ಯಾದಗಿರಿ: ಜಿಲ್ಲೆಯ ಕಕ್ಕೇರಾ, ಕೆಂಭಾವಿ ಪುರಸಭೆಗಳಿಗೆ ಚುನಾವಣಾ ದಿನಾಂಕ ನಿಗದಿಯಾಗಿದ್ದು, ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ.

ಜಿಲ್ಲೆಯಲ್ಲಿರುವ ಎರಡು ಪುರಸಭೆಗಳಿಗೆ ಅವಧಿ ಮುಕ್ತಾಯವಾಗಿದ್ದರಿಂದ ಚುನಾವಣಾ ದಿನಾಂಕ ನಿಗದಿಗೊಳಿಸಿ ಚುನಾವಣಾ ಅಯೋಗ ಆದೇಶ ಹೊರಡಿಸಿದೆ.

ಸುರಪುರ ತಾಲ್ಲೂಕಿನ ಕಕ್ಕೇರಾ, ಕೆಂಭಾವಿ ಎರಡು ಪುರಸಭೆಗಳಲ್ಲಿ ಚಳಿಗಾಲದಲ್ಲೂ ಚುನಾವಣಾ ಕಾವು ಪಡೆದುಕೊಂಡಿದೆ. ಎರಡೂ ಕಡೆ ತಲಾ 23 ಸ್ಥಾನಗಳಿವೆ.

ಕಕ್ಕೇರಾದಲ್ಲಿ 23 ವಾರ್ಡ್ಗಳಿದ್ದು, 9,239 ಪುರುಷ, 9,069 ಮಹಿಳಾ ಮತದಾರರಿದ್ದಾರೆ. 23 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಕೆಂಭಾವಿ ಪುರಸಭೆಯಲ್ಲಿ 8,270 ಪುರುಷ ಮತದಾರರು, 8,083 ಮಹಿಳಾ ಮತದಾರರು, ತಲಾ ಒಂದೊಂದು ಕಡೆ ಇತರೆ ಮತದಾರರಿದ್ದಾರೆ.

ಕೆಂಭಾವಿಯಲ್ಲಿ 16,354, ಕಕ್ಕೇರಾದಲ್ಲಿ 18,309 ಸೇರಿದಂತೆ ಒಟ್ಟಾರೆ 34, 663 ಮತದಾರರಿದ್ದಾರೆ. ಈಗ ಮತದಾರರ ಪರಿಷ್ಕರಣೆ ನಡೆಯುತ್ತಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಚುನಾವಣೆಗಾಗಿ ಡಿ.8ರಂದು ಅಧಿಸೂಚನೆ, ಡಿ.15 ನಾಮಪತ್ರ ಸಲ್ಲಿಕೆಗೆ ಕಡೆ ದಿನ, 16 ನಾಮಪತ್ರ ಪರಿಶೀಲನೆ, 18 ನಾಮಪತ್ರ ಹಿಂಪಡೆಯಲು ಕೊನೆ ದಿನ, 27ಕ್ಕೆ ಮತದಾನ, 29 ಮರುಮತದಾನವಿದ್ದಲ್ಲಿ, 30ಕ್ಕೆ ಮತ ಏಣಿಕೆ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಪುರಸಭೆಗೆ ₹1.50ಲಕ್ಷ ವೆಚ್ಚಮಿತಿ ನಿಗದಿಗೊಳಿಸಲಾಗಿದೆ.

ಕೆಂಭಾವಿಯಲ್ಲಿ ಅಭಿವೃದ್ಧಿ ಗೌಣ: ಈ ಹಿಂದೆ ಕೆಂಭಾವಿಯಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದ್ದು, ಇಲ್ಲಿ ಅಭಿವೃದ್ಧಿಗಿಂತ ಪಕ್ಷ, ವ್ಯಕ್ತಿ, ಜಾತಿಗೆ ಮಣೆ ಹಾಕಲಾಗುತ್ತಿದೆ. ಶಹಾಪುರ ಕ್ಷೇತ್ರಕ್ಕೆ ಒಳಪಡುವುದರಿಂದ ಶರಣಬಸಪ್ಪಗೌಡ ದರ್ಶನಾಪುರ ಮಾತೆ ಇಲ್ಲಿ ಅಂತಿಮವಾಗಿದೆ ಎನ್ನಲಾಗುತ್ತಿದೆ. ಅವರು ಹೇಳುವ ಅಭ್ಯರ್ಥಿಗೆ ಟಿಕೆಟ್ ಖಚಿತವಾಗಿದೆ. ನಗರೋತ್ಥಾನದಲ್ಲಿ ಸಾಕಷ್ಟು ಅನುದಾನ ಬಂದಿದ್ದರೂ ಇಂದಿಗೂ ಬಳಕೆಯಾಗಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಕಕ್ಕೇರಾದಲ್ಲಿ ಅಭಿವೃದ್ಧಿ ರಾಜಕೀಯ: ಸುರಪುರ ಶಾಸಕ ನರಸಿಂಹ ನಾಯಕ ಕ್ಷೇತ್ರಕ್ಕೆ ಒಳಪಡುವ ಕಕ್ಕೇರಾದಲ್ಲಿ ಕಳೆದ ಬಾರಿ ಬಿಜೆಪಿ ಇಲ್ಲಿ ಆಡಳಿತ ನಡೆಸಿದೆ. ಇಲ್ಲಿ ಅಭಿವೃದ್ಧಿ ಪರ ರಾಜಕೀಯ ನಡೆಯುತ್ತಿದ್ದು, ಈ ಬಾರಿ ಹೆಚ್ಚಿನ ಪೈಪೋಟಿ ನಡೆಯುವ ಲಕ್ಷಣಗಳಿವೆ.

ಕಾಂಗ್ರೆಸ್ನಲ್ಲಿ ಮಾಜಿ ಶಾಸಕ ವೆಂಕಟಪ್ಪ ನಾಯಕ ಅವರು ಹೇಳುವವರಿಗೆ ಟಿಕೆಟ್ ಖಚಿತ ಎನ್ನಲಾಗಿದ್ದು, ಈ ಬಾರಿ ಅಧಿಕಾರ ಹಿಡಿಯಬೇಕು ಎನ್ನುವ ಹುಮ್ಮಸ್ಸುನಲ್ಲಿ ಕಾರ್ಯಕರ್ತತರನ್ನು ಸಜ್ಜುಗೊಳಿಸಲಾಗಿದೆ ಎನ್ನಲಾಗುತ್ತಿದೆ.

ಹಿಂದಿನ ಅವಧಿಯ ಪಕ್ಷಗಳ ಬಲಾಬಲ

ಕಕ್ಕೇರಾ ಪುರಸಭೆ
ಪಕ್ಷ; ಸಂಖ್ಯೆ
ಕಾಂಗ್ರೆಸ್;10
ಬಿಜೆಪಿ;13
ಒಟ್ಟು; 23

ಕೆಂಭಾವಿ ಪುರಸಭೆ
ಪಕ್ಷ;ಸಂಖ್ಯೆ
ಕಾಂಗ್ರೆಸ್;15
ಬಿಜೆಪಿ;8
ಒಟ್ಟು;23
ಕೆಂಭಾವಿ ಮೀಸಲಾತಿ ವಿವರ

ವಾರ್ಡ್ ಸಂಖ್ಯೆ;ಮೀಸಲಾತಿ

1;ಹಿಂದುಳಿದ ವರ್ಗ–ಎ (ಮಹಿಳೆ)
2; ಸಾಮಾನ್ಯ (ಮಹಿಳೆ)
3; ಸಾಮಾನ್ಯ
4;ಹಿಂದುಳಿದ ವರ್ಗ ಎ
5; ಸಾಮಾನ್ಯ (ಮಹಿಳೆ)
6; ಹಿಂದುಳಿದ ವರ್ಗ–ಬಿ
7;ಹಿಂದುಳಿದ ವರ್ಗ–ಎ (ಮಹಿಳೆ)
8; ಸಾಮಾನ್ಯ (ಮಹಿಳೆ)
9; ಸಾಮಾನ್ಯ
10; ಹಿಂದುಳಿದ ವರ್ಗ–ಎ
11; ಸಾಮಾನ್ಯ (ಮಹಿಳೆ)
12; ಸಾಮಾನ್ಯ
13; ಪರಿಶಿಷ್ಟ ಪಂಗಡ
14; ಪರಿಶಿಷ್ಟ ಜಾತಿ
15; ಪರಿಶಿಷ್ಟ ಜಾತಿ (ಮಹಿಳೆ)
16;ಸಾಮಾನ್ಯ
17; ಸಾಮಾನ್ಯ (ಮಹಿಳೆ)
18; ಪರಿಶಿಷ್ಟ ಜಾತಿ
19; ಸಾಮಾನ್ಯ
20;ಸಾಮಾನ್ಯ
21;ಪರಿಶಿಷ್ಟ ಪಂಗಡ (ಮಹಿಳೆ)
22; ಪರಿಶಿಷ್ಟ ಜಾತಿ (ಮಹಿಳೆ)
23;ಸಾಮಾನ್ಯ (ಮಹಿಳೆ)

ಕಕ್ಕೇರಾ ಮೀಸಲಾತಿ ವಿವರ

ವಾರ್ಡ್ ಸಂಖ್ಯೆ;ಮೀಸಲಾತಿ
1;ಸಾಮಾನ್ಯ (ಮಹಿಳೆ)
2;ಸಾಮಾನ್ಯ
3; ಸಾಮಾನ್ಯ (ಮಹಿಳೆ)
4;ಸಾಮಾನ್ಯ
5; ಸಾಮಾನ್ಯ (ಮಹಿಳೆ)
6;ಪರಿಶಿಷ್ಟ ಪಂಗಡ
7; ಸಾಮಾನ್ಯ (ಮಹಿಳೆ)
8; ಪರಿಶಿಷ್ಟ ಪಂಗಡ (ಮಹಿಳೆ)
9;ಪರಿಶಿಷ್ಟ ಪಂಗಡ
10;ಪರಿಶಿಷ್ಟ ಪಂಗಡ
11;ಸಾಮಾನ್ಯ
12; ಪರಿಶಿಷ್ಟ ಪಂಗಡ (ಮಹಿಳೆ)
13; ಸಾಮಾನ್ಯ
14;ಪರಿಶಿಷ್ಟ ಜಾತಿ (ಮಹಿಳೆ)
15;ಪರಿಶಿಷ್ಟ ಜಾತಿ
16;ಪರಿಶಿಷ್ಟ ಪಂಗಡ
17;ಸಾಮಾನ್ಯ (ಮಹಿಳೆ)
18;ಪರಿಶಿಷ್ಟ ಪಂಗಡ
19;ಸಾಮಾನ್ಯ (ಮಹಿಳೆ)
20;ಪರಿಶಿಷ್ಟ ಪಂಗಡ (ಮಹಿಳೆ)
21;ಸಾಮಾನ್ಯ
22;ಪರಿಶಿಷ್ಟ ಪಂಗಡ ಮಹಿಳೆ
23;ಸಾಮಾನ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.