ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಶಾಂತಿಧೂತ ಯೇಸು ಸ್ಮರಣೆ

ಚರ್ಚ್‌ಗಳಲ್ಲಿ ಶುಕ್ರವಾರ ವಿಶೇಷ ಆರಾಧನೆ ಕೂಟ, 40 ದಿನಗಳ ಉಪವಾಸ ವ್ರತ ಕೊನೆಗೊಳಿಸಿದ ಕ್ರೈಸ್ತರು
Last Updated 15 ಏಪ್ರಿಲ್ 2022, 16:14 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕ್ರೈಸ್ತರು ಚರ್ಚ್‌ಗಳಲ್ಲಿ ಗುಡ್‌ಫ್ರೈಡೇ ಆಚರಿಸಿದರು.

ಕಳೆದ 40 ದಿನಗಳಿಂದ ಕೈಗೊಂಡಿದ್ದ ಉಪವಾಸ ವ್ರತಚಾರಣೆಯನ್ನು ಕ್ರೈಸ್ತರು ಶುಕ್ರವಾರ ಕೊನೆಗೊಳಿಸುವ ಮೂಲಕ ಶುಭ ಶುಕ್ರವಾರವನ್ನು ಆಚರಿಸಿದರು.

ಶುಕ್ರವಾರ ಬೆಳಿಗ್ಗೆ 11 ಗಂಟೆಯಿಂದಲೇ ಚರ್ಚ್‌ಗಳಲ್ಲಿ ಸೇರಿದ ಕ್ರೈಸ್ತರು ಮಧ್ಯಾಹ್ನ ಮೂರು ಗಂಟೆವರೆಗೆ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಮೆಥೋಡಿಸ್ಟ್‌ ಚರ್ಚ್‌: ನಗರದ ಕೇಂದ್ರ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಶುಭ ಶುಕ್ರವಾರದ ವಿಶೇಷ ಆರಾಧನೆಯನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಮೇಲ್ವಿಚಾರಕ ರೆವ.ಎಸ್‌.ಸತ್ಯಮಿತ್ರ, ಸಹಾಯಕ ಸಭಾಪಾಲಕ ರೆವ.ಎಸ್‌.ಯೇಸುನಾಥ ನಂಬಿ ಅವರ ನೇತೃತ್ವದಲ್ಲಿ ಆರಾಧನೆ ಕೂಟ ನಡೆಯಿತು.

ವಿಶೇಷ ಬೋಧನೆ ನೀಡಿದ ಸಭಾಪಾಲಕರು, ‘ಯೇಸು ಕ್ರಿಸ್ತನು ಪಾಪಿಗಳಿಗಾಗಿ ಸತ್ತು ಮೂರನೇ ದಿನದಲ್ಲಿ ಎದ್ದುಬಂದಿದ್ದಾರೆ. ಶಿಲುಬೆ ಮೇಲೆ ಸತ್ತಿರುವ ಸ್ಮರಣಾರ್ಥ ಶುಭ ಶುಕ್ರವಾರ ಆಚರಣೆ ಮಾಡಲಾಗುತ್ತಿದೆ. ಯೇಸು ಕ್ರಿಸ್ತನ ತ್ಯಾಗ, ಬಲಿದಾನ, ಕ್ಷಮಾಪಣೆ, ಸ್ಮರಣೆ ಮಾಡುವ ಮೂಲಕ ಕ್ರೈಸ್ತರು ಶುಭ ಶುಕ್ರವಾರ ಆರಾಧನೆಯಲ್ಲಿ ಭಾಗವಹಿಸಿದ್ದಾರೆ. ಆತನ ಆದರ್ಶಗಳನ್ನು ಪಾಲಿಸಬೇಕು’ ಎಂದು ಕರೆ ನೀಡಿದರು.

ತಾತಾ ಸೀಮಂಡ್ಸ್ ಸ್ಮಾರಕ ಮೆಥೋಡಿಸ್ಟ್ ಚರ್ಚ್: ನಗರದ ಹೊಸಳ್ಳಿ ಕ್ರಾಸ್ ಸಮೀಪದ ತಾತಾ ಸೀಮಂಡ್ಸ್ ಸ್ಮಾರಕ ಮೆಥೋಡಿಸ್ಟ್ ಚರ್ಚ್‌ನಲ್ಲಿ ಶುಭಶುಕ್ರವಾರ ಆರಾಧನೆ ಸಭಾಪಾಲಕ ರೆವ.ಎ.ಸ್ಯಾಮ್ಸನ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಂದೇಶ ನೀಡಿದ ಅವರು, ಯೇಸು ಕ್ರಿಸ್ತನ ಶ್ರಮೆ, ಮರಣ, ಪುನರುತ್ಥಾನ, ಸಪ್ತ ವಾಕ್ಯಗಳ ಕುರಿತಾಗಿ ವಿವರ ನೀಡಿದರು.

ಅಂಬೇಡ್ಕರ್‌ ನಗರದ ಮೆಥೋಡಿಸ್ಟ್‌ ಚರ್ಚ್‌ ಸೇರಿದಂತೆ ಸ್ವತಂತ್ರ ಚರ್ಚ್‌ಗಳಲ್ಲಿ ಸಭಾಪಾಲಕರು ಶುಭ ಶುಕ್ರವಾರ ಆಚರಣೆ ಮಾಡಲಾಯಿತು.

ಇನ್ನೂ ಕೆಲ ಚರ್ಚ್‌ಗಳಲ್ಲಿ ಹೆಚ್ಚು ಭಕ್ತರು ಆಗಮಿಸಿದ್ದರಿಂದ ಹೊರ ಭಾಗದಲ್ಲಿ ಶಾಮಿಯಾನ ಹಾಕಲಾಗಿತ್ತು. ಕಳೆದ ಎರಡು ವರ್ಷಗಳ ಕಾಲ ಕೋವಿಡ್‌ ಕಾರಣದಿಂದ ಮಂಕಾಗಿದ್ದ ಶುಭ ಶುಕ್ರವಾರದ ಆರಾಧನೆ, ಈ ಬಾರಿ ಎಲ್ಲ ಚರ್ಚ್‌ಗಳಲ್ಲಿ ಭಕ್ತರು ತುಂಬಿದ್ದರು. ಕಳೆದ ಭಾನುವಾರದಿಂದ ಈ ವಾರವನ್ನು ಪವಿತ್ರವಾರವೆಂದು ಆಚರಣೆ ಮಾಡಲಾಗುತ್ತಿದೆ.

ಸಪ್ತ ವಾಕ್ಯಗಳ ಧ್ಯಾನ: ಯೇಸು ಕ್ರಿಸ್ತನು ಶಿಲುಬೆ ಮೇಲೆ ಆಡಿದ ಏಳು ವಾಕ್ಯಗಳನ್ನು ಚರ್ಚ್‌ನಲ್ಲಿ ಭಕ್ತರು ಧ್ಯಾನ ಮಾಡುವ ಮೂಲಕ ಯೇಸುವನ್ನು ಸ್ಮರಿಸಿದರು. ವಿಶೇಷ ಹಾಡುಗಳನ್ನು ಹಾಡಿದರು.

ನಂತರ ವಿಶೇಷ ಬೋಧನೆ ನೀಡಿದ ಸಭಾಪಾಲಕರು, ‘ಯೇಸುಕ್ರಿಸ್ತನು 40 ದಿನ ಹಗಲಿರುಳು ಉಪವಾಸ ಇದ್ದ ಅಂಗವಾಗಿ ಕ್ರೈಸ್ತರು ಉಪವಾಸ ವ್ರತ ಕೈಗೊಳ್ಳುತ್ತಾರೆ. ಅದರಂತೆ ಪ್ರತಿದಿನ ಸಂಜೆ ಭಕ್ತರ ಮನೆಗಳಲ್ಲಿ ತೆರಳಿ ಪ್ರಾರ್ಥನೆ ಮಾಡಲಾಯಿತು. ಅಂದಿನ ರೋಮ್‌ ಸರ್ಕಾರದಲ್ಲಿ ಯೇಸು ಕ್ರಿಸ್ತನನ್ನು ಶಿಲುಬೆಗೆ ಹಾಕಿದ ಸ್ಮರಣಾರ್ಥ ಶುಭಶುಕ್ರವಾರ ಆಚರಿಸಲಾಗುತ್ತಿದೆ’ ಎಂದರು.

‘ಯೇಸು ಕ್ರಿಸ್ತನು ಶಿಲುಬೆ ಮೇಲೆ ಏಳು ಮಾತುಗಳನ್ನು ಭಕ್ತರು ಧ್ಯಾನ ಮಾಡಿದರು. ಆ ಮೂಲಕ ಯೇಸಯ ಕ್ರಿಸ್ತನ ಮರಣವನ್ನು ಸ್ಮರಿಸಲಾಯಿತು’ ಎಂದು ತಿಳಿಸಿದರು.

ಶುಕ್ರವಾರ ಮಧ್ಯಾಹ್ನ 3 ಗಂಟೆಯ ನಂತರ ಉಪವಾಸ ವ್ರತಕೊನೆಗೊಳಿಸಿ ಅಲ್ಪ‍ ಉಪಾಹಾರ ಸೇವನೆ ಮಾಡಿದರು. ಕೆಲ ಕಡೆ ಸಿರಾ, ಉಪ್ಪಿಟ್ಟು, ಮಜ್ಜಿಗೆ, ಹಣ್ಣಿನ ರಸ, ಹಣ್ಣು ಹಂಪಲು ವಿತರಿಸಲಾಯಿತು.

ಭಾನುವಾರ ಪುನರುತ್ಥಾನ ಹಬ್ಬ: ಶುಭ ಶುಕ್ರವಾರ ಯೇಸು ಕ್ರಿಸ್ತನು ಶಿಲುಬೆ ಮೇಲೆ ಮರಣ ಹೊಂದಿರುವ ದಿನವಾಗಿದೆ. ಭಾನುವಾರ ಸಮಾಧಿಯಿಂದ ಎದ್ದೇಳುವ ಪುನರುತ್ಥಾನ ಹಬ್ಬವನ್ನು ಆಚರಿಸಲಾಗುತ್ತದೆ. ಭಾನುವಾರ ಬೆಳಿಗ್ಗೆ 5 ಗಂಟೆಗೆ ಸುರ್ಯೋದಯ ಆರಾಧನೆ, ನಂತರ 9.30ಕ್ಕೆ ಪುನರುತ್ಥಾನದ ಹಬ್ಬವನ್ನು ಆಚರಿಸಲಾಗುತ್ತಿದೆ.

ಸುರಪುರ: ಚರ್ಚ್‌ನಲ್ಲಿ ಪ್ರಾರ್ಥನೆ

ಸುರಪುರ: ಇಲ್ಲಿಯ ಮೆಥೋಡಿಸ್ಟ್ ಚರ್ಚ್‍ನಲ್ಲಿ ಶುಕ್ರವಾರ ಗುಡ್ ಫ್ರೈಡೇ ಆಚರಿಸಲಾಯಿತು.

ಯೇಸು ಸ್ವಾಮಿ ತನ್ನ ಅಂತಿಮ ದಿನದಲ್ಲಿ ಶಿಲುಬೆಯ ಮೇಲೆ ನುಡಿದ ತಂದೆಯೇ ಅವರನ್ನು ಕ್ಷಮಿಸಿ, ಇವತ್ತೇ ನೀನು ನನ್ನ ಸಂಗ ಪರದೈಸಿಯಲ್ಲಿರುವೆ. ಅಮ್ಮಾ ಇಗೂ ನಿನ್ನ ಮಗನು, ನನ್ನ ದೇವರೆ, ನನ್ನ ದೇವರೆ ಯಾಕೆ ನನ್ನನ್ನು ಕೈಬಿಟ್ಟಿ, ನನಗೆ ನೀರಡಿಕೆಯಾಗಿದೆ. ತೀರಿತು, ತಂದಯೇ ನನ್ನ ಆತ್ಮವನ್ನು ನಿನಗೆ ಒಪ್ಪಿಸಿಕೊಡುತ್ತೇನೆ ಎಂಬ ಸಪ್ತ ವಾಕ್ಯಗಳ ಧ್ಯಾನ ಸಂದೇಶಗಳನ್ನು ಧ್ಯಾನಿಸಿದರು.

ಯೇಸು ಕ್ರಿಸ್ತನ ಪ್ರೀತಿ, ಪ್ರೇಮ, ತ್ಯಾಗ, ಕ್ಷಮಿಸುವಿಕೆ ಮುಂತಾದ ಅಂಶಗಳನ್ನು ಮೆಲುಕು ಹಾಕಿ ಪ್ರಾರ್ಥಿಸಿದರು.

ಸಭಾಪಾಲಕ ಪ್ರಕಾಶ ಹಂಚಿನಾಳ, ಭಾಸ್ಕರ್ ಮ್ಯಾಥ್ಯೂ, ಸಾಮುವೆಲ್, ಮ್ಯಾಥ್ಯೂ, ಪ್ರಭು ಕುಮಾರಿ, ಸುಕುಮಾರಿ, ಅಲಿಸ್ ಜಾನವೆಸ್ಲಿ ಮಾತನಾಡಿದರು.

ಎಸ್. ಸುನಂದಕುಮಾರ, ಸಂಪತಕುಮಾರಿ, ಜಯಪ್ಪ, ಜಾನವೆಸ್ಲಿ, ನಿರ್ಮಲ್, ಪಾಲನಾಯಕ, ವಸಂತ ಕುಮಾರ, ದೇವಪುತ್ರ, ಸೋನಾ ಸುಕುಮಾರಿ, ರಮೇಶ, ಅನಿತಾ,ಸುಮತಿ, ಲಲಿತಾ, ಸುಜಾತಾ ಹಾಗೂ ಸುನೀಲಾ ಶಾಂತಕುಮಾರ ಇದ್ದರು.

***

ಶಾಂತಪುರ: ಯೇಸು ಸಂದೇಶ ಬೋಧನೆ

ಶಾಂತಪುರ (ಕಕ್ಕೇರಾ): ಪಟ್ಟಣ ಸಮೀಪದ ಶಾಂತಪುರದ ಚರ್ಚ್‌ನಲ್ಲಿ ಗುಡ್‌ಫ್ರೈಡೇ ಆಚರಿಸಲಾಯಿತು.

ಸಭಾಪಾಲಕ ಎಂ.ಶಾಂತಪ್ಪ ಪಾಸ್ಟರ್ ಮಾತನಾಡಿ ಯೇಸುಕ್ರಿಸ್ತರು ಶಿಲುಬೆ ಮೇಲೆ ಹೇಳಿದ ಏಳು ಮಾತುಗಳ ಕುರಿತು ತಿಳಿಸಿದರು.

ಇಡೀ ದೇಶವನ್ನೇ ತಲ್ಲಣಗೊಳಿಸಿದ ಕೊರೊನಾ ನಿರ್ಮೂಲನೆಯಾಗಲಿ ಎಂದು ಪ್ರಾರ್ಥಿಸಿದರು.

ರವಿಕುಮಾರ ಸಂಸ್ಥಾನ, ಡಾ.ಸುಜಾತ ಹಟ್ಟಿ, ಡಿಜಿ ಮಿತ್ರಾ, ರಾಜಣ್ಣ ದೊಡ್ಮನಿ, ಧನರಾಜ ಹಟ್ಟಿ, ಬಾಲರಾಜ, ಮಧುಕ್ಲಿಂಟನ್, ಡಾ.ಶಾಂತಕುಮಾರ ಲಿಂಗಸುಗೂರು, ಚಂದ್ರನೀಲ ಹಟ್ಟಿ, ರೀಟಾ ಮಿತ್ರ, ಮೇರಿ ಶಾಂತಕುಮಾರ, ಅಕ್ಷಯಗೌಡ, ನಿಖಿಲಗೌಡ, ರತ್ನರಾಜ ಶಾಲಿಮನಿ, ಫಿಲಿಫ್ ದೊಡ್ಮನಿ ಸೇರಿದಂತೆ ಅನೇಕರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT