ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ವಿಪತ್ತು‌ ‌ನಿರ್ವಹಣೆಗೆ 'ಆಪದ್‌ ಮಿತ್ರ'

ರಾಜ್ಯದ 11 ಜಿಲ್ಲೆಗಳಲ್ಲಿ ಅಗ್ನಿಶಾಮಕ ದಳದಿಂದ ಅನುಷ್ಠಾನ, 3,400 ಪ್ರಾಶಿಕ್ಷಣಾರ್ಥಿಗಳಿಗೆ ತರಬೇತಿ
Last Updated 4 ಜುಲೈ 2022, 20:00 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಕೃಷ್ಣಾ, ಭೀಮಾ ನದಿ ಪ್ರವಾಹ ಸೇರಿದಂತೆ ಇನ್ನಿತರ ಪ್ರಾಕೃತಿಕ ವಿಪತ್ತುಗಳು ಸಂಭವಿಸಿದಾಗ ತುರ್ತಾಗಿ ಜನರಿಗೆ ರಕ್ಷಣೆ ನೀಡಲು, ಆಸ್ತಿ ಹಾಗೂ ಪ್ರಾಣ ರಕ್ಷಣೆ ಮಾಡಲು ಸಮುದಾಯದಲ್ಲಿ 24 ಗಂಟೆಗಳು ಲಭ್ಯವಿರುವಂಥ ಜನರಿಗೆ ತರಬೇತಿ ಸರ್ಕಾರ ಮುಂದಾಗಿದೆ.

ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ವತಿಯಿಂದ ರಾಜ್ಯದ 11 ಜಿಲ್ಲೆಗಳಲ್ಲಿ ವಿಪತ್ತು‌ ‌ನಿರ್ವಹಣೆಗೆ 'ಆಪದ್‌ ಮಿತ್ರ' ಅನುಷ್ಠಾನಗೊಳಿಸುತ್ತಿದೆ.

ರಾಜ್ಯದ 11 ಜಿಲ್ಲೆಗಳಾದ ಬೆಂಗಳೂರು ನಗರ, ಬಾಗಲಕೋಟೆ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕಲಬುರಗಿ, ಕೊಡಗು, ರಾಯಚೂರು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 12 ದಿನಗಳ ಕಾಲ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ಪ್ರತಿಯೊಂದು ಬ್ಯಾಚ್‌ಗೂ ತಲಾ 100 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದ್ದು 20 ಸಿಬ್ಬಂದಿ ತರಬೇತಿಗಾಗಿ ನಿಯೋಜಿಸಲಾಗಿದೆ.

ಉಚಿತ ಊಟ, ವಸತಿ: 12 ದಿನ ಸರ್ಕಾರದಿಂದ ಉಚಿತ ಊಟ, ವಸತಿ ಕಲ್ಪಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ತರಬೇತಿ ನಡೆಯಲಿದೆ.

ಬೆಂಗಳೂರು ನಗರದಲ್ಲಿ ಮಾತ್ರ 5 ತಂಡ ಮಾಡಲಾಗಿದೆ. ಉಳಿದ ಕಡೆ ಮೂರು ತಂಡಗಳನ್ನು ಮಾಡಲಾಗಿದೆ.

12ದಿನಗಳ ತರಬೇತಿ ಪಡೆದಿದ್ದಕ್ಕಾಗಿ ಪ್ರಾಶಿಕ್ಷಣಾರ್ಥಿಗಳಿಗೆ ಪ್ರಮಾಣ ಮತ್ತು ಗುರುತಿನ ಚೀಟಿಯನ್ನು ವಿತರಿಸಲಾಗುತ್ತಿದೆ.

ಎಲ್ಲೆಲ್ಲಿ ತರಬೇತಿ: ಬೆಂಗಳೂರು ನಗರದಲ್ಲಿ ಶೇಷಾದ್ರಿಪುರಂ ಪೊಲೀಸ್‌ ಸ್ಟೇಷನ್‌ ಪಕ್ಕ, ಬಾಗಲಕೋಟೆಯಲ್ಲಿ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ವಿದ್ಯಾಗಿರಿ, ದಕ್ಷಿಣ ಕನ್ನಡ (ಮಂಗಳೂರು) ನ್ಯಾಷನಲ್‌ ಇಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ ಸುರತ್ಕಲ್‌, ಚಿಕ್ಕಮಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ತರಬೇತಿ ಕೇಂದ್ರ ತೋಗೂರು ಟೌನ್‌, ಕಲಬುರಗಿಯ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಸೇಡಂ ರಸ್ತೆ, ಕೊಡಗು (ಮಡಿಕೇರಿ) ಡಯಟ್‌ ಕುಶಾಲನಗರ, ರಾಯಚೂರು ಕೃಷಿ ವಿಶ್ವವಿದ್ಯಾಲಯ, ಶಿವಮೊಗ್ಗ ಜೆಎನ್‌ಎನ್‌ಸಿಇ ಕಾಲೇಜು, ಉಡುಪಿ ಪ್ರಗತಿ ಸೌಧ ಎಸ್‌ಡಿಎಂ ತರಬೇತಿ ಶಾಲೆ, ಉತ್ತರ ಕನ್ನಡ (ಕಾರವಾರ) ದಿವೇಕರ್‌ ವಾಣಿಜ್ಯ ಮಹಾವಿದ್ಯಾಲಯ ಎನ್‌ಎಚ್‌ 66, ಕೋಡಿಬಾಗ, ಯಾದಗಿರಿ ಜಿಲ್ಲೆಯಲ್ಲಿ ಕೈ ಮಗ್ಗ ಮತ್ತು ಜವಳಿ ಕಟ್ಟಡ ಬಂದಳ್ಳಿಯಲ್ಲಿ ತರಬೇತಿ ನಡೆಯಲಿದೆ.

ಯಾವಾಗನಿಂದ ತರಬೇತಿ: ಆಪದ್‌ ಮಿತ್ರ ತರಬೇತಿಯೂ ಜೂನ್‌ 20ರಿಂದ ಮೊದಲ ತಂಡ ಆರಂಭವಾಗಿದೆ. ಜುಲೈ 2ರ ವರಗೆ ಮುಕ್ತಾಯವಾಗಿದೆ. ಎರಡನೇ ತಂಡ ಜುಲೈ 4ರಿಂದ 16, ಮೂರನೇ ತಂಡ 18ರಿಂದ 30, ನಾಲ್ಕನೇ ತಂಡ ಆಗಸ್ಟ್‌ 1ರಿಂದ 13, ಆಗಸ್ಟ್‌ 16ರಿಂದ 29 ರವರೆಗೆ ಐದನೇ ತಂಡದ ತರಬೇತಿ ನಡೆಯಲಿದೆ.

ತರಬೇತಿಗಾಗಿ ಜಿಲ್ಲಾ ಅಗ್ನಿ ಶಾಮಕದಳ ಅಧಿಕಾರಿ, ಅಗ್ನಿಶಾಮಕ ಠಾಣಾಧಿಕಾರಿ, ಗೃಹ ರಕ್ಷಕ ಇಲಾಖೆಯ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

****

ಜಿಲ್ಲೆಯಲ್ಲಿ 300 ಜನರಿಗೆ ತರಬೇತಿ

'ಆಪದ್‌ ಮಿತ್ರ' ಯೋಜನೆಗೆ ಜಿಲ್ಲೆಯನ್ನು ಆಯ್ಕೆ ಮಾಡಿದ್ದರಿಂದ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ 300 ಜನರಿಗೆ ಆಪದ್‌ ಮಿತ್ರ ತರಬೇತಿಯನ್ನು ಜಿಲ್ಲಾಡಳಿತ ಮತ್ತು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆ ಸಹಯೋಗದಲ್ಲಿ ತಾಲ್ಲೂಕಿನ ಬಂದಳ್ಳಿ ಗ್ರಾಮದ ಹತ್ತಿರ ಇರುವ ಕೈ ಮಗ್ಗ ಮತ್ತು ಜವಳಿ ಇಲಾಖೆ ಕಟ್ಟಡದಲ್ಲಿ 100 ಜನ ಸ್ವಯಂ ಸೇವಕರ ಮೊದಲ ತರಬೇತಿ ತಂಡ ಜೂನ್‌ 20ರಿಂದ ಜುಲೈ 2ರವರೆಗೆ ನಡೆಯಿತು.

ಈ ತರಬೇತಿಗೆ ಜಿಲ್ಲೆಯ ಜನರು ಸ್ವಯಂ ಸೇವಕರಾಗಿ ಸೇರಲು ಇಚ್ಛಿಸುವ ಅಭ್ಯರ್ಥಿಗಳು ಜುಲೈ 4 ರಂದು ಬೆಳಿಗ್ಗೆ 10ಕ್ಕೆ ಯಾದಗಿರಿ ತಾಲ್ಲೂಕಿನ ಬಂದಳ್ಳಿ ಗ್ರಾಮದ ಹತ್ತಿರ ಇರುವ ಕೈ ಮಗ್ಗ ಮತ್ತು ಜವಳಿ ಇಲಾಖೆ ಕಟ್ಟಡದಲ್ಲಿ ತರಬೇತಿಗೆ ಹಾಜರಾಗಬಹುದು ಅಥವಾ ಜಿಲ್ಲಾ ಅಗ್ನಿಶಾಮಕ ಅಧಿಕಾರಿ 7975603663 ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಬಹುದು.

***

ಈಗಾಗಲೇ ಆಪದ್‌ ಮಿತ್ರ ತರಬೇತಿಗೆ ಜಿಲ್ಲೆಯಿಂದ 100 ಜನರ ತಂಡಕ್ಕೆ ತರಬೇತಿ ನೀಡಲಾಗಿದೆ. ಯಾದಗಿರಿ ತಾಲ್ಲೂಕಿನ 40, ಸುರಪುರ 30, ಶಹಾಪುರ 10, ಹುಣಸಗಿ 10, ಗುರುಮಠಕಲ್‌ ತಾಲ್ಲೂಕಿನ 10 ಜನರು ತರಬೇತಿ ಪಡೆದಿದ್ದಾರೆ
ಹನುಮನಗೌಡ ಪೊಲೀಸ್ ಪಾಟೀಲ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT