ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಂಭಾವಿ: ಕಸಾಪ ಪದಾಧಿಕಾರಿಗಳ ನೇಮಕ

Published : 15 ಆಗಸ್ಟ್ 2024, 15:42 IST
Last Updated : 15 ಆಗಸ್ಟ್ 2024, 15:42 IST
ಫಾಲೋ ಮಾಡಿ
Comments

ಕೆಂಭಾವಿ: ಇತ್ತೀಚಿಗೆ ಪಟ್ಟಣದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಕೆಂಭಾವಿ ವಲಯ ಕನ್ನಡ ಸಾಹಿತ್ಯ ಪರಿಷತ್‍ನ ಮೊದಲ ಸಭೆ ಗುರುವಾರ ಪಟ್ಟಣದ ಸ್ಪಂದನ ಶಾಲೆಯಲ್ಲಿ ನಡೆಯಿತು.

ವಲಯ ಕಸಾಪ ಅಧ್ಯಕ್ಷ ಮಡಿವಾಳಪ್ಪ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ  ಸಭೆಯಲ್ಲಿ ಸಾಹಿತ್ಯ ಪರಿಷತ್‍ನ ಚಟುವಟಿಕೆ, ಸಾಹಿತ್ಯ ಸಮ್ಮೇಳನ, ಸದಸ್ಯರ ನೋಂದಣಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಆ. 31 ರಂದು ಪಟ್ಟಣದಲ್ಲಿ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಅದ್ದೂರಿಯಾಗಿ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ನಂತರ ವಲಯ ಕಸಾಪ ಘಟಕಕ್ಕೆ ಇನ್ನುಳಿದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ವಿಜಯಾಚಾರ್ಯ ಪುರೋಹಿತ ಸ್ವಾಗತಿಸಿದರು. ಡಿ.ಸಿ.ಪಾಟೀಲ ವಂದಿಸಿದರು.

ಸುಮಿತ್ರಪ್ಪ ಅಂಗಡಿ (ಗೌರವಾಧ್ಯಕ್ಷ), ಮಡಿವಾಳಪ್ಪ ಪಾಟೀಲ (ಅಧ್ಯಕ್ಷ), ಗುಂಡಭಟ್ಟ ಜೋಷಿ (ಗೌರವ ಕಾರ್ಯದರ್ಶಿ), ಬಂದೇನವಾಜ ನಾಲತವಾಡ (ಕಾರ್ಯದರ್ಶಿ), ವಿಜಯಾಚಾರ್ಯ ಪುರೋಹಿತ (ಕೋಶಾಧ್ಯಕ್ಷ), ಮಲ್ಲನಗೌಡ ಪಾಟೀಲ (ಸಹ ಕಾರ್ಯದರ್ಶಿ), ಮಹಿಪಾಲರೆಡ್ಡಿ ಡಿಗ್ಗಾವಿ (ಖಜಾಂಚಿ), ಪಾರ್ವತಿ ಬೂದೂರ (ಮಹಿಳಾ ಪ್ರತಿನಿಧಿ), ರಂಗಪ್ಪ ವಡ್ಡರ (ಪ.ಜಾ ಪ್ರತಿನಿಧಿ), ನಂದಪ್ಪ ಕವಾಲ್ದಾರ (ಪ.ಪಂ ಪ್ರತಿನಿಧಿ), ಜಟ್ಟೆಪ್ಪ ಪೂಜಾರಿ (ಹಿಂದುಳಿದ ವರ್ಗ ಪ್ರತಿನಿಧಿ), ಇಲಿಯಾಸ ವಡಕೇರಿ (ಅಲ್ಪಸಂಖ್ಯಾತರ ಪ್ರತಿನಿಧಿ), ರವೀಂದ್ರ ಧರಿ ಪಿಯು ಕಾಲೇಜು ಪ್ರಾಚಾರ್ಯರು (ಆಡಳಿತಾಧಿಕಾರಿ) ಅವರನ್ನು ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT