ಸುರಪುರ: ‘ಯುವಕರಲ್ಲಿ ದೇಶಾಭಿಮಾನ ಮೂಡಿಸುವಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು (ಎಬಿವಿಪಿ) ವಿದ್ಯಾರ್ಥಿ ಸಂಘಟನೆ ಮುಂಚೂಣಿಯಲ್ಲಿದೆ’ ಎಂದು ಪರಿಷತ್ನ ರಾಜ್ಯ ಸಮಿತಿ ಉಪಾಧ್ಯಕ್ಷ ಉಪೇಂದ್ರನಾಯಕ ಸುಬೇದಾರ ಹೇಳಿದರು.

ನಗರದ ಪ್ರಭು ಮತ್ತು ಬೋಹರಾ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಎಬಿವಿಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ದೇಶದ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಹೋರಾಟ ರೂಪಿಸಿ ಪರಿಹಾರ ದೊರಕಿಸಿದ ಶ್ರೇಯಸ್ಸು ಸಂಘಟನೆಗೆ ಇದೆ. ನಿರಂತರವಾಗಿ ಅಭ್ಯಾಸ ವರ್ಗಗಳನ್ನು ನಡೆಸಿ ಸಂಸ್ಕಾರ ನೀಡುತ್ತಿದೆ’ ಎಂದರು.

ಉಪನ್ಯಾಸಕ ಶರಣುನಾಯಕ ಮಾತನಾಡಿ, ‘ಎಬಿವಿಪಿ 77 ವರ್ಷಗಳ ಸುದೀರ್ಘ ಸೇವೆಯಲ್ಲಿ ವಿದ್ಯಾರ್ಥಿಗಳ ನೆರವಿಗೆ ನಿಂತಿದೆ. ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣಗಳನ್ನು ಕೊಡುತ್ತಿದೆ’ ಎಂದರು.

ಪ್ರಾಚಾರ್ಯ ಕೆ.ಕೆ. ರಾಠೋಡ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಪ್ರಶಾಂತ ಮಾಲಿಪಾಟೀಲ, ಧರ್ಮರಾಜ ಪಿಳಬಂಟ, ರಾಜಪ್ಪ ಅಜ್ಜಕೊಲ್ಲಿ, ವಾಹಿದ್, ಅನಿತಾ ವೇದಿಕೆಯಲ್ಲಿದ್ದರು.

ಎಬಿವಿಪಿ ತಾಲ್ಲೂಕು ಸಂಚಾಲಕ ವಿನೋದ, ಕಾರ್ಯದರ್ಶಿ ದೇವರಾಜ ನಾಟೇಕಾರ, ರಾಜು ಕರಡಕಲ್, ಮೌನೇಶ, ನರಸಿಂಹ, ದೀಪಿಕಾ, ಕನ್ನಿಕಾ, ಮೇಘನಾ, ಸಂಗಮೇಶ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.