ ಬಾಲಕಿ, ಮೋತಕಪಲ್ಲಿ ಗ್ರಾಮದ 40 ವರ್ಷದ ಪುರುಷ, ಪುಟಪಾಕ್ ಗ್ರಾಮದ 50 ವರ್ಷದ ಮಹಿಳೆ, ಕಂದಕೂರ ಗ್ರಾಮದ 48 ವರ್ಷದ ಪುರುಷ, ಕಂದಕೂರ ಗ್ರಾಮದ 35 ವರ್ಷದ ಮಹಿಳೆ, ಗುರುಮಠಕಲ್‌ನ 3 ವರ್ಷದ ಗಂಡುಮಗು, 37 ವರ್ಷದ ಪುರುಷ, ಯದ್ಲಾಪುರ ಗ್ರಾಮದ 22 ವರ್ಷದ ಮಹಿಳೆ, ಚಪೆಟ್ಲಾ ಗ್ರಾಮದ 2 ವರ್ಷದ ಹೆಣ್ಣುಮಗು, 30 ವರ್ಷದ ಪುರುಷ, ಚಿನ್ನಾಕಾರ ಗ್ರಾಮದ 22 ವರ್ಷದ ಪುರುಷ,  24 ವರ್ಷದ ಮಹಿಳೆ, 14 ವರ್ಷದ ಬಾಲಕಿ, ಯದ್ಲಾಪುರ ತಾಂಡಾದ 34 ವರ್ಷದ ಪುರುಷ, ಕೊಂಕಲ್ ಗ್ರಾಮದ 25 ವರ್ಷದ ಮಹಿಳೆ, ಸಿದ್ಧಾಪುರ ಗ್ರಾಮದ 28 ವರ್ಷದ ಮಹಿಳೆ,   (ಪಿ-2709) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಶಹಾಪುರ ತಾಲ್ಲೂಕಿನ ಚಾಮನಾಳ ತಾಂಡಾದ 53 ವರ್ಷದ ಪುರುಷ ಮತ್ತು ಗೋಗಿ ಗ್ರಾಮದ 17ವರ್ಷದ ಯುವಕ ಸೋಂಕಿತರಾಗಿದ್ದಾರೆ.

ಜಿಲ್ಲೆಯ ಪ್ರತಿಯೊಬ್ಬರೂ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸ್ಯಾನಿಟೈಸರ್ ಅಥವಾ ನೀರಿನಿಂದ ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.