ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಕೃಷಿ ಗಣತಿಗೆ ಚಾಲನೆ

Last Updated 19 ನವೆಂಬರ್ 2022, 5:35 IST
ಅಕ್ಷರ ಗಾತ್ರ

ಸುರಪುರ: ಸಣ್ಣ, ಅತಿಸಣ್ಣ ಮಧ್ಯಮ ಮತ್ತು ದೊಡ್ಡ ರೈತರನ್ನು ಗುರುತಿಸುವುದು ಕೃಷಿ ಗಣತಿ ಉದ್ದೇಶ. ಕೃಷಿ, ತೋಟಗಾರಿಕೆ ಮತ್ತು ಕಂದಾಯ ಅಧಿಕಾರಿಗಳು ಮೊಬೈಲ್ ಆ್ಯಪ್ ಮೂಲಕ ಕೃಷಿ ದತ್ತಾಂಶ ಸಂಗ್ರಹಣೆ ಕಾರ್ಯವನ್ನು ಪಾರದರ್ಶಕವಾಗಿ ನಿರ್ವಹಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಆಬೀದ್ ಹೇಳಿದರು.

ನಗರದ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ಸಂಖ್ಯಾ ಸಂಗ್ರಹಣ ಇಲಾಖೆ ಏರ್ಪಡಿಸಿದ್ದ ಕೃಷಿ ದತ್ತಾಂಶ ಸಂಗ್ರಹಣ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಗಣತಿ ಮಾಡುವ ಸಮಯದಲ್ಲಿ ಮೊಬೈಲ್ ಆ್ಯಪ್ ಬಳಸಿಕೊಂಡು ಕೈಪಿಡಿಯಲ್ಲಿ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ಜಮೀನಿನ ಆಕಾರ, ವಿಸ್ತೀರ್ಣ, ಭೂಬಳಕೆ, ಹಿಡುವಳಿದಾರರ ಸಂಖ್ಯೆ, ಬೆಳೆ ಮಾಹಿತಿ ಸೇರಿದಂತೆ ಸಮಗ್ರ ಮಾಹಿತಿಯನ್ನು ನಮೂದು ಮಾಡಬೇಕು ಎಂದು ತಿಳಿಸಿದರು.

ಪ್ರತಿ 5 ವರ್ಷಕ್ಕೊಮ್ಮೆ ಕೃಷಿ ಗಣತಿ ಮಾಡಲಾಗುತ್ತಿದೆ. ಗಣತಿ ಆಧಾರದಲ್ಲಿ ಕೃಷಿ ಅಭಿವೃದ್ದಿ ಕಾರ್ಯಕ್ರಮ ರೂಪಿಸಲು ಮತ್ತು ಪ್ರಗತಿ ಮೌಲ್ಯ ಮಾಪನಕ್ಕೆ ಅನುಕೂಲವಾಗಲಿದೆ. ಈ ಮೊದಲು ಕೈ ಬರಹದಲ್ಲಿ ಮಾಡಲಾಗುತಿತ್ತು. ಮೋಬೈಲ್ ಆ್ಯಪ್ ಮೂಲಕ ದತ್ತಾಂಶ ಸಂಗ್ರಹಿಸಲಾಗುತ್ತಿದೆ ಎಂದರು.
ಗಣತಿಯಲ್ಲಿ ಕೃಷಿ, ಕೃಷಿಯೇತರ ಭೂಮಿ, ಸಂಘ ಸಂಸ್ಥೆ, ಗೈರಾಣು, ಚಾವಣಿ, ಗಾಂವಠಾಣಾ ಖಾತೆಗಳ ವಿವರ ಜಾತಿವಾರು ವಿವರ, ಭೂ ಬಳಕೆ, ನೀರಾವರಿ, ಖುಷ್ಕಿ, ಬೀಜ, ಗೊಬ್ಬರ, ಯಂತ್ರೋಪಕರಣ ಬಳಕೆ, ಕೃಷಿ ಚಟುವಟಿಕೆ ಸೇರಿದಂತೆ ಇತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಬೇಕು ಎಂದರು.

1970 ರಿಂದ ಇಲ್ಲಿಯವರೆಗೆ 10 ಬಾರಿ ಗಣತಿ ಮಾಡಲಾಗಿದೆ. ಈಗ 11ನೇ ಗಣತಿ ಕಾರ್ಯ ನಡೆಯಲಿದ್ದು ಮೂರು ಹಂತಗಳನ್ನು ಮಾಡಲಾಗಿದೆ. ಮೊದಲ ಹಂತದ ಗಣತಿ ಡಿ. 30ರ ಒಳಗೆ ಮುಗಿಸಬೇಕಿದೆ. 2ನೇ ಹಂತದ ಗಣತಿ ಜ. 2023ರಿಂದ ಆರಂಭಗೊಳ್ಳಲಿದ್ದು 3ನೇ ಹಂತದ ಗಣತಿ ಮಾ. 2023 ರಲ್ಲಿ ನಡೆಯಲಿದೆ ಎಂದರು.

ಜಿಲ್ಲಾ ಸಹಾಯಕ ಸಾಂಖಿಕ ನಿರ್ದೇಶಕ ನಾಗರಾಜ ನಾಗೂರ ತರಬೇತಿ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ ಗುರುನಾಥ, ಉಪ ತಹಸೀಲ್ದಾರ ಮಲ್ಲಯ್ಯ ದಂಡು, ಸಾಂಖಿಕ ನಿರೀಕ್ಷಕ ಫಕ್ರುದ್ದೀನ್ ಶೇಖ, ನೋಡಲ್ ಅಧಿಕಾರಿ ಚನ್ನಯ್ಯಸ್ವಾಮಿ ಮೇಲಿನಮಠ, ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT