ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ನಕಲಿ ಸಹಿ ಬಳಸಿ ₹75 ಲಕ್ಷ ವಂಚನೆ

ಪೊಲೀಸ್‌ ಠಾಣೆಗೆ ಸುರಪುರ ತಹಶೀಲ್ದಾರ್ ನಿಂಗಪ್ಪ ಬಿರಾದಾರ ದೂರು
Last Updated 23 ಸೆಪ್ಟೆಂಬರ್ 2020, 2:22 IST
ಅಕ್ಷರ ಗಾತ್ರ

ಯಾದಗಿರಿ: ಸುರಪುರ ತಹಶೀಲ್ದಾರ್ ಖಾತೆಯಲ್ಲಿದ್ದ ₹75,59,900 ಹಣವನ್ನು ನಕಲಿ ಸಹಿ, ಮೊಹರು ಬಳಸಿ ವಂಚಿಸಲಾಗಿದೆ ಎಂದು ತಹಶೀಲ್ದಾರ್ ನಿಂಗಪ್ಪ ಸಿದ್ದಪ್ಪ ಬಿರಾದಾರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ನೈಸರ್ಗಿಕ ವಿಕೋಪದಡಿಯಲ್ಲಿ ತಹಶೀಲ್ದಾರ್ ಖಾತೆಗೆ ₹3 ಕೋಟಿಗೂ ಅಧಿಕ ಹಣ ಜಮಾ ಆಗಿತ್ತು.

‘ಸುರಪುರ ನಗರದಲ್ಲಿರುವ ಆಕ್ಸಿಸ್ ಬ್ಯಾಂಕ್‌ಶಾಖೆಯಲ್ಲಿ ಸುರಪುರ ತಹಶೀಲ್ದಾರ್‌ಹೆಸರಿನ ಖಾತೆ ಸಂಖ್ಯೆ 91901008033954 ಇದೆ. ಇದರಲ್ಲಿಶ್ರೀ ಮಹಾಲಕ್ಷ್ಮಿ ಎಂಟರ್‌ ಪ್ರೈಸಸ್ ಹೆಸರಿನಲ್ಲಿ ₹75,59,900 ವರ್ಗಾವಣೆ ಆಗಿರುವುದು ಗಮನಕ್ಕೆ ಬಂದಿದೆ.ಸಿಬ್ಬಂದಿ ನಸೀರ್‌ ಅಹ್ಮದ್‌, ಸಿ.ಎಸ್.ರಾಜಾ ಇವರೊಂದಿಗೆ ಆಕ್ಸಿಸ್ ಬ್ಯಾಂಕ್‌ ಶಾಖೆಗೆ ತೆರಳಿ ವ್ಯವಸ್ಥಾಪಕರಿಗೆ ವಿಚಾರಿಸಿದಾಗ 2020ರ ಜೂನ್‌ 1ರಂದು ಸುರಪುರ ತಹಶೀಲ್ದಾರ್‌ ಶ್ರೀಮಹಾಲಕ್ಷ್ಮಿ ಎಂಟರ್‌ಪ್ರೈಸಸ್‌ಗೆಚೆಕ್ ನೀಡಿರುವುದರಿಂದ ಹಣ ವರ್ಗಾವಣೆ ಆಗಿದೆ ಎಂದು ತಿಳಿಸಿದ್ದಾರೆ.ನಾನು ಈ ಹೆಸರಿನಲ್ಲಿ ಚೆಕ್‌ ಬರೆದುಕೊಟ್ಟಿಲ್ಲ. ಆದರೂ ಹಣ ವರ್ಗಾವಣೆಯಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕರ್ತವ್ಯದಲ್ಲಿದ್ದಾಗ ಕೊವೀಡ್-19 ಮತ್ತು ನ್ಯೂಮೊನಿಯಾ ಕಾಯಿಲೆ ಇರುವುದು ದೃಢಪಟ್ಟಿದ್ದರಿಂದ ಚಿಕಿತ್ಸೆಗಾಗಿ ಕಲಬುರ್ಗಿಯ ಯುನೈಟೆಡ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿರುವೆ. ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ನ ಕಿಮ್ಸ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ಚೆಕ್‌ ಮೇಲೆ ನಕಲಿ ಸಹಿ ಮತ್ತು ಮೊಹರು ಹಾಕಿ ಮತ್ತು ವಿಷಯ ನಿರ್ವಾಹಕರ ಕೈಬರಹದಂತೆ ಚೆಕ್ ಮೇಲೆ ಅಕ್ಷರ ಮತ್ತು ಅಂಕಿ ಸಂಖ್ಯೆ ಬರೆದು ಹಣ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ.

ಮಹಾಲಕ್ಷ್ಮಿ ಎಂಟರ್‌ಪ್ರೈಸಸ್ ತಾಳಿಕೋಟಿಯದ್ದು ಎಂದುತಿಳಿದು ಬಂದಿದ್ದು, ಮಾಲೀಕರ ಹೆಸರು ವಿಳಾಸ ಹುಣಸಗಿ ತಾಲ್ಲೂಕಿನ ವಜ್ಜಲ್‌ ಗ್ರಾಮದ ಲಕ್ಷ್ಮಿ ರಾಜು ಕಟ್ಟಿಮನಿ ಎಂದು ತಿಳಿದುಬಂದಿದೆ. ಇವರವಿರುದ್ಧ ಕಾನೂನು ಕ್ರಮ ಜರಗಿಸಲು ದೂರು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT