ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಿತರ ಆಶಾಕಿರಣ ಅಂಬೇಡ್ಕರ್: ಪೆದ್ದಿಲಿಂಗ ಮಹಾಸಂಸ್ಥಾನದ ಜ್ಞಾನಪ್ರಕಾಶ ಸ್ವಾಮೀಜಿ

Last Updated 1 ಮೇ 2022, 5:22 IST
ಅಕ್ಷರ ಗಾತ್ರ

ಗುರುಮಠಕಲ್: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಅವರು ನಿಜವಾದ ದೇಶ ಭಕ್ತ ಮತ್ತು ಶೋಷಿತರ ಆಶಾಕಿರಣ ಆಗಿದ್ದರು. ಅಂಥ ಮಹಾನ್ ಚೇತನರನ್ನು ಕೇವಲ ಮೆರವಣಗೆ, ಭಾವಚಿತ್ರಗಳಿಗೆ ಹಾಗೂ ಪುತ್ಥಳಿಗೆ ಮಾತ್ರ ಸೀಮಿತಗೊಳಿಸಬಾರದು ಎಂದು ಮೈಸೂರಿನ ಪೆದ್ದಿಲಿಂಗ ಮಹಾಸಂಸ್ಥಾನದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಮೈದಾನದ ಆವರಣದಲ್ಲಿ ನಡೆದ ಅಂಬೇಡ್ಕರ್‌ ಮತ್ತು ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್‌ ಅವರು ಶೋಷಿತರ ಹಕ್ಕುಗಳಿಗಾಗಿ ಮತ್ತು ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿ ದೇಶಪ್ರೇಮ ಮೆರೆದರು ಎಂದರು.

ಗುರುಮಠಕಲ್ ಮತಕ್ಷೇತ್ರವು ಪರಿಶಿಷ್ಟ ಜಾತಿ ಮೀಸಲು ಇದ್ದರೂ ಇಲ್ಲಿಂದಲೇ ಸತತವಾಗಿ ಗೆದ್ದು ರಾಜಕೀಯವಾಗಿ ಉನ್ನತ ಸ್ಥಾನಕ್ಕೆ ಬೆಳೆದರೂ ಈ ಕ್ಷೇತ್ರದಲ್ಲಿ
ಡಾ.ಬಿ.ಆರ್.ಅಂಬೇಡ್ಕರ್‌ ಅವರ ಪುತ್ಥಳಿ ಇಲ್ಲದಿರುವುದು ಇಲ್ಲಿನ ಜನರು ಯೋಚಿಸಬೇಕಾಗಿದೆ. ವ್ಯವಸ್ಥಿತವಾಗಿ ದಲಿತರನ್ನು ಗುಲಾಮಗಿರಿಯಲ್ಲೇ ಬದುಕಲು ಮತ್ತು ಮುಗ್ಧತೆಯಲ್ಲೇ ಜನರು ಇರಲು ಸಂಚು ರೂಪಿಸಿದ್ದಾರೆ ಎಂದು ಉಸ್ಮಾನಿಯ ವಿಶ್ವವಿದ್ಯಾಲಯದ ಪ್ರೊಸಿ.ಖಾಸೀಂ ಹೇಳಿದರು.

ಹೈದರಾಬಾದಿನ ಗಾಯಕ ರಾಜೇಶ ಮಾತನಾಡಿ, ಗುರುಮಠಕಲ್ ಮತಕ್ಷೇತ್ರದಲ್ಲಿ ಹಿಂದುಳಿದ ವರ್ಗ ಮತ್ತು ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಶಾಸಕರಾಗಿ ಇವರಿಬ್ಬರಲ್ಲಿ ಯಾರಾದರೊಬ್ಬರನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಮೆರವಣಿಗೆ: ಪಟ್ಟಣದ ಜಗತ್ ವೃತ್ತದಿಂದ ಪೊಲೀಸ್ ಠಾಣೆ ಮಾರ್ಗವಾಗಿ ನಾನಾಪುರ, ನಗರೇಶ್ವರ ಗುಡಿಯಿಂದ ಗಂಗಾಪರಮೇಶ್ವರ ವೃತ್ತದ ಮೂಲಕ ಬಸ್ ನಿಲ್ದಾಣ ಮುಂತಾದ ಪ್ರಮುಖ ಬೀದಿಗಳ ಮೂಲಕ ಸರ್ಕಾರಿ ಪ್ರೌಢ ಶಾಲಾ ಮೈದಾನದವರೆಗೆ ರಥ ಸಾರಥಿಯಲ್ಲಿ ಬುದ್ಧ, ಅಂಬೇಡ್ಕರ್‌ ಮತ್ತು ಬಾಬು ಜಗಜೀವನರಾಂ ಅವರ ಪುತ್ಥಳಿಯನ್ನು ಡಿಜೆ ಮೂಲಕ ನೃತ್ಯ ಮಾಡುತ್ತ ಮೆರವಣಿಗೆ ಮಾಡಿದರು.

ಈ ವೇಳೆ ರಾಜ್ಯ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುರಸಭೆ ಮತ್ತು ಸಮಿತಿ ಅಧ್ಯಕ್ಷ ಪಾಪಣ್ಣ ಮನ್ನೆ
ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಸರೆಡ್ಡಿ ಅನಪುರ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಸಂತೋಷ ಕುಮಾರ ನಿರೇಟಿ, ಡಾ.ಬಿ.ಆರ್.ಅಂಬೇಡ್ಕರ್‌ ಯುವಕ ಸಂಘದ ತಾಲ್ಲೂಕು ಅಧ್ಯಕ್ಷ ಹಣಮಂತು, ಲಕ್ಷ್ಮಪ್ಪ ಲಿಕ್ಕಿ, ತಾಲ್ಲೂಕು ಡಾ.ಬಾಬು ಜಗಜೀವನರಾಂ ಯುವಕ ಸಂಘದ ಅಧ್ಯಕ್ಷ ಭೀಮಶಪ್ಪ, ಪುರಸಭೆ ಮುಖ್ಯಾಧಿಕಾರಿ ಲಕ್ಷ್ಮೀಬಾಯಿ, ಪುರಸಭೆ ಉಪಾಧ್ಯಕ್ಷೆ ಭೀಮಮ್ಮ ಮುಕುಡಿ ವೇದಿಕೆಯಲ್ಲಿದ್ದರು.

ವೆಂಕಟೇಶ ನಿರೂಪಿಸಿದರು. ಅಂಜನೇಯ ಸ್ವಾಗತಿಸಿದರು. ಲಿಂಗಪ್ಪ ತಾಂಡೂರಕರ್ ಪ್ರಸ್ತಾವಿಕ ಮಾತನಾಡಿದರು. ಕೃಷ್ಣ ವಂದಿಸಿದರು.

ಬಾಬು ತಲಾರಿ, ಆಶನ್ನ ಬುದ್ದ, ಕೆ.ದೇವದಾಸ, ಬಾಲಪ್ಪ ಪ್ಯಾಟಿ, ಕೃಷ್ಣಾ ಚಪೆಟ್ಲಾ, ಈರಪ್ಪ ಪ್ಯಾಟಿ, ಫೈಯಾಜ್‌ ಅಹ್ಮದ್‌, ಸಂಜೀವಕುಮಾರ ಚಂದಾಪುರ, ಚಂದುಲಾಲ್‌ ಚೌದ್ರಿ, ರವಿಂದ್ರರೆಡ್ಡಿ ಸೇರಿ, ಅಶೋಕ, ನಭಿ, ವಿಜಯಕುಮಾರ ನಿರೇಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT