ಮಂಗಳವಾರ, ಸೆಪ್ಟೆಂಬರ್ 21, 2021
28 °C

ಕೊಲೆ ನಡೆದ 18 ಗಂಟೆಯಲ್ಲೇ ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಗಿ(ಕೆ) (ಶಹಾಪುರ): ಗ್ರಾಮದ ಕಾಸಿಂಸಾಬ್ ಚಂದಾಸಾಬ್ ಚೌದ್ರಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಆರೋಪಿ ಮಹ್ಮದ ಹನೀಫ್ ಇಮಾಮಸಾಬ್ ಚೌದ್ರಿಯನ್ನು 18 ಗಂಟೆಯಲ್ಲಿ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದರು.

ತಾಲ್ಲೂಕಿನ ಗೋಗಿ(ಕೆ) ಗ್ರಾಮದ ಯಾದವ ಕಲ್ಯಾಣ ಮಂಟಪಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಕೊಲೆಯಾದ ಕಾಸಿಂಸಾಬ್ ಆರೋಪಿಯ ಚಿಕ್ಕಪ್ಪನಾಗಬೇಕು. ಬಾನಾಮತಿ ಮಾಡಿಸಿದ್ದರಿಂದ ನನ್ನ ತಾಯಿ ಬಸೀರಾಬೇಗಂ 7 ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಈಗಲೂ ನನ್ನ ಮೇಲೆ ಬಾನಾಮತಿ ಮಾಡಿಸುತ್ತಿದ್ದ. ನಾಲವಾತವಾಡ ಗ್ರಾಮದಲ್ಲಿ ನನ್ನ ಅತ್ತೆಯ ಮಗಳನ್ನು ನನ್ನ ಅಣ್ಣ ಚಾಂದಪಾಶನಿಗೆ ತೆಗೆದು ಮದುವೆ ಮಾಡಿಸುವ ನಿರ್ಧಾರ ಮಾಡಿದ್ದೆವು. ಅದಕ್ಕೂ ಕಾಸಿಂ ಅಡ್ಡಗಾಲು ಹಾಕಿ ಮದುವೆ ಮರಿದು ಹಾಕಿಸಿದ್ದ. ಇವೆಲ್ಲ ಕೌಟಂಬಿಕ ಕಲಹದಿಂದ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾರೆ. ಆರೋಪಿ ಸಂಬಂಧಿಕರು ಆಗಿದ್ದರಿಂದ ಕೊಲೆ ಮಾಡಿರುವುದು ಗೊತ್ತಾಗಬಾರದು ಎಂದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ. ಅನುಮಾನಗೊಂಡ ಪೊಲೀಸರು ಕರೆ ತಂದು ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅವರು ಮಾಹಿತಿ ನೀಡಿದರು.

ಕೊಲೆ ಆರೋಪಿಯನ್ನು ಬಂಧಿಸಿಲು ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ಮಾರ್ಗದರ್ಶನದಲ್ಲಿ ಸಿಪಿಐ ಶ್ರೀನಿವಾಸ ಅಲ್ಲಾಪುರೆ ಹಾಗೂ ತನಿಖಾ ವಿಭಾಗದ ಪಿಎಸ್ಐ ಸೋಮಲಿಂಗಪ್ಪ, ಸಂತೋಷ ರಾಠೋಡ ಸೇರಿದಂತೆ ಪೊಲೀಸ್ ಸಿಬ್ಬಂದಿಯ 4 ವಿಶೇಷ ತಂಡವನ್ನು ರಚಿಸಲಾಗಿತ್ತು. ತ್ವರಿತಗತಿಯಲ್ಲಿ ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆಯನ್ನು ಯಶ್ವಸಿಗೊಳಿಸಿದ ಪೊಲೀ‌ಸ್ ಸಿಬ್ಬಂದಿಯನ್ನು ಅವರು ಶ್ಲಾಘಿಸಿದರು.

ಬುಧವಾರ ಬೆಳಗಿನ ಜಾವ ನಮಾಜಿಗೆ ಹೋಗುವಾಗ ಕಾಸಿಂಸಾಬ್ ಅವರನ್ನು ಮುಚ್ಚಿನಿಂದ ಹೊಡೆದು ಕೊಲೆ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು