ಸುರಪುರ: ಭೀಮಾ ತೀರ ಮಾಸ ಪತ್ರಿಕೆಯ ಸಂಪಾದಕ ಮಹಾದೇವ ಬೊಮ್ಮನಳ್ಳಿ ಅವರಿಗೆ ಬಾಗಲಕೋಟೆ ಜಿಲ್ಲೆ ಹಾಗೂ ಬೀಳಗಿ ತಾಲೂಕು ಘಟಕ ಕಾರ್ಯನಿರತ ಪತ್ರಕರ್ತರ ಸಂಘವು ರಾಜ್ಯ ಮಟ್ಟದ ಮಾಧ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಇತ್ತೀಚೆಗೆ ಬೀಳಗಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೀಳಗಿ ಬ್ರಹನ್ಮಠದ ಶಿವಾನಂದ ದೇವರು, ಸಂಘಟನೆಯ ರಾಜ್ಯಾಧ್ಯಕ್ಷ ಎಮ್.ಎ.ಮಾಲಬಾವಡಿ, ಜಿಲ್ಲಾಧ್ಯಕ್ಷ ರಾಜೇಂದ್ರ ದಂಧರಗಿ ಇದ್ದರು. ಮಹಾದೇವ ಬೊಮ್ಮನಹಳ್ಳಿ ಜತೆ ಸತ್ಯಚಕ್ರ ಮಾಸ ಪತ್ರಿಕೆಯ ಸಂಪಾದಕ ಪರಮಾನಂದ ಛಲವಾದಿ ಹಾಗೂ ಜನಾಕ್ರೋಶ ಮಾಸ ಪತ್ರಿಕೆಯ ಸಂಪಾದಕ ಲಕ್ಷ್ಮಮಣ ನಾಯಕ ಅವರಿಗೂ ಪ್ರಶಸ್ತಿ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.