ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ತಾಯಿ

ಮಕ್ಕಳ ಪೋಷಣೆಗೆ ಸಹಾಯಕ್ಕಾಗಿ ಮೊರೆ ಇಟ್ಟ ಕುಟುಂಬ
Last Updated 23 ಆಗಸ್ಟ್ 2020, 15:49 IST
ಅಕ್ಷರ ಗಾತ್ರ

ಯಾದಗಿರಿ:ತಾಲ್ಲೂಕಿನ ರಾಮಸಮುದ್ರ ಗ್ರಾಮದ ಮಹಿಳೆ ಪದ್ಮಮ್ಮ ಮೂರು ಗಂಡು ಮಕ್ಕಳಿಗೆ ಶನಿವಾರ ಜನ್ಮ ನೀಡಿದ್ದಾರೆ. ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಹೆರಿಗೆ ಮಾಡಿಸಿದ್ದು, ಮೂರುನವಜಾತು ಶಿಶುಗಳುಆರೋಗ್ಯವಾಗಿವೆ. 7 ವರ್ಷದ ನಂತರ ಹೆರಿಗೆ ಆಗಿದ್ದು, ಮೊದಲು ಮಗಳಿಗೆ ವರ್ಷ ಇದೆ. ಕಳೆದ 6 ದಿನಗಳಿಂದ ರಾಮಸಮುದ್ರದ ಆಶಾ ಕಾರ್ಯಕರ್ತೆಯರಾದ ಮಂಗಳಮ್ಮ, ಮುತ್ತಮ್ಮ ಅವರು ಪದ್ಮಮ್ಮ ಅವರನ್ನು ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದರು.

ಸಹಾಯಕ್ಕಾಗಿ ಮೊರೆ ಇಟ್ಟ ಕುಟುಂಬ:ಪದ್ಮಮ್ಮ ಪತಿ ನಾಗರಾಜ ಅವರು ಕೂಲಿ ಮಾಡುವ ಕುಟುಂಬ. ಮೂರು ಮಕ್ಕಳ ಲಾಲನೆ, ಪೋಷಣೆಗೆ ದಾನಿಗಳ ಸಹಾಯಕ್ಕೆ ಮೊರೆಇಟ್ಟಿದ್ದಾರೆ. ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ನಾಗರಾಜ ಅವರು, ‘ಗ್ರಾಮದಿಂದಆಹಾರ ತರುತ್ತಿದ್ದೇನೆ. ತಾಯಿಗೆ ಎದೆ ಹಾಲು ಸಾಲುತ್ತಿಲ್ಲ. ಇದರಿಂದ ವೈದ್ಯರು ಪೌಡರ್‌ ಬರೆದುಕೊಟ್ಟಿದ್ದಾರೆ. ದರ ಹೆಚ್ಚಿರುವ ಕಾರಣ ಖರೀದಿಸಲು ಆಗಿಲ್ಲ. ಹೆರಿಗೆ ವೇಳೆರಕ್ತಕ್ಕಾಗಿಇದ್ದ ಹಣ ಖರ್ಚು ಮಾಡಿಕೊಂಡಿದ್ದೇನೆ. ಹೀಗಾಗಿ ಯಾರಾದರೂ ಸಹಾಯ ಮಾಡಬೇಕು ಎಂದು ಕೋರಿದ್ದಾರೆ.

ಸಹಾಯ ಮಾಡಲು ಇಚ್ಛಿಸುವವರು ನಾಗರಾಜ ಅವರ ಮೊಬೈಲ್‌ ಸಂಖ್ಯೆ 78928 44564ಗೆ ಸಂಪರ್ಕಿಸಬಹುದು. ಖಾತೆಯ ವಿವರA/C NO: 52206440261,IFSC: SBIN0013398.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT