ಶುಕ್ರವಾರ, ಆಗಸ್ಟ್ 12, 2022
21 °C

ಕೋವಿಡ್‌ನಿಂದ ಮುಕ್ತವಾಗಲು ಹರಕೆ ಹೊತ್ತಿದ್ದ ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ರಾಜ್ಯದ ಉಪಮುಖ್ಯಮಂತ್ರಿಯನ್ನಾಗಿ ಮಾಡು ಎಂದು ಆರೋಗ್ಯ ಸಚಿವ ಶ್ರೀರಾಮುಲು ಜಿಲ್ಲೆಯ ವಡಗೇರಾ ತಾಲ್ಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿಗೆ ಪತ್ರ ಬರೆದಿರುವ ವಿಚಾರ ಈಗ ಸಾಕಷ್ಟು ರಾಜಕೀಯ ಕಾರಣಗಳಿಗೆ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ರಾಜ್ಯದಲ್ಲಿ ಸದ್ಯ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಇನ್ನಿತರ ವಿಚಾರಗಳು ಮುನ್ನೆಲೆಗೆ ಬಂದಿವೆ. ಇಂಥ ವೇಳೆ ಆರೋಗ್ಯ ಸಚಿವ ಶ್ರೀರಾಮುಲು ಅವರು ‘ನನ್ನನ್ನು ಡಿಸಿಎಂ’ ಮಾಡು ತಾಯಿ ಎಂದು ದೇವಿ ಮೊರೆ ಹೋಗಿದ್ದಾರೆ.

‘ಶ್ರೀರಾಮುಲು ಡಿಸಿಎಂ ಕರ್ನಾಟಕ ಸರ್ಕಾರ ಕಡ್ಡಾಯ’ ಎಂದು ಒಂದು ಹಾಳೆಯಲ್ಲಿ ಬರೆದು ದುರ್ಗಾದೇವಿ ಪಾದದ ಬಳಿ ಇಟ್ಟು ಪೂಜೆ ಮಾಡಿಸಿದ್ದಾರೆ.

ಈ ಕುರಿತು ದೇವಸ್ಥಾನದ ಮರೆಪ್ಪ ಪೂಜಾರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ ‘ ಶ್ರೀರಾಮುಲು ಕೋವಿಡ್‌ನಿಂದ ಮುಕ್ತವಾಗಲು ಹರಿಕೆ ಹೊತ್ತುಕೊಂಡಿದ್ದರು. ಅದನ್ನು ತೀರಿಸಲು ಬಂದಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಇಲ್ಲಿಗೆ ಬಂದು ಹೋದ ನಂತರವೇ ಅವರಿಗೆ ಅಧಿಕಾರ ಸಿಕ್ಕಿದೆ. ಇದೆಲ್ಲ ದೇವಿ ಮಹಿಮೆ’ ಎಂದರು.

ಈ ಹಿಂದೆ ಡಿ.ಕೆ.ಶಿವಕುಮಾರ ಅವರು ಗೋನಾಲ ಗ್ರಾಮಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದರು. ತಮ್ಮನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವಂತೆ ಶಿವಕುಮಾರ್ ಪತ್ರ ಬರೆದಿದ್ದರು ಎನ್ನಲಾಗಿದೆ. ಈಗ ಶ್ರೀರಾಮುಲು ಅವರು ದೇವಿಯ ದರ್ಶನ ಪಡೆದು ತಮ್ಮನ್ನು ಡಿಸಿಎಂ ಮಾಡುವಂತೆ ಕೇಳಿಕೊಂಡಿದ್ದಾರೆ. ದೇವಿಯ ಮುಂದೆ ನಾನು ಪ್ರಾರ್ಥಿಸಿದ್ದನ್ನು ಸಾರ್ವಜನಿಕವಾಗಿ ಪ್ರಕಟಿಸಬಾರದು ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು