ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ಜಿಲ್ಲೆಯಲ್ಲಿ ಶೇ 61ರಷ್ಟು ಬಿತ್ತನೆ

Published 6 ಜುಲೈ 2024, 6:57 IST
Last Updated 6 ಜುಲೈ 2024, 6:57 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಮಳೆ ಕೊರತೆ ನಡುವೆಯೂ ನೀರಾವರಿ, ಖುಷ್ಕಿ ಜಮೀನಿನಲ್ಲಿ ಶೇ 61.24ರಷ್ಟು ಮುಂಗಾರು ಹಂಗಾಮನಲ್ಲಿ ಬಿತ್ತನೆಯಾಗಿದೆ.

ಜಿಲ್ಲೆಯ ಆರು ತಾಲ್ಲೂಕುಗಳ ಪೈಕಿ ಯಾದಗಿರಿ ತಾಲ್ಲೂಕಿನಲ್ಲಿ ಹೆಚ್ಚು ಬಿತ್ತನೆಯಾಗಿದೆ. ಉಳಿದೆಡೆ ಶೇ 50ಕ್ಕಿಂತ ಹೆಚ್ಚು ಬಿತ್ತನೆ ಪ್ರಮಾಣ ಇದೆ.

ಈ ಬಾರಿಯ ಮುಂಗಾರು ಹಂಗಾಮು ಆಶಾದಾಯವಾಗಿದ್ದರಿಂದ ರೈತರು ಹೆಚ್ಚು ಖುಷಿಕೊಂಡಿದ್ದರು. ಆದರೆ, ಅದು ಕೆಲವೇ ದಿನಗಳಲ್ಲಿ ಹುಸಿಯಾಯಿತು. ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇದ್ದು, ಶುಕ್ರವಾರ ಸಂಜೆ ತುಂತುರು ಮಳೆಯಾಗಿ ಸ್ವಲ್ಪ ಮಟ್ಟಿಗೆ ಬಿತ್ತಿರುವ ಬೆಳೆಗಳಿಗೆ ಆಸರೆಯಾಗಿದೆ.

ಬಿತ್ತನೆ ವಿವರ:

ಶಹಾಪುರ ತಾಲ್ಲೂಕಿನಲ್ಲಿ ನೀರಾವರಿ, ಖುಷ್ಕಿ ಜಮೀನಿನಲ್ಲಿ 73,463.50 ಹೆಕ್ಟೇರ್‌ ಬಿತ್ತನೆ ಗುರಿ ಇದ್ದು, 45,606.00, ವಡಗೇರಾ ತಾಲ್ಲೂಕಿನಲ್ಲಿ 54,826.33 ಹೆಕ್ಟೇರ್‌ ಗುರಿ ಇದ್ದರೆ 34,085 ಹೆಕ್ಟೇರ್‌ ಬಿತ್ತನೆಯಾಗಿದೆ. ಸುರಪುರ ತಾಲ್ಲೂಕಿನಲ್ಲಿ 92029.52 ಹೆಕ್ಟೇರ್‌ನಲ್ಲಿ 53,219 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ.

ಹುಣಸಗಿ ತಾಲ್ಲೂಕಿನಲ್ಲಿ 63,737.79 ಹೆಕ್ಟೇರ್‌ನಲ್ಲಿ 32,213 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಯಾದಗಿರಿ ತಾಲ್ಲೂಕಿನಲ್ಲಿ ನೀರಾವರಿ ಖುಷ್ಕಿ ಜಮೀನಿನಲ್ಲಿ 68,672 ಹೆಕ್ಟೇರ್‌ ಬಿತ್ತನೆ ಗುರಿ ಇದ್ದರೆ, 48,831 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಗುರುಮಠಕಲ್‌ ತಾಲ್ಲೂಕಿನಲ್ಲಿ 49,944 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದು, 32,638 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ಈಗಾಗಲೇ ಹೆಸರು ಬಿತ್ತನೆ ಸಮಯ ಮುಗಿದ್ದರಿಂದ ನೀರಾವರಿ ಪ್ರದೇಶದಲ್ಲಿ 3,435 ಹೆಕ್ಟೇರ್‌, ಖುಷ್ಕಿ ಜಮೀನಿನಲ್ಲಿ 15,259.06 ಬಿತ್ತನೆ ಗುರಿ ಇದ್ದು, 13,178 ಹೆಕ್ಟೇರ್‌ ಬಿತ್ತನೆಯಾಗಿದೆ. ಶೇ 70.49 ಬಿತ್ತನೆಯಾಗಿದೆ. 

ವಡಗೇರಾ ತಾಲ್ಲೂಕಿನ ಸೀಮಾಂತರದ ಜಮೀನಿನಲ್ಲಿ ಬಿತ್ತನೆಯಾಗಿರುವ ಹತ್ತಿ ಬೆಳೆ
ವಡಗೇರಾ ತಾಲ್ಲೂಕಿನ ಸೀಮಾಂತರದ ಜಮೀನಿನಲ್ಲಿ ಬಿತ್ತನೆಯಾಗಿರುವ ಹತ್ತಿ ಬೆಳೆ
ಕೆ.ಎಚ್‌.ರವಿ
ಕೆ.ಎಚ್‌.ರವಿ

ಜುಲೈ 20ರ ವರೆಗೆ ತೊಗರಿ ಹತ್ತಿ ಬಿತ್ತನೆಗೆ ಅವಕಾಶವಿದೆ. ಈ ಬಾರಿ ನಿಗದಿತ ಗುರಿಗಿಂತ ತೊಗರಿ ಬಿತ್ತನೆ ಮಾಡಲಾಗಿದೆ. ಕಾಲುವೆಗೆ ನೀರು ಹರಿಸಿದ ಮೇಲೆ ಭತ್ತಕ್ಕೆ ಸಿದ್ಧತೆ ನಡೆಯಲಿದೆ

- ಕೆ.ಎಚ್.ರವಿ ಜಂಟಿ ಕೃಷಿ ನಿರ್ದೇಶಕ ಯಾದಗಿರಿ

ಗುರಿಗಿಂತ ಹೆಚ್ಚು ತೊಗರಿ ಬಿತ್ತನೆ ಜಿಲ್ಲೆಯಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಹತ್ತಿ ಬಿತ್ತನೆ ಮಾಡಿದ ಬೆಳೆಗಾರರು ನಷ್ಟ ಅನುಭವಿಸಿದ್ದರಿಂದ ಈ ಬಾರಿ ತೊಗರಿ ಬಿತ್ತನೆಗೆ ಒಲವು ತೋರಿದ್ದಾರೆ. ಅಲ್ಲದೇ ಕಳೆದ ಬಾರಿ ತೊಗರಿಗೆ ಉತ್ತಮ ದರ ಬಂದಿದ್ದರಿಂದ ರೈತರು ಮತ್ತೆ ಧಾನ್ಯದ ಮೊರೆ ಹೋಗಿದ್ದಾರೆ. ಈ ಬಾರಿ 18500 ಹೆಕ್ಟೇರ್‌ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಗುರಿ ಇತ್ತು. ಖುಷ್ಕಿ ಜಮೀನಿನಲ್ಲಿ 66000 ಹೆಕ್ಟೇರ್‌ ಬಿತ್ತನೆ ಗುರಿ ಇದ್ದು ನೀರಾವರಿ ಪ್ರದೇಶದಲ್ಲಿ 17676 ಹೆಕ್ಟೇರ್‌ ಬಿತ್ತನೆಯಾಗಿದೆ. ಖುಷ್ಕಿ ಜಮೀನಿನಲ್ಲಿ 72852 ಹೆಕ್ಟೇರ್‌ ಬಿತ್ತನೆಯಾಗಿದೆ. ಅಲ್ಲದೇ ಶೇಕಡವಾರು 107.13 ಆಗಿದೆ. ಇದರಿಂದ ರೈತರು ಈ ಬಾರಿ ತೊಗರಿ ಬಿತ್ತನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತೊಗರಿ ಬಿತ್ತನೆಗೆ ಇನ್ನೂ ಅವಕಾಶ ಇರುವುದರಿಂದ ಮತ್ತಷ್ಟು ಹೆಚ್ಚಳ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ. ಹತ್ತಿ ಶೇ 72.54 ಸೂರ್ಯಕಾಂತಿ ಶೇ 8.99 ಭತ್ತ ಶೇ 2.30 ಸಜ್ಜೆ ಶೇ 61.15 ಉದ್ದು ಶೇ 75.05 ಶೇಂಗಾ ಶೇ 11 ಕಬ್ಬು 62.82 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಬಿತ್ತನೆ ವಿವರ ತಾಲ್ಲೂಕು; ಶೇಕಡವಾರು ಶಹಾಪುರ;62.08 ವಡಗೇರಾ;62.17 ಸುರಪುರ;57.83 ಹುಣಸಗಿ;50.54 ಯಾದಗಿರಿ;71.11 ಗುರುಮಠಕಲ್‌;65.35 ಒಟ್ಟು;61.24 ಆಧಾರ: ಕೃಷಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT