ಕಕ್ಕೇರಾ: ‘ಜೀವನದ ಸುಖ ಸಂಸಾರದಲ್ಲಿ ಏನೇ ಅಡೆತಡೆಗಳು ಬರಲಿ, ಪ್ರತಿಯೊಬ್ಬರೂ ಪ್ರತಿಯೊಬ್ಬರನ್ನು ಪ್ರೀತಿಸಿ, ಗೌರವಿಸುವಂತಾಗಿ, ಒಂದೇ ದಿನ ಬದುಕು ಸಾಗಿದರೂ, ಸುಮಧುರ ಹೂವಿನಂತೆ ಜೀವನ ಸಾಗಿಸಬೇಕು’ ಎಂದು ವೀರಘೋಟದ ಅಡವಿಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದ ಹೃದಯ ಭಾಗದಲ್ಲಿರುವ ಹಳೆಬಜಾರದ ಸದರಗಟ್ಟಿಯಲ್ಲಿ ಬುಧವಾರ ನಡೆದ
ಧರ್ಮಸ್ಥಳ ಗ್ರಾಮಾಭಿವೃದ್ದಿ ಸ್ವ–ಸಹಾಯ ಸಂಘ, ಪ್ರಗತಿ ಬಂಧು ಒಕ್ಕೂಟದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಧರ್ಮಸ್ಥಳ ಸಂಘವು ಸತ್ಯನಾರಾಯಣ ಪೂಜೆ, ಪರೋಪಕಾರ ಸೇರಿದಂತೆ ಉತ್ತಮವಾಗಿ ಏಲೆಮರೆಕಾಯಿಯಂತೆ ಸೇವೆ ಮಾಡುತ್ತಿದ್ದಾರೆ’ ಎಂದು ಹೇಳಿದರು.

ನಂತರ ಮುಖಂಡ ಹಣಮಂತ್ರಾಯ ಜಾಹಗೀರದಾರ ಮಾತನಾಡಿ, ‘ಧರ್ಮಸ್ಥಳ ಧರ್ಮಾಧಿಕಾರಿ ಆದೇಶದಂತೆ ಸಂಘವು ಗ್ರಾಮೀಣ ಜನರ ಧಾರ್ಮಿಕ ಭಾವನೆಗಳನ್ನು ಜಾಗೃತಗೊಳಸಿಲು ಸತ್ಯನಾರಾಯಣ ಪೂಜೆ ಸೇರಿದಂತೆ ಅನೇಕ ಧಾರ್ಮೀಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಅನೇಕರ ಬಾಳಲ್ಲಿ ಧರ್ಮಸ್ಥಳ ಸಂಘವು ಆಶಾಕಿರಣವಾಗಿದೆ’ ಎಂದರು.

ಬೆಳಿಗ್ಗೆ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ, ಅನ್ನಸಂತರ್ಪಣೆಯಲ್ಲಿ ಕಕ್ಕೇರಾ, ನಿಂಗಾಪುರ, ತಿಂಥಣಿ, ಹುಣಸಿಹೊಳೆ, ಬಂಡೊಳ್ಳಿ, ಲಿಂಗದಳ್ಳಿ, ಅರಳಹಳ್ಳಿ, ಶಾಂತಪುರ, ಹಂದ್ರಾಳ, ಕಡದರಾಳ, ಬೊಮ್ಮಗುಡ್ಡ, ರಾಜವಾಳದ ಸಂಘದ ಪ್ರತಿನಿಧಿಗಳು, ಸದಸ್ಯರು ಸೇರಿದಂತೆ 201ಕ್ಕೂ ಹೆಚ್ಚು ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ನಂದಣ್ಣಪ್ಪ ಪೂಜಾರಿ, ರೇವಪ್ಪ ತೆಗ್ಗಿಮನಿ, ತಾಲ್ಲೂಕು ಯೋಜನಾಧಿಕಾರಿ ನಾಗೇಶ ಎನ್ ಪಿ, ನಿಂಗರಾಜ ಬಿ ಎಸ್, ಸಿದ್ರಾಮ, ದಸ್ತಗೀರ ಶ್ಯಾನಿ ಮುತ್ಯಾ, ಅನುರಾಧ ಗೌಡಗೇರಾ, ರಮೇಶ ಶೆಟ್ಟಿ, ಸೋಮಶೇಖರ ದೊರೆ, ವೀರಸಂಗಪ್ಪ ಸಾಹುಕಾರ, ಗವಿಸಿದ್ದೇಶ ಹೊಗರಿ, ಹಣಮಂತ್ರಾಯ ಬಳಿಚಕ್ರ, ಶರಣು ಅಕ್ಕಿ, ದೇವಿಂದ್ರಪ್ಪ ಭೋಯಿ, ಮಹಾಂತೇಶ ಶಿವಪೂಜಿ, ಬಸಯ್ಯಸ್ವಾಮಿ, ಮುತ್ತಣ್ಣ ಸ್ವಾಮಿ, ಮಧು ಶಿವಪೂಜಿ, ಸೂರಿಯಾಬೇಗಂ, ಮಹಿಬೂಬ ಸುರಪುರ, ಅನಿತಾ, ಶಿವಕುಮಾರ, ಸೈದಾಬೀ, ಖಾಜಾಬೀ, ಶಾರದಾ, ದೇವಮ್ಮ, ಪೂಜಾ, ವೈಶಾಲಿ, ಖಾದರಬಾಷಾ, ದವಲಸಾಬ ಸೇರಿದಂತೆ ಅನೇಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.